ರಾಜ್ಯದಲ್ಲಿ ಅಂತಾರಾಷ್ಟ್ರೀಯ ಮಾದರಿ ವಿಧಿವಿಜ್ಞಾನ ವಿವಿ ಸ್ಥಾಪನೆ

Social Share

ಚಿತ್ರದುರ್ಗ,ಡಿ.14- ರಾಜ್ಯದಲ್ಲಿ ಅಂತಾರಾಷ್ಟ್ರೀಯ ಮಾದರಿ ವಿಧಿವಿಜ್ಞಾನ ವಿವಿ ಸ್ಥಾಪನೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ತಾತ್ವಿಕ ಒಪ್ಪಿಗೆ ನೀಡಿದ್ದು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಚಿತ್ರದುರ್ಗ ಜಿಲ್ಲೆ ಐಮಂಗಲ ಪೊಲೀಸ್ ತರಬೇತಿ ಶಾಲೆ 7ನೇ ತಂಡದ ನಾಗರೀಕ ಪೊಲೀಸ್ ಕಾನ್ಸ್‍ಟೇಬಲ್ ನಿರ್ಗಮ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಮಾದರಿಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಅಗತ್ಯವಾದ ಸ್ಥಳ ನಿಗದಿ ಮಾಡಿ, ಶೀಘ್ರದಲ್ಲೇ ಮತ್ತೊಮ್ಮೆ ಕೇಂದ್ರದೊಂದಿಗೆ ಚರ್ಚಿಸಲಾಗುವುದು ಎಂದರು.

ವಿಧಿವಿಜ್ಞಾನ ಪ್ರಯೋಗಾಲಯ (ಎಫ್.ಎಸ್.ಎಲ್) ಆಧುನೀರಣಕ್ಕೆ ಒತ್ತು ನೀಡಲಾಗಿದೆ. 9 ಸಂಚಾರಿ, ಹುಬ್ಬಳ್ಳಿ ಮತ್ತು ಬಳ್ಳಾರಿ ನೂತನ ವಿಧಿವಿಜ್ಞಾನಪ್ರಯೋಗಾಲಯ ಸ್ಥಾಪಿಸಲಾಗಿದೆ. ಶಿವಮೊಗ್ಗ ಹಾಗೂ ಹಾಸನದಲ್ಲಿ ಕೂಡ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯ ಪೊಲೀಸ್ ಇಲಾಖೆ ದೇಶದಲ್ಲೇ ನಂ.1 ಸ್ಥಾನದಲ್ಲಿದೆ. ಪೊಲೀಸರಿಗೆ ನೂತನ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುವುದು. ಅಪರಾಧಗಳ ಪತ್ತೆಗಾಗಿ 206 ಸೀನ್ ಆಪ್ ಕ್ರೈಮ್ ಅಕಾರಿಗಳನ್ನು ನೇಮಿಸಲಾಗಿದೆ.
ನಮ್ಮ ಸರ್ಕಾರ ಅಕಾರಕ್ಕೆ ಬಂದ ಸಂದರ್ಭದಲ್ಲಿ ರಾಜ್ಯದಲ್ಲಿ 1 ಲಕ್ಷ ಪೊಲೀಸ್ ಹುದ್ದೆಗಳ ಪೈಕಿ 35 ಸಾವಿರ ಹುದ್ದೆಗಳು ಖಾಲಿ ಇದ್ದವು.

ಪ್ರತಿ ವರ್ಷ ಸರಾಸರಿ 5 ಸಾವಿರ ಪೊಲೀಸ್ ಕಾನ್ಸಟೇಬಲ್ ಹುದ್ದೆಗಳನ್ನು ತುಂಬುತ್ತಾ ಬರಲಾಗಿದೆ. ಸದ್ಯ 12 ಸಾವಿರ ಹುದ್ದೆಗಳು ಖಾಲಿ ಇದ್ದು, ಶೀಘ್ರವಾಗಿ 5 ಸಾವಿರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು.

ಇಂದು ಪೊಲೀಸ್ ಕಾನ್ಸ್‍ಟೇಬಲ್ ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 436 ಅಭ್ಯರ್ಥಿಗಳು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲಿದ್ದಾರೆ. ಇದರಿಂದ ಇಲಾಖೆಗೆ ಹೊಸ ರಕ್ತದ ಯುವ ಪಡೆ ಸೇರ್ಪಡೆಯಾಗಲಿದೆ. ತರಬೇತಿ ಮುಗಿಸಿದ ಅಭ್ಯರ್ಥಿಗಳ ಪೈಕಿ 63 ಇಂಜಿನಿಯರಿಂಗ್ ಪದವಿ , 45 ಸ್ನಾತಕೋತ್ತರ ಪದವಿ, 5 ಬಿ.ಎಡ್ ತರಬೇತಿ, 7 ಡಿಪ್ಲೋಮ ಹಾಗೂ 27 ಮಾಜಿ ಸೈನಿಕ ಅಭ್ಯರ್ಥಿಗಳು ಇರುವುದು ವಿಶೇಷವಾಗಿದೆ ಎಂದರು.

ದೇಶದ ಗಡಿ ರಕ್ಷಣೆಯಲ್ಲಿ ಸೈನಿಕರು ತೊಡಗಿದರೆ, ಸಾರ್ವಜನಿಕರ ರಕ್ಷಣೆಗೆ ಪೊಲೀಸರು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಪೊಲೀಸರ ಕೆಲಸ ನಿರ್ವಹಣೆ ಸೈನಿಕರಿಗಿಂತ ಭಿನ್ನ. ಅಪರಾಗಳನ್ನು ಹಿಡಿದು ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು.

ಬಗರ್ ಹುಕುಂ ಭೂಮಿ ಮಂಜೂರು ಕುರಿತು ಕಂದಾಯ ಇಲಾಖೆ ಮಹತ್ವದ ಆದೇಶ

ಶಿಕ್ಷೆ ನೀಡುವ ಅಕಾರ ನ್ಯಾಯಾಲಯಕ್ಕೆ ಮಾತ್ರ ಇದೆ. ದೇಶದಲ್ಲಿ ಶೈಕ್ಷಣಿಕೆ ಸಾಕ್ಷರತೆ ಹೆಚ್ಚಾದಂತೆ ವಿಭಿನ್ನ ರೀತಿಯ ಹಾಗೂ ಅಪರಾಧ ಪ್ರಕರಣಗಳು ಸಂಖ್ಯೆ ಹೆಚ್ಚಾಗಿದೆ. ಅಪರಾಧ ಪ್ರಕರಣಗಳು ತಗ್ಗಬೇಕು. ಅಪರಾಗಳಿಗೆ ಶಿಕ್ಷೆಯಾಗಬೇಕು. ಪೊಲೀಸ್ ಇಲಾಖೆಗೆ ಭರ್ತಿಗೊಂಡ ಎಲ್ಲರಿಗೂ ಅಭಿನಂದನೆಗಳು. ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡಲು ಮಕ್ಕಳನ್ನು ಕಳುಹಿಸಿದ ಪೋಷಕರು ಹಾಗೂ ಅವರನ್ನು ಹೆತ್ತ ಒಡಲಿಗೆ ಅಭಿನಂದನೆ ತಿಳಿಸಿದರು.

ಪೊಲೀಸ್ ಕುಟುಂಬಗಳಿಗಾಗಿ ಎರಡು ಕೋಣೆಗಳು ಉಳ್ಳ ಸುಸಜ್ಜಿತ 20 ಸಾವಿರ ಪೊಲೀಸ್ ಗೃಹಗಳನ್ನು ನಿರ್ಮಿಸಲಾಗಿದೆ. ರಾಜ್ಯಾದ್ಯಂತ 200 ಕೋಟಿ ರೂ. ವೆಚ್ಚದಲ್ಲಿ 117 ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ 5.5 ಕೋಟಿ ರೂ. ವೆಚ್ವದಲ್ಲಿ ಪೊಲೀಸ್ ತರಬೇತಿ ಶಾಲೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ವಿವಿಧೋದ್ಧೇಶ ಉಪಯುಕ್ತತಾ ಸಂಕೀರ್ಣ ಹಾಗೂ ವಾಹನ ಕಟ್ಟಡಗಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.

ಬಹುಮಾನ ವಿತರಣೆ:
ಒಳಾಂಗಣ ವಿಷಯದಲ್ಲಿ ವಿ.ಆರ್.ಕಲ್ಲೇಶ್ (ಪ್ರಥಮ), ಧರೆಪ್ಪ ಮಾಳಿ (ದ್ವೀತಿಯ) ವಿ. ಪ್ರಶಾಂತ್ (ತೃತೀಯ) ಬಹುಮಾನ ಪಡೆದರು.ಹೊರಾಂಗಣ ವಿಷಯದಲ್ಲಿ ಕೆ.ಎಸ್.ಶಶಾಂಕ್ (ಪ್ರಥಮ), ಎನ್.ಎಸ್.ನಿತಿನ್ (ದ್ವಿತೀಯ), ಎಸ್.ಬಿ.ದರ್ಶನ್ (ತೃತೀಯ) ಬಹುಮಾನ ಪಡೆದರು.ಫೈರಿಂಗ್‍ನಲ್ಲಿ ಸಂದೀಪ್ ನಾಯ್ಕ್ (ಪ್ರಥಮ) ಶಿವಪ್ಪ ಮೈಲಾರ (ದ್ವೀತಿಯ) ಎಂ.ಎಂ.ಪುನೀತ (ತೃತೀಯ) ಬಹುಮಾನ ಪಡೆದರು. ಡಿ.ಜಿ ಮತ್ತು ಐ.ಜಿ.ಪಿ ಟ್ರೋಫಿ ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ವಿ.ಪ್ರಶಾಂತ್ ಅವರಿಗೆ ಗೃಹ ಸಚಿವರಾದ ಆರಗ ಜ್ಞಾನೇಂದ್ರ ವಿತರಿಸಿದರು.

ಶಾಸಕಿ ಪೂರ್ಣಿಮಾ ಶ್ರೀನಿವಾಸ್, ವಿಧಾನಪರಿಷತ್ ಶಾಸಕ ಕೆ.ಎಸ್.ನವೀನ್, ತರಬೇತಿ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಡಾ.ಪಿ.ರವೀಂದ್ರನಾಥ, ಪೂರ್ವ ವಲಯ ಡಿ.ಐ.ಜಿ.ಪಿ ಕೆ.ತ್ಯಾಗರಾಜನ್, ಕೆಎಸ್‍ಪಿಹೆಚ್ ಮತ್ತು ಐಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅರುಣ ಚಕ್ರವರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಪಿ.ಪಾಪಣ್ಣ ಉಪಸ್ಥಿತರಿದ್ದರು..

#ForensicScienceUniversity, #HomeMinister, #AragaJnanendra, #Chitradurga,

Articles You Might Like

Share This Article