ನವದೆಹಲಿ,ಫೆ.7- ಕೇಂದ್ರದ ಎನ್‍ಡಿಎ ಸರ್ಕಾರ ಈವರೆಗೂ ಮಂಡಿಸಿರುವ ಪ್ರತಿ ಬಜೆಟ್‍ನಲ್ಲೂ ಬಡವರ್ಗದ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಜೆಟ್ ಮಂಡನೆಯ ಬಳಿಕ ಮೊದಲ ಬಾರಿಗೆ ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ಅವರು, ಫೆಬ್ರವರಿ ಒಂದರಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ಸಮಾಜದ ಪ್ರತಿಯೊಂದು ವರ್ಗದ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ ಎಂದಿದ್ದಾರೆ.
ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಗೌರಿ ಪ್ರಮಾಣ ವಚನ
ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮಂಡನೆಯಾಗಿರುವ ಬಜೆಟ್ ಕೊನೆಯ ಮತ್ತು ಪೂರ್ಣ ಪ್ರಮಾಣದ್ದಾಗಿದೆ. ಆದರೂ ನಾವು ಮತ ಕ್ರೋಢಿಕರಣವನ್ನು ಆದ್ಯ ಗಮನವನ್ನಾಗಿಟ್ಟುಕೊಳ್ಳದೆ, ದೇಶದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ ಎಂದು ಸಭೆಯ ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ಬಿಜೆಪಿಯೊಂದಿಗೆ ಸೈದ್ಧಾಂತಿಕ ವಿರೋಧ ಹೊಂದಿರುವವರು ಕೂಡ ಈ ಬಜೆಟ್ ಅನ್ನು ಸ್ವಾಗತಿಸಿದ್ದಾರೆ. ಸರ್ವ ವ್ಯಾಪ್ತಿ ಮತ್ತು ಸರ್ವರ ಹಿತ ಬಯಸುವ ಬಜೆಟ್‍ಗೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಸಭೆಯಲ್ಲಿ ಪ್ರಧಾನಿ ಅವರು ಮತ್ತೊಂದು ಪ್ರಮುಖ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ನಗರ ಪ್ರದೇಶಗಳಲ್ಲಿ ಚುನಾಯಿತರಾಗಿರುವ ಸಂಸದರು ಕ್ರೀಡಾಕೂಟಗಳನ್ನು ಆಯೋಜನೆ ಮಾಡಬೇಕು. ಯುವಕರು ಹೆಚ್ಚಾಗಿ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿಲ್ಲ ಅವರನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕ್ರೀಡಾಕೂಟ ಆಯೋಜನೆ ಮಾಡುವಂತೆ ತಮ್ಮ ಪಕ್ಷದ ಸಂಸದರಿಗೆ ಮೋದಿ ಸಲಹೆ ನೀಡಿದ್ದಾರೆ.
ಭೂಕಂಪ ಪೀಡಿತ ಟರ್ಕಿಗೆ ಸಹಾಯಹಸ್ತ ಚಾಚಿದ ಭಾರತ
ಐ-20 ಶೃಂಗದ ಅಧ್ಯಕ್ಷತೆ ವಹಿಸಿಕೊಂಡಿರುವ ಭಾರತ ಸರಣಿ ಸಭೆಗಳನ್ನು ಆಯೋಜಿಸುತ್ತಿದೆ. ಇದರಲ್ಲಿ ಭಾಗವಹಿಸಲು ವಿದೇಶಿ ಅತಿಥಿಗಳು ಭೇಟಿ ನೀಡುತ್ತಿದ್ದು, ದೇಶವನ್ನು ಸಂಘಟಿಸಿರುವ ಕುರಿತು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಹೇಳಿದರು.
Interests, poor, center, every, budget, presented, BJP govt, PM Modi,