ಚಾಮರಾಜನಗರ, ಜ.12- ಇಲ್ಲಿನ ಸಿಇಎನ್ ಠಾಣೆಗೆ ನ್ಯಾಯಾಧೀಶರು ಭೇಟಿ ನೀಡಿದ ವೇಳೆ ಬಾಗಿಲು ಮುಚ್ಚಿದ್ದರಿಂದ ಪೊಲೀಸ್ ಇನ್ಸ್ಪೆಕ್ಟರ್ರನ್ನು ಅಮಾನತು ಮಾಡಲಾಗಿದೆ. ಸಿಇಎನ್ (ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ ತಡೆ) ಪೊಲೀಸ್ ಇನ್ಸ್ಪೆಕ್ಟರ್ ನಂಜಪ್ಪ ಅಮಾನತುಗೊಂಡವರು.
ನ್ಯಾಯಾಧೀಶರಾದ ಗಣಪತಿ ಗುರುಸಿದ್ದಪ್ಪ ಬಾದಾಮಿ ಅವರು ಸಿಇಎನ್ ಪೊಲೀಸ್ ಠಾಣೆಗೆ ಕಳೆದ 3ರಂದು ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಠಾಣೆಯಲ್ಲಿ ಯಾರೂ ಇಲ್ಲದೆ ಬಾಗಿಲು ಹಾಕಲಾಗಿತ್ತು.
ಈ ರೀತಿ ಠಾಣೆಗೆ ಬಾಗಿಲು ಹಾಕಿದರೆ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲದೆ ದೂರು ಕೊಡಲು ಬರುವವರು ಏನು ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಮ್ಮ ಭೇಟಿ ಬಗ್ಗೆ ವರದಿ ಕೊಟ್ಟಿದ್ದರು.
ನ್ಯಾಯಾೀಶರ ವರದಿಯನ್ನು ಗಮನಿಸಿ ಕರ್ತವ್ಯಲೋಪದ ಆಧಾರದಲ್ಲಿ ಇನ್ಸ್ಪೆಕ್ಟರ್ ಅವರನ್ನು ಅಮಾನತುಮಾಡಿ ಮುಂದಿನ ತನಿಖೆಗೆ ಆದೇಶಿಸಲಾಗಿದೆ.
