Sunday, April 12, 2026
Homeಅಂತಾರಾಷ್ಟ್ರೀಯ94 ಸಾವಿರ ಟನ್‌ ಎಲ್‌ಪಿಜಿ ಹೊತ್ತ ಎರಡು ಹಡಗುಗಳು ಭಾರತದತ್ತ

94 ಸಾವಿರ ಟನ್‌ ಎಲ್‌ಪಿಜಿ ಹೊತ್ತ ಎರಡು ಹಡಗುಗಳು ಭಾರತದತ್ತ

ನವದೆಹಲಿ, ಮಾ.30- ಬರೊಬ್ಬರಿ 94,000 ಟನ್‌ಗಳಷ್ಟು ಎಲ್‌ಪಿಜಿ ಸರಕು ಹೊತ್ತ ಎರಡು ಭಾರತೀಯ ಹಡಗುಗಳು ಇಂದು ಯುದ್ಧಪೀಡಿತ ಹಾರ್ಮುಜ್‌ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ ಎಂದು ತಿಳಿದುಬಂದಿದೆ. ಶೀಘ್ರದಲ್ಲೇ ಈ ಹಡಗುಗಳು ಭಾರತವನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿಕೆ ನೀಡಿದೆ.

ಸುಮಾರು 94 ಸಾವಿರ ಟನ್‌ಗಳಷ್ಟು ಎಲ್‌ಪಿಜಿ ಸರಕು ಟ್ಯಾಂಕರ್‌ಗಳನ್ನು ಹೊತ್ತ 2 ಹಡಗುಗಳು ಹಾರ್ಮುಜ್‌ ಜಲಸಂಧಿಯನ್ನ ಸುರಕ್ಷಿತವಾಗಿ ದಾಟಿದ್ದು, ಭಾರತದ ತೀರಗಳತ್ತ ಸಾಗಿವೆ. ಒಂದು ಟ್ಯಾಂಕರ್‌ ಮುಂಬೈಗೆ ತೆರಳುತ್ತಿದ್ದು, ನಾಳೆ ಮುಂಬೈ ಬಂದರಿಗೆ ಬರುವ ನಿರೀಕ್ಷೆಯಿದೆ. ಇನ್ನೊಂದು ಟ್ಯಾಂಕರ್‌ ಹೊತ್ತ ಹಡಗು ಏಪ್ರಿಲ್‌ 1 ರಂದು ನವ ಮಂಗಳೂರು ಬಂದರಿಗೆ ಬರುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

ಎಲ್‌ಎಸ್‌‍ಇಜಿ ಹಡಗು ಟ್ರ್ಯಾಕಿಂಗ್‌ ದತ್ತಾಂಶದ ಪ್ರಕಾರ, ಈಗಾಗಲೇ ಭಾರತದ 4 ಟ್ಯಾಂಕರ್‌ಗಳು ಹಾರ್ಮುಜ್‌ ಜಲಸಂಧಿಯನ್ನ ಸುರಕ್ಷಿತವಾಗಿ ದಾಟಿವೆ. ಇನ್ನೂ 3 ಹಡಗುಗಳು ಜಲಸಂಧಿಯ ಪಶ್ಚಿಮ ವಿಭಾಗದಲ್ಲಿ ಸಿಲುಕಿವೆ ಎನ್ನಲಾಗಿದೆ. ಇರಾನ್‌ ಮಿತ್ರರಾಷ್ಟ್ರಗಳಿಗೆ ಹಾರ್ಮುಜ್‌ ಜಲಸಂಧಿ ದಾಟಲು ಅವಕಾಶ ನೀಡಿದ ಬೆನ್ನಲ್ಲೇ ಭಾರತೀಯ ಅಧಿಕಾರಿಗಳು ಸಮನ್ವಯ ಸಾಧಿಸಿ, ಒಂದೊಂದೇ ಹಡಗುಗಳನ್ನು ಹೊರತರುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಈಗಾಗಲೇ ಒಟ್ಟು 4 ಭಾರತೀಯ ಎಲ್‌ಪಿಜಿ ಟ್ಯಾಂಕರ್‌ಗಳು ಹಾರ್ಮುಜ್‌ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಭಾರತ ತಲುಪಿವೆ. 92,612 ಟನ್‌ ಎಲ್‌ಪಿಜಿ ಹೊತ್ತ ಪೈನ್‌ ಗ್ಯಾಸ್‌‍ ಮತ್ತು ಜಗ್‌ ವಸಂತ್‌ ಮಾರ್ಚ್‌ 26 ಮತ್ತು ಮಾರ್ಚ್‌ 28 ರ ನಡುವೆ ಭಾರತೀಯ ಬಂದರುಗಳನ್ನು ತಲುಪಿದ್ದವು. ಅದಕ್ಕೂ ಮೊದಲು, ಸುಮಾರು 92,712 ಟನ್‌ ಎಲ್‌ಪಿಜಿ ಟ್ಯಾಂಕರ್‌ ಹೊತ್ತ ಎಂಟಿ ಶಿವಾಲಿಕ್‌ ಮತ್ತು ಎಂಟಿ ನಂದಾ ದೇವಿ ಹಡಗು ಕ್ರಮವಾಗಿ ಮಾರ್ಚ್‌ 16 ರಂದು ಗುಜರಾತ್‌ನ ಮುಂಡ್ರಾ ಬಂದರಿಗೆ ಮತ್ತು ಮಾರ್ಚ್‌ 17 ರಂದು ರಾಜ್ಯದ ಕಾಂಡ್ಲಾ ಬಂದರಿಗೆ ತಲುಪಿದ್ದವು.

RELATED ARTICLES

Latest News