ವಾಷಿಂಗ್ಟನ್,ಮಾ.29- ಇರಾನ್ ಮೇಲಿನ ಭೂದಾಳಿಗೆ ಅಮೆರಿಕದ ಭೂ ಸೇನೆಯ 17 ಸಾವಿರ ತುಕಡಿಗಳು ಸಜ್ಜಾಗಿವೆ. ಅಮೆರಿಕ ಅಧ್ಯಕ್ಷರ ಅಂತಿಮ ಅನುಮೋದನೆಗೆ ಕಾಯುತ್ತಿವೆ ಎಂದು ಅಮೆರಿಕದ ನ್ಯೂಯಾರ್ಕ್ ಮೂಲದ ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಒಂದು ತಿಂಗಳಿಂದ ನಡೆಯುತ್ತಿರುವ ವೈಮಾನಿಕ ಕಾರ್ಯಾಚರಣೆಗೆ ಬಗ್ಗದ ಇರಾನ್ ವಿರುದ್ಧ ಭೂಸೇನೆಯನ್ನು ಯುದ್ಧಭೂಮಿಗೆ ಇಳಿಸಲು ಟ್ರಂಪ್ ಆಡಳಿತ ಆಲೋಚನೆ ನಡೆಸಿದೆ. ಆರಂಭಿಕ ಹಂತದಲ್ಲಿ ಪ್ರಮುಖ ದ್ವೀಪ ಪ್ರದೇಶಗಳು, ಪರಮಾಣು ಕೇಂದ್ರಗಳ ಮೇಲೆ ಹಿಡಿತ ಸಾಧಿಸುವ ಗುರಿಯೊಂದಿಗೆ ಭೂದಾಳಿಗೆ ಯೋಜನೆ ರೂಪಿಸಲಾಗಿದೆ.
ಆದರೆ, ಪ್ರಬಲ ಭೂ ಸೇನೆ ಹೊಂದಿರುವ ಇರಾನ್ ವಿರುದ್ಧ ಭೂದಾಳಿ ಅಪಾಯಕಾರಿ ಎಂಬುದು ಟ್ರಂಪ್ ಆಡಳಿತಕ್ಕೆ ಅರಿವಿದೆ. 6 ಲಕ್ಷ ಯೋಧರು, 3.50 ಲಕ್ಷ ಸೇನಾ ತುಕಡಿಗಳು, 1.90 ಲಕ್ಷ ಐಆರ್‌ಜಿಸಿ ಯೋಧರ ಪಡೆ ಹೊಂದಿರುವ ಇರಾನ್, ಭೂದಾಳಿಗೆ ಪ್ರಬಲ ಪ್ರತಿರೋಧ ತೋರುವ ಸಾಧ್ಯತೆಗಳಿವೆ. ಇದರೊಂದಿಗೆ ಭಾನು, ಭೂಮಿ, ನೀರು ಮೂರು ಕಡೆಗಳಿಂದಲೂ ಇರಾನ್ ಮೇಲೆ ಭೀಕರ ದಾಳಿ ನಡೆಸಲು ಸಜ್ಜಾಗಿದೆ. ಇದರ ಭಾಗವಾಗಿ, ಅಮೆರಿಕ ತನ್ನ ಬೃಹತ್ ಯುದ್ಧನೌಕೆ ಯುಎಸ್‌ಎಸ್ ನಿಯೋಜಿಸಿದೆ. ಸುಮಾರು 3,500 ನೌಕಾಪಡೆಗಳೊಂದಿಗೆ ಯುಎಸ್ ಸೆಂಟ್ರಲ್ ಕಮಾಂಡ್ ಪ್ರದೇಶಕ್ಕೆ ಆಗಮಿಸಿದೆ.
ಈ ಹಡಗು ಹೆಲಿಕಾಪ್ಟರ್‌ಗಳು, ಎಫ್-35 ಬಿ ಜಂಟಿ ಸ್ಟ್ರೈಕ್ ಫೈಟರ್ ಜೆಟ್‌ಗಳನ್ನು ಸಾಗಿಸಬಲ್ಲದ್ದಾಗಿದೆ. ಆಧುನಿಕ ಯುದ್ಧನೌಕೆ ಯುಎಸ್ ಮಧ್ಯಪ್ರಾಚ್ಯಕ್ಕೆ ಆಗಮಿಸಿದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ, ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ ಮಾಡುವ ಭೀತಿ ಎದುರಾಗಿದೆ.
ಆರಂಭಿಕ ಹಂತದಲ್ಲಿ ಪ್ರಮುಖ ದ್ವೀಪ ಪ್ರದೇಶಗಳು, ಪರಮಾಣು ಕೇಂದ್ರಗಳ ಮೇಲೆ ಹಿಡಿತ ಸಾಧಿಸುವ ಗುರಿಯೊಂದಿಗೆ ಭೂದಾಳಿಗೆ ಯೋಜನೆ ರೂಪಿಸಲಾಗಿದೆ.
ಈ ಮಧ್ಯೆ ಅಗತ್ಯಬಿದ್ದರೆ, ಇನ್ನೂ 10 ಸಾವಿರ ಭೂದಳ ಪಡೆಗಳನ್ನು ಕಳುಹಿಸಲು ಪೆಂಟಗನ್ ನಿರ್ಧರಿಸಿದೆ. ಅಲ್ಲದೇ ಯುನೈಟೆಡ್ ಸ್ಟೇಟ್‌್ಸಮೆರೈನ್ ಕಾರ್ಪ್‌್ಸ ವಿಭಾಗದ 5,000 ಹೆಚ್ಚುವರಿ ಸೈನಿಕರು ಮತ್ತು ಸಾವಿರಾರು ಪ್ಯಾರಾಟ್ರೂಪ್‌ಗಳನ್ನು ಸೇರಿಸುವುದಾಗಿ ಹೇಳಿದೆ.
ಸದ್ಯ ಪಡೆಗಳನ್ನು ನಿಖರವಾಗಿ ಎಲ್ಲಿ ಇರಿಸಲಾಗುತ್ತದೆ ಎನ್ನುವುದನ್ನು ಅಮೆರಿಕದ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಆದರೆ ಪರ್ಷಿಯನ್ ಕೊಲ್ಲಿಯಲ್ಲಿ ನಿಯೋಜಿಸುವ ಸಾಧ್ಯತೆಯಿದೆ. ತೈಲ ರಫ್ತು ಮಾರ್ಗಗಳಾದ ಹಾರ್ಮುಜ್ ಜಲಸಂಧಿ ಮತ್ತು ಖಾರ್ಗ್ ದ್ವೀಪದಂತಹ ಸೂಕ್ಷ್ಮ ಪ್ರದೇಶಗಳ ಮೇಲೆ ಅಮೆರಿಕ ದಾಳಿ ನಡೆಸುವ ಸಾಧ್ಯತೆಗಳಿವೆ.
ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹೆಜ್ಬೊಲ್ಲಾ ಬಂಡುಕೋರ ಪಡೆಯ ಯುದ್ಧ ಟ್ಯಾಂಕ್ ನಿಗ್ರಹ ದಳದ ಕಮಾಂಡರ್ ಹಸನ್ ಮೊಹಮದ್ ಬಶೀರ್ ಹತನಾಗಿದ್ದಾನೆ. ದಕ್ಷಿಣ ಲೆಬನಾನ್‌ನ ಲಿಟಾನಿ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಬಶೀರ್ ಹತರಾಗಿದ್ದಾರೆ ಎಂದು ಐಡಿಎಫ್ ಹೇಳಿಕೊಂಡಿದೆ.
ಅಮೆರಿಕದ ಕದನ ವಿರಾಮ ಪ್ರಸ್ತಾಪದ ನಡುವೆಯೂ ಇರಾನ್-ಇಸ್ರೇಲ್ ದಾಳಿ ಮುಂದುರಿಸಿವೆ. ಟೆಹ್ರಾನ್ ಸೇರಿ ಹಲವು ಪ್ರಮುಖ ಇರಾನಿಯನ್ ಮಿಲಿಟರಿ, ಕೈಗಾರಿಕಾ ನೆಲೆಗಳು, ಪರಮಾಣು ಕೇಂದ್ರಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.
ಪ್ರತಿದಾಳಿ ನಡೆಸಿರುವ ಇರಾನ್, ನೆರೆಯ ಕೊಲ್ಲಿ ದೇಶಗಳಾದ ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈತ್, ಬಹರೇನ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಸೌದಿ ಅರೇಬಿಯಾದ ಪ್ರಿನ್‌್ಸ ಸುಸ್ತಾಲ್ ವಾಯುನೆಲೆ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ. ದಾಳಿಯಲ್ಲಿ ಅಮೆರಿಕ 10 ಯೋಧರು ಗಾಯಗೊಂಡಿದ್ದಾರೆ. ಇರಾನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಸೌದಿ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಯುಎಇ ರಾಜಧಾನಿ ಅಬುಧಾಬಿಯ ಖಲೀಫಾ ಆರ್ಥಿಕ ವಲಯ ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಮೂರು ಕ್ಷಿಪಣಿಗಳನ್ನು ವಾಯು ರಕ್ಷಣಾ ವ್ಯವಸ್ಥೆ ಭೇದಿಸಿದೆ.
ಆದರೆ, ಕ್ಷಿಪಣಿ ಅವಶೇಷಗಳು ಬಿದ್ದು ಐವರು ಭಾರತೀಯರು ಸೇರಿ ಆರು ಮಂದಿ ಗಾಯಗೊಂಡಿದ್ದಾರೆ. ಕುವೈತ್ ವಿಮಾನ ನಿಲ್ದಾಣದ ಮೇಲೂ ದಾಳಿ ನಡೆಸಲಾಗಿದೆ. ಡ್ರೋನ್ ದಾಳಿಯಲ್ಲಿ ವಾಯು ರಕ್ಷಣಾ ವ್ಯವಸ್ಥೆ ಒಳಗೊಂಡ ರೇಡಾರ್ ಸಿಸ್ಟಮ್ ಧ್ವಂಸಗೊಂಡಿದೆ ಎಂದು ವರದಿಯಾಗಿದೆ.
