ಬೆಂಗಳೂರು, ಫೆ.14- ತೌಡು ಕುಟ್ಟುವ ವಿಚಾರ ವಿಧಾನಸಭೆಯಲ್ಲಿಂದು ಸ್ವಾರಸ್ಯಕರ ಚರ್ಚೆಗೆ ಎಡೆಮಾಡಿಕೊಟ್ಟ ಪ್ರಸಂಗ ಜರುಗಿತು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ರಾಜ್ಯಪಾಲರ ಭಾಷಣದ ಮೂಲಕ ತೌಡು ಕುಟ್ಟಿಸಿದ್ದಾರೆ ಎಂಬ ಹೇಳಿಕೆಗೆ ಕಾನೂನು ಸಚಿವ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ, ತೌಡು ಕುಟ್ಟಿದರೆ ತಪ್ಪೇನು? ತೌಡು ಕುಟ್ಟಿದರೆ ಎಣ್ಣೆ ಬರುತ್ತದೆ. ತೌಡಿನಿಂದ ಎಣ್ಣೆ ಸಂಸ್ಕರಣೆ ಮಾಡುತ್ತೇವೆ ಎಂದರು.
ಆಗ ಸಿದ್ದರಾಮಯ್ಯ ಮಾತನಾಡಿ, ತೌಡು ಕುಟ್ಟಿದರೆ ಎಣ್ಣೆ ಬರಲ್ಲ. ಒನಕೆಯಿಂದ ತೌಡು ಕುಟ್ಟಿದರೆ ಎಣ್ಣೆ ಬರುತ್ತೇನ್ರೀ ಎಂದು ಪ್ರಶ್ನಿಸಿದರು. ತೌಡು ಕುಟ್ಟೋದು ಎಂದು ಹೇಳುವುದು ಒಂದು ನಾಣ್ಣುಡಿ. ಒನಕೆಯಲ್ಲಿ ತೌಡು ಕುಟ್ಟಿದರೆ ಎಣ್ಣೆ ಬರಲ್ಲ. ಅದರ ಬದಲು ಭತ್ತವನ್ನೇ ಕುಟ್ಟಿ ಎಂದು ಹೇಳಿದರು.
#InterestingDiscussion, #Assembly,