ವಿದೇಶದಿಂದ ಬರುವ ವಿಮಾನಗಳ ನಿರ್ಬಂಧಕ್ಕೆ ಒತ್ತಾಯ

Social Share

ಬೆಂಗಳೂರು,ಡಿ.24- ಚೀನಾದಲ್ಲಿ ಕೋವಿಡ್ ಉಲ್ಬಣಿಸಿ ಹಲವು ಸಾವುನೋವು ಸಂಭವಿಸುತ್ತಿರುವುದರಿಂದ ಕೂಡಲೇ ಕೇಂದ್ರ ಸರ್ಕಾರ ಜಪಾನ್, ಅಮೆರಿಕ, ಇಟಲಿ ಸೇರಿದಂತೆ ಸೋಂಕು ಹೆಚ್ಚುತ್ತಿರುವ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ವಿಮಾನಗಳನ್ನು ಕೂಡಲೇ ನಿರ್ಬಂಧಿಸಬೇಕೆಂದು ಕರ್ನಾಟಕ ಗಡಿ ಹೋರಾಟ ಸಮಿತಿ ಒತ್ತಾಯಿಸಿದೆ.

ಇದೇ ವೇಳೆ ಅಂತಾರಾಷ್ಟ್ರೀಯ ಜಲಸಂಪರ್ಕವನ್ನು ರದ್ದುಪಡಿಸಬೇಕು, ಜನರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕೆಂದು ಸಂಘಟನೆಯ ಅಧ್ಯಕ್ಷ ಪ್ರೊ.ರಾವ್ ಬೈಂದೂರ್, ಪ್ರಧಾನಿ ನರೇಂದ್ರಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

ಆಕ್ಸಿಜನ್ ದಾಸ್ತಾನು ಖಚಿತ ಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸೂಚನೆ

ಕರ್ನಾಟಕ ಸರ್ಕಾರ ಕೂಡ ಯಾವುದೇ ಅವಕಾಶ ನೀಡದೇ ಕೂಡಲೇ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಕೇವಲ ಭರವಸೆ ನೀಡುವುದನ್ನು ಬಿಟ್ಟು ಕಾರ್ಯರೂಪಕ್ಕೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೇವಲ ಬೂಸ್ಟರ್ ಡೋಸ್ ನೀಡಿದರೆ ಸಾಲದು ಸೋಂಕು ನೆರೆ ರಾಜ್ಯಗಳಿಂದ ಬರದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

international, flight, restriction, Demand,

Articles You Might Like

Share This Article