ಎಸ್‍ಸಿ ಒಳ ಮೀಸಲಾತಿ ಕಲ್ಪಿಸಲು ಮುಂದಾದ ಸರ್ಕಾರ

Social Share

ಬೆಂಗಳೂರು, ಜ.2- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಒಕ್ಕಲಿಗರು, ಲಿಂಗಾಯತರ ಮೀಸಲಾತಿ ಬೇಡಿಕೆ ಈಡೇರಿಸುವ ಮೂಲಕ ಬೊಮ್ಮಾಯಿ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇದೀಗ ಪರಿಶಿಷ್ಟ ಜಾತಿಯವರ ಬಹುಕಾಲದ ಬೇಡಿಕೆಯಾದ ಒಳ ಮೀಸಲಾತಿ ಕಲ್ಪಿಸಲು ಮುಂದಾಗಿದೆ. ಆ ಮೂಲಕ ಬೊಮ್ಮಾಯಿ ಸರ್ಕಾರ ಚುನಾವಣಾ ದಿಗ್ವಿಜಯಕ್ಕಾಗಿ ಕಾರ್ಯತಂತ್ರ ರೂಪಿಸಿದೆ.

ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಲು ಈಗಾಗಲೇ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಸಂಪುಟ ಉಪಸಮಿತಿ ವರದಿ ಆಧಾರದಲ್ಲಿ ಒಳ ಮೀಸಲಾತಿ ನೀಡಲು ಸರ್ಕಾರ ನಿರ್ಧರಿಸಿದೆ. ಒಳ ಮೀಸಲಾತಿ ಕುರಿತು ನ್ಯಾಯಮೂರ್ತಿ ಸದಾಶಿವ ಆಯೋಗ 2012ರಲ್ಲಿ ವರದಿ ನೀಡಿತ್ತು. 2005ರಲ್ಲಿ ಆಗಿನ ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ನೇತೃತ್ವದ ಸಮಿತಿ ರಚಿಸಿತ್ತು.

2012ರಲ್ಲಿ ಸದಾಶಿವ ಆಯೋಗ ವರದಿ ಸಲ್ಲಿಸಿದಾ ಗಿನಿಂದ ಒಳಮೀಸಲಾತಿ ರಾಜಕೀಯ ಒಳಸುಳಿಯಲ್ಲೇ ಸಿಲುಕಿದೆ.
ಇತ್ತ ಈ ಮೀಸಲಾತಿಯೊಳಗಿನ ಮೀಸಲಾತಿಯ ಬೇಡಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಲೇ ಬಂದಿದೆ. ಆದರೆ ಯಾವುದೇ ಸರ್ಕಾರಗಳು ಇದರ ಅನುಷ್ಠಾನದ ಧೈರ್ಯ ತೋರಿರಲಿಲ್ಲ.ವರದಿಯ ಪ್ರಕಾರ ಪರಿಶಿಷ್ಟ ಜಾತಿಯ 101 ಉಪಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಶೇ.15ರ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ.

ಇದರ ಪ್ರಕಾರ ಶೇ.33.4ರಷ್ಟಿರುವ ಒಂದನೇ ಗುಂಪಿಗೆ (ಎಡಗೈ ಪ.ಜಾ) ಶೇ.6, ಶೇ.32ರಷ್ಟಿರುವ (ಬಲಗೈ ಪ.ಜಾ) ಎರಡನೇ ಗುಂಪಿಗೆ ಶೇ.5, ಶೇ.23.64ರಷ್ಟಿರುವ (ಸ್ಪರ್ಶ ಪರಿಶಿಷ್ಟ ಜಾತಿ) ಮೂರನೇ ಗುಂಪಿಗೆ ಶೇ.3 ಮತ್ತು ಶೇ.4.65ರಷ್ಟಿರುವ ಇತರ ಪರಿಶಿಷ್ಟ ಜಾತಿಯವರಿಗೆ ಶೇ.1ರಷ್ಟು ಮೀಸಲಾತಿಯನ್ನು ಹಂಚಿಕೆಗೆ ಶಿಫಾರಸು ಮಾಡಿದೆ.

ಇದೇ ವೇಳೆ ಸ್ಪಶ್ಯ ಜಾತಿಗಳಾದ ಲಂಬಾಣಿ, ಬೋವಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಯ ಗುಂಪಿನಿಂದ ಹೊರಗಿಡಬೇಕೆಂಬ ಬೇಡಿಕೆಯನ್ನು ಆಯೋಗ ತಿರಸ್ಕರಿಸಿದೆ. ಸಮೀಕ್ಷೆಯ ಪ್ರಕಾರ ಎಡಗೈ ಗುಂಪಿನ (ಮಾದಿಗ ಜಾತಿ) ಜನಸಂಖ್ಯೆ 32,35,517 (ಶೇ. 33.47), ಬಲಗೈ ಗುಂಪಿನ (ಹೊಲೆಯ ಜಾತಿ) ಜನಸಂಖ್ಯೆ 30,93,693 (ಶೇ. 32.01), ಇತರೆ ಪರಿಶಿಷ್ಟ ಜಾತಿಗಳು 4,49,879 (ಶೇ. 46.5) ಮತ್ತು ಸ್ಪಶ್ಯ ಜಾತಿಗಳ ಜನಸಂಖ್ಯೆ 22,84,642 (ಶೇ. 23.64) ಇದೆ.

ಆಯೋಗ ವರ್ಗೀಕರಿಸಿದಂತೆ ಮೊದಲ ಗುಂಪಿನ (ಎಡಗೈ) ಒಟ್ಟು ಸಾಕ್ಷರತೆ 62.15%, ಎರಡನೇ ಗುಂಪಿನ (ಬಲಗೈ) 65.16%, ಮೂರನೇ ಗುಂಪಿನ ಸ್ಪಶ್ಯ ಜಾತಿಗಳ ಸಾಕ್ಷರತೆ 68.46% ಮತ್ತು ನಾಲ್ಕನೇ ಗುಂಪು (ಇತರೆ ಪರಿಶಿಷ್ಟ ಜಾತಿಗಳು) ಸಾಕ್ಷರತೆ (55.65%) ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕಾರಾಗೃಹದ ಮೇಲೆ ಬಂದೂಕುಧಾರಿಗಳಿಂದ ದಾಳಿ, 14 ಮಂದಿ ಸಾವು, 24 ಕೈದಿಗಳು ಪರಾರಿ

ಚುನಾವಣೆ ಹೊಸ್ತಿಲಲ್ಲಿ ಈಗಾಗಲೇ ವಿವಿಧ ಮೀಸಲಾತಿ ಬೇಡಿಕೆ ಈಡೇರಿಸುವ ಬಿಜೆಪಿ ಸರ್ಕಾರ ದಶಕಗಳ ಒಳಮೀಸಲಾತಿ ಬೇಡಿಕೆ ಈಡೇರಿಸುವ ಮೂಲಕ ಚುನಾವಣಾ ಲಾಭ ಪಡೆಯುವ ಕಾರ್ಯತಂತ್ರ ರೂಪಿಸಿದೆ.

2012ರಲ್ಲೇ ಸದಾಶಿವ ಆಯೋಗವು ಒಳ ಮೀಸಲಾತಿ ಕಲ್ಪಿಸುವ ಕುರಿತು ವರದಿ ಸಲ್ಲಿಸಿದ್ದರೂ ಕಾಂಗ್ರೆಸ್ ಪಕ್ಷ ಅಕಾರದಲ್ಲಿದ್ದ ಐದು ವರ್ಷ ಯಾವುದೇ ಕ್ರಮ ಕೈಗೊಂಡಿಲ್ಲ. ಎಡಗೈ ಸಮುದಾಯದವರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ನ್ಯಾಯ ಒದಗಿಸಿಲ್ಲ. ನಾವು ಒಳ ಮೀಸಲಾತಿ ಒದಗಿಸಲು ಮುಂದಾಗಿದ್ದೇವೆ ಎಂಬ ಸಂದೇಶ ರವಾನಿಸಲು ಮುಂದಾಗಿದೆ.

ಆ ಮೂಲಕ ಪ.ಜಾತಿಯಲ್ಲಿ ಸುಮಾರು 32,35,517 (33.4%)ರಷ್ಟು ಜನಸಂಖ್ಯೆ ಹೊಂದಿರುವ ಪ್ರಬಲ ಮಾದಿಗ ಸಂಬಂತ ಎಡಗೈ ಪರಿಶಿಷ್ಟ ಜಾತಿಯವರ ಮನಗೆಲ್ಲಲು ಬಿಜೆಪಿ ಸರ್ಕಾರ ಮುಂದಾಗಿದೆ. ಈಗಾಗಲೇ ಪರಿಶಿಷ್ಟ ಜಾತಿ ಮೀಸಲಾತಿಯನ್ನು 15% ದಿಂದ 17%ಗೆ ಏರಿಕೆ ಮಾಡಿರುವ ಬೊಮ್ಮಾಯಿ ಸರ್ಕಾರ ಬಹು ದಶಕಗಳ ಒಳ ಮೀಸಲಾತಿ ಬೇಡಿಕೆಯನ್ನು ಈಡೇರಿಸಿ ಪರಿಶಿಷ್ಟ ಜಾತಿ ಸಮುದಾಯದವರನ್ನು ಸಂಪೂರ್ಣವಾಗಿ ತಮ್ಮತ್ತ ಸೆಳೆಯುವ ಇರಾದೆ ಹೊಂದಿದೆ.

ಒಳಮೀಸಲಾತಿ ಒಳಸುಳಿ ಏನು?:
ಒಳ ಮೀಸಲಾತಿಗೆ ಒಳಸುಳಿ ತಿರುಗೇಟು ನೀಡುವ ಆತಂಕವೂ ಇದೆ. ಇತ್ತ ಎಡಗೈ ಸಂಬಂತ ಸಮುದಾಯದವರ ಪರ ಒಳಮೀಸಲಾತಿ ಕೊಟ್ಟರೆ, ಅದೇ ಜಾತಿಗೆ ಸೇರಿದ ಪ್ರಬಲ ಬಲಗೈ ಸಮುದಾಯದ ವಿರೋಧ ಕಟ್ಟಿಕೊಳ್ಳುವ ಆತಂಕವೂ ಎದುರಾಗಿದೆ.

ಕಳೆದ ವರ್ಷ ಜುಲೈನಲ್ಲೇ ರಾಜ್ಯದಲ್ಲಿ BF.7 ವೈರಸ್ ಪತ್ತೆಯಾಗಿತ್ತು..!

ಇತ್ತ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿರುವ ಮಾದಿಗ ಮತ್ತು ಅದರ ಸಂಬಂತ ಜಾತಿಗಳಿಗೆ ಹೆಚ್ಚಿನ ಮೀಸಲಾತಿಯ ಅನುಕೂಲಗಳು ಸಿಕ್ಕರೆ, ಅತ್ತ ಹೊಲೆಯ (ಬಲಗೈ) ಸಂಬಂಧಿತ ಜಾತಿಗಳ ಪ್ರತಿನಿಧಿಗಳ ಕಣ್ಣುಕೆಂಪಾಗಿಸುವ ಆತಂಕವೂ ಇದೆ.ಇದರಿಂದ ಒಳ ಮೀಸಲಾತಿ ಬಿಸಿ ತುಪ್ಪ ಎಂಬ ಮಾತಿದೆ.

ಈ ಒಳಸುಳಿಯ ಕಾರಣ ನ್ಯಾ.ಸದಾಶಿವ ಆಯೋಗ ವರದಿ ಸಲ್ಲಿಸಿ 10 ವರ್ಷ ಕಳೆದರೂ ಯಾವ ಸರ್ಕಾರಗಳೂ ಅದರ ಜಾರಿಯ ಗೋಜಿಗೆ ಹೋಗಿಲ್ಲ. ಇದರಿಂದ ಮತ ಗಳಿಸುವ ಬದಲು ಮತ ಕಳೆಯುವ ಆತಂಕವೇ ಹೆಚ್ಚು ಎಂಬ ಆತಂಕ ರಾಜಕೀಯ ಪಕ್ಷಗಳದ್ದು. ಇತ್ತ ಒಳಮೀಸಲಾತಿಗೆ ಕಾನೂನು ತೊಡಕು ಕಗ್ಗಂಟಾಗುವ ಸಾಧ್ಯತೆ ಹೆಚ್ಚಿದೆ.

ನೋಟು ಅಮಾನೀಕರಣ ಮಾನ್ಯ ಮಾಡಿದ ಸುಪ್ರೀಂ

ಈಗಾಗಲೇ ಹರ್ಯಾಣ, ಪಂಜಾಬ್, ಆಂಧ್ರಪ್ರದೇಶದಲ್ಲಿನ ಒಳಮೀಸಲಾತಿ ಆದೇಶಕ್ಕೆ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನ್ಯಾ.ಸದಾಶಿವ ಆಯೋಗದ ವರದಿಯೂ ಆಂಧ್ರಪ್ರದೇಶದ ಆಯೋಗದ ವರದಿಯ ಪಡಿಯಚ್ಚು ಎನ್ನಲಾಗಿದ್ದು, ಅಲ್ಲಿಯಂತೆ ಇಲ್ಲೂ ಒಳ ಮೀಸಲಾತಿಗೆ ಕಾನೂನು ವಿಘ್ನ ಬರಲಿದೆ ಎಂದು ಹೇಳಲಾಗಿದೆ.

internal reservation, Scheduled Castes, BJP, government,

Articles You Might Like

Share This Article