ವಾಷಿಂಗ್ಟನ್,ಮಾ.29- ಇರಾಕ್ ವಿರುದ್ದ ಯುದ್ದ ಸಾರಿ ತೀವ್ರ ಮುಖಭಂಗ ಅನುಭವಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಈಗ ಅಮೆರಿಕದಲ್ಲೇ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. ಟ್ರಂಪ್ ಅವರ ನೀತಿಯನ್ನು ವಿರೋಧಿಸಿ ಪ್ರತಿಭಟನಾಕಾರರ ದೊಡ್ಡ ಸಮೂಹವೇ ಬೀದಿಗಿಳಿದಿದ್ದಾರೆ.
ಅನೇಕ ಕಡೆ ನೋ ಕಿಂಗ್ಸ್ ಪ್ರತಿಭಟನೆ ನಡೆಸುತ್ತಿದ್ದಾರೆ.ಅಮೆರಿಕದ ಸುಮಾರು 50 ನಗರಗಳಲ್ಲಿ ಟ್ರಂಪ್ ವಿರುದ್ಧ ಪ್ರತಿಭಟನೆಗಳು ನಡೆದವು ಮತ್ತು ಘೋಷಣೆಗಳನ್ನು ಕೂಗಲಾಗಿದೆ. ಟ್ರಂಪ್ ಅವರ ನೀತಿಗಳು, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಇರಾನ್ ವಿರುದ್ಧದ ಯುದ್ಧದ ಬಗ್ಗೆ ಜನರು ಕೋಪಗೊಂಡಿದ್ದಾರೆ. ಅಮೆರಿಕದಾದ್ಯಂತ ಜನರು ನೋ ಕಿಂಗ್ಸ್ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ಪ್ರಮುಖ ನಗರಗಳಲ್ಲಿ ದೊಡ್ಡ ಮೆರವಣಿಗೆಗಳು ನಡೆದವು. ಸಣ್ಣ ಸಭೆಗಳು ಟ್ರಂಪ್ ಅವರ ನೀತಿಗಳನ್ನು ಟೀಕಿಸಿದ್ದಾರೆ.
ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ರಾಜ್ಯಗಳಲ್ಲಿ ರ್ಯಾಲಿಗಳು ಮತ್ತು ಮೆರವಣಿಗೆಗಳು ನಡೆದವು. ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ, ಫಲಕಗಳನ್ನು ಬೀಸುತ್ತಾ ಮತ್ತು ನೃತ್ಯ ಮಾಡುವ ಮೂಲಕ ಟ್ರಂಪ್ ವಿರುದ್ಧ ತಮ ಕೋಪವನ್ನು ವ್ಯಕ್ತಪಡಿಸಿದರು. ದೇಶದಲ್ಲಿ ಹಣದುಬ್ಬರವನ್ನು ಕಡಿಮೆ ಮಾಡಲು ಇರಾನ್ ವಿರುದ್ಧದ ಯುದ್ಧವನ್ನು ನಿಲ್ಲಿಸುವಂತೆ ಅವರು ಟ್ರಂಪ್ ಆಡಳಿತವನ್ನು ಒತ್ತಾಯಿಸಿದರು.
50 ಸ್ಟೇಟ್‌ಗಳ ದೊಡ್ಡ ಹಾಗೂ ಸಣ್ಣ ನಗರಗಳು ಸೇರಿದಂತೆ 3,200 ಕ್ಕೂ ಹೆಚ್ಚು ಸಮಾವೇಶಗಳಲ್ಲಿ ಕನಿಷ್ಠ 80 ಲಕ್ಷ ಜನರು ಪ್ರತಿಭಟನೆಗೆ ಧುಮುಕಿದ್ದಾರೆ. ಅಮೆರಿಕದ ಅತಿ ಜನನಿಬಿಡ ನಗರವಾದ ನ್ಯೂಯಾರ್ಕ್, ವಾಷಿಂಗ್ಟನ್, ಲಾಸ್ ಏಂಜಲೀಸ್, ಡಲ್ಲಾಸ್, ಫಿಲಡೆಲ್ಫಿಯಾ ಸೇರಿದಂತೆ ಅನೇಖ ನಗರಗಳಲ್ಲಿ ದೊಡ್ಡ ಸಭೆಗಳು, ಪ್ರತಿಭಟನಾ ರ್ಯಾಲಿಗಳು ನಡೆದವು. ಆದ್ರೆ ಈ ಕುರಿತು ಅಮೆರಿಕದ ಸರ್ಕಾರಿ ಮೂಲಗಳಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.
2025ರ ಜನವರಿಯಲ್ಲಿ ಟ್ರಂಪ್ 2ನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅವರ ನೀತಿಗಳು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಬರ್ಟ್ ಡಿ ನರೊ ಸಹ ಇದ್ದರು. ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲೂ ಪ್ರತಿಭಟನೆ ಭುಗಿಲೆದ್ದವು. “ಫ್ಯಾಸಿಸಂ ವಿರುದ್ಧ ಹೋರಾಡಿ” ಎಂಬ ಬ್ಯಾನರ್ ಪ್ರದರ್ಶಿಸಿ ಮೆರವಣಿಗೆ ನಡೆಸಲಾಯಿತು.
ಚಳವಳಿ ತೀವ್ರತೆಗೆ ಕಾರಣವೇನು?
ಇರಾನ್‌ನಲ್ಲಿನ ಯುದ್ಧ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ರಮಗಳ ವಿರುದ್ಧ ಶನಿವಾರ ಅಮೆರಿಕ ಮತ್ತು ಯುರೋಪ್‌ನಾದ್ಯಂತ ನಡೆದ ನೋ ಕಿಂಗ್ಸ್ ರ್ಯಾಲಿಗಳಲ್ಲಿ ಜನ ಗುಂಪುಗುಂಪಾಗಿ ಪ್ರತಿಭಟಿಸಿದರು. ಲಕ್ಷಾಂತರ ಜನರನ್ನು ಒಳಗೊಂಡ ಸಾಮೂಹಿಕ ಪ್ರದರ್ಶನಗಳು ನಡೆದವು. ಬೀದಿಗಳಲ್ಲಿ ಸಾವಿರಾರು ಜನರು ಹೆಗಲಿಗೆ ಹೆಗಲು ಕೊಟ್ಟು ನಿಂತರು. ಕೆಲವರು ತಲೆಕೆಳಗಾಗಿ ಅಮೆರಿಕದ ಧ್ವಜಗಳನ್ನು ಹಿಡಿದು ಆಕ್ರೋಶ ಹೊರಹಾಕಿದರು.
