ಕೇಂದ್ರ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಸಾವಿನ ಪ್ರಕರಣ : ಮೂವರು ವಶಕ್ಕೆ

Social Share

ಮೈಸೂರು, ನ. 7- ನಗರದ ಮಾನಸಗಂಗೋತ್ರಿ ಕ್ಯಾಂಪಸ್ಸಿನಲ್ಲಿ ಕಾರು ಡಿಕ್ಕಿಯಾಗಿ ಮೃತಪಟ್ಟ ಕೇಂದ್ರ ಗುಪ್ತಚರ ಇಲಾಖೆ (ಇಂಟಲಿಜೆನ್ಸ್ ಬ್ಯುರೋ) ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ ಸಾವಿನ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ನ್ಯಾಯ ಕೇಳಿದ್ದಕ್ಕೆ ಕುಲಕರ್ಣಿ ಅವರ ಕೊಲೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನಾ ಸಂಬಂಧ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಆವರಣದಲ್ಲಿ ವಾಯುವಿಹಾರಕ್ಕೆ ನಿರ್ಬಂಧ ಹಾಕಲಾಗಿದೆ. ಬೆಳಗ್ಗೆ ಹಾಗೂ ಸಂಜೆ ಈ ಕ್ಯಾಂಪಸ್‍ನಲ್ಲಿ ವಾಯುವಿಹಾರಕ್ಕೆ ಅವಕಾಶ ಇಲ್ಲ ಎಂದು ವಿವಿ ಪ್ರಕಟಣೆ ತಿಳಿಸಿದೆ.

ನಗರದ ಶಾರದಾದೇವಿನಗರದ ವಾಸಿ ಕುಲಕರ್ಣಿ ಅವರು ಪ್ರತಿನಿತ್ಯದಂತೆ ವಾಯುವಿಹಾರ ಮಾಡಲು ನ. 4ರಂದು ಸಂಜೆ 5 ಗಂಟೆಗೆ ಮನೆಯಿಂದ ಹೊರಟು, ಕಾರು ಚಾಲಕನೊಂದಿಗೆ ಮಾನಸಗಂಗೋತ್ರಿ ಕ್ಯಾಂಪಸ್‍ಗೆ ಬಂದಿದ್ದಾರೆ.

ಮಾಮೂಲಿಯಂತೆ ಕಾರನ್ನು ನಿಲ್ಲಿಸಿ, ಚಾಲಕನನ್ನು ಕಾರಿನ ಬಳಿಯೇ ಇರಲು ಹೇಳಿ. ವಾಕ್ ಮಾಡಲು ಹೋಗಿದ್ದಾರೆ. ಹೀಗೆ ವಾಕ್ ಮಾಡುತ್ತಾ, ಕ್ಯಾಂಪಸಿನ ಬಯೋ ಟೆಕ್ನಾಲಜಿ ಡಿಪಾಟ್ರ್ಮೆಂಟ್ ಬಳಿ ಹೋಗುವಾಗ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ತಕ್ಷಣ ಆಸ್ಪತ್ರೆಗೆ ಸೇರಿದಾಗ್ಯೂ ತಲೆಗೆ ತೀವ್ರವಾದ ಪೆಟ್ಟಾದ ಕಾರಣ ಅವರು ಮೃತಪಟ್ಟಿದ್ದಾರೆ.

ಕ್ಯಾಂಪಸ್ ನಲ್ಲಿದ್ದ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ನೋಂದಣಿ ಸಂಖ್ಯೆ ಇಲ್ಲದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿರುವುದು ಕಂಡು ಬಂದಿದೆ.

BIG NEWS : ಆರ್ಥಿಕ ದುರ್ಬಲರಿಗೆ ಶೇ.10ರಷ್ಟು ಮೀಸಲಾತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್

ನ್ಯಾಯ ಕೇಳಿದ್ದಕ್ಕೆ ಕೊಲೆಯಾದ್ರಾ ?: ಕುಲಕರ್ಣಿ ಅವರ ಮನೆಯ ಬಳಿ ಸ್ವಲ್ಪವೂ ಅಂತರ ಬಿಡದೆ ಮಾದಪ್ಪ ಎಂಬವರು ಕಾನೂನು ಬಾಹಿರವಾಗಿ ಮತ್ತು ಮಹಾನಗರ ಪಾಲಿಕೆ ಬೈಲಾದ ವಿರುದ್ಧವಾಗಿ ಮನೆ ಕಟ್ಟಿದ್ದರು.
ಮನೆಯನ್ನು ಕಟ್ಟುವ ಹಂತದಲ್ಲಿಯೇ ಜಾಗ ಬಿಡುವಂತೆ ಕುಲಕರ್ಣಿ ಅವರು ಮಾದಪ್ಪನವರನ್ನು ಕೇಳಿದ್ದರು.

ಆದರೆ, ಈ ಕೋರಿಕೆಯನ್ನು ಮಾದಪ್ಪ ತಿರಸ್ಕರಿಸಿದ್ದರು. ಹೀಗಾಗಿ, ಕಾನೂನು ಬಾಹಿರವಾಗಿ ಮನೆಯನ್ನು ನಿರ್ಮಾಣ ಮಾಡಿದ ಮಾದಪ್ಪ ಅವರ ವಿರುದ್ಧ ಆರ್.ಎನ್.ಕುಲಕರ್ಣಿ ಅವರು ಕಾನೂನು ಹೋರಾಟ ಆರಂಭಿಸಿದ್ದರು.

ನ.2ರಂದು ಮಾದಪ್ಪ ಕಾನೂನು ಬಾಹಿರವಾಗಿ ಮನೆ ಕಟ್ಟಿರುವುದನ್ನು ತೆರವುಗೊಳಿಸುವಂತೆ ಕೋರ್ಟ್ ಆದೇಶ ಮಾಡಿತ್ತು ಇನ್ನು ಕಾನೂನು ಹೋರಾಟವನ್ನು ಆರಂಭಿಸಿದ್ದಾಗಿನಿಂದ ಮಾದಪ್ಪ ಮತ್ತು ಅವರ ಮಕ್ಕಳು, ಸಹಚರರು ನನ್ನನ್ನು ಹತ್ಯೆ ಮಾಡಲು ಸಂಚು ನಡೆಯುತ್ತಿದೆ ಎಂದು ಕುಲಕರ್ಣಿ ಅವರು ಅಮೇರಿಕಾದಲ್ಲಿರುವ ತಮ್ಮ ಮಗಳು ಮತ್ತು ಅಳಿಯನ ಜೊತೆಗೆ ಹೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಚಳಿಗಾಲದ ಅಲರ್ಜಿಯಿಂದ ಪಾರಾಗಬೇಕಾದರೆ ಈ 6 ಆಹಾರ ಸೇವಿಸಿ

ಮಗಳು ಮತ್ತು ಅಳಿಯನ ಸಲಹೆ ಮೇರೆಗೆ ಕೊಲೆ ಮಾಡಲು ಪಯತ್ನಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಠಾಣೆ, ನಗರ ಪೆಲೀಸ್ ಆಯುಕ್ತರು, ಪ್ರಧಾನ ಮಂತ್ರಿಯವರಿಗೂ ಮಾದಪ್ಪ ಮತ್ತು ಮಕ್ಕಳು ಬಳಸುವ ವಾಹನಗಳ ನಂಬರ್ ಸಮೇತ ದೂರು ನೀಡಿದ್ದರು ಎಂದು ಎಫ್‍ಐಆರ್‍ನಲ್ಲಿ ಉಲ್ಲೇಖವಾಗಿದೆ.

ಮಾದಪ್ಪ ಮತ್ತು ಮಕ್ಕಳ ವಿರುದ್ಧ ಕುಲಕರ್ಣಿ ಅವರ ಅಳಿಯ ಸಂಜಯ ಅಂಗಡಿ ದೂರು ನೀಡಿದ್ದರು.
ಐಪಿಸಿ ಸೆಕ್ಷನ್ 302 ಅಡಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Articles You Might Like

Share This Article