ಬೆಂಗಳೂರು,ಮಾ.8- ಮಹಿಳೆಯರು ಈಗ ಎಲ್ಲಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಪುರಾಣದಲ್ಲೂ ಅವರ ಪಾತ್ರ ಏನಿತ್ತು ಎಂಬುದು ಜಗತ್ತಿಗೆ ಗೊತ್ತಿದೆ. ಮಹಿಳೆಯರಿಗೆ ಯಾವುದು ಅಸಾಧ್ಯ ಎಂಬುದು ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಗತ್ತಿನಲ್ಲಿ ಎಲ್ಲಾ ದೇಶದಲ್ಲಿ ಮಹಿಳಾ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ನಾಡಿನ ಎಲ್ಲಾ ಮಹಿಳೆಯರಿಗೆ ಅಂತರಾಷ್ಟ್ರೀಯ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದರು. ನನ್ನ ನಂಬಿಕೆ ನನ್ನ ತಾಯಂದಿರ ಮೇಲೆ ಜಾಸ್ತಿ. ಮಹಿಳೆಯರರು ತಮ್ಮ ಕರ್ತವ್ಯ ಪ್ರಜ್ಞಾ ಜೊತೆ ಪ್ರಮಾಣಿಕರಾಗಿರುತ್ತಾರೆ. ಎಲ್ಲಾ ರಂಗದಲ್ಲೂ ಅವರು ಮುಂದೆ ಬಂದಿದ್ದಾರೆ ಎಂದರು.
ಜನ್ಮ ಪೂರ್ವದ ಸಂಬಂಧ ಪ್ರತಿಯೊಬ್ಬ ಮನುಷ್ಯನಿಗೆ ಯಾವುದಾದರೂ ಇದ್ದರೆ ಅದು ತಾಯಿಯ ಸಂಬಂಧ. ನಂತರ ತಂದೆ ಬರ್ತಾರೆ. ಇದೊಂದು ಶ್ರೇಷ್ಠವಾದ ಪವಿತ್ರವಾದ ನೈಸರ್ಗಿಕ ಸಂಬಂಧ. ತಾಯಿ ಸಂಬಂಧ ಇಲ್ಲದೆ ಹೋದರೆ ಬೆಳವಣಿಗೆ ಅಸಾಧ್ಯ. ಇದನ್ನ ಎಲ್ಲಾ ಪುರುಷರು ಅರ್ಥಮಾಡಿಕೊಳ್ಳಬೇಕು ಎಂದರು.
ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ : ವಿದ್ಯಾರ್ಥಿಗಳಿಗೆ ಆಲ್‍ದಿ ಬೆಸ್ಟ್
ಮೊದಲು ಇಂಥ ಕೆಲಸ ಪುರುಷರು ಇಂಥ ಕೆಲಸ ಮಹಿಳೆ ಯರು ಮಾತ್ರ ಮಾಡಬೇಕು ಅಂತಿತ್ತು. ಆದರೆ ಈಗ ಎಲ್ಲಾ ಕ್ಷೇತ್ರದಲ್ಲೂ ಮಹಿಳಯರು ಸೇವೆ ಸಲ್ಲಿಸುತ್ತಿದ್ದಾರೆ. ಅವತ್ತು ಕಿತ್ತೂರು ರಾಣಿ ಚನ್ನಮ್ಮ ಇದ್ದರು. ಇವತ್ತು ನಮ್ಮ ಚೀಫ್ ಸೆಕ್ರೆಟರಿ ವಂದಿತಾ ಶರ್ಮಾ ಇದ್ದಾರೆ. ಮಹಿಳೆಯರು ಈಗ ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ ಎಂದು ಹೇಳಿದರು.
ಬಿಎಂಟಿಸ್ನಲ್ಲಿ ಮಹಿಳಾ ಡ್ರೈವರ್ ಇದ್ದಾರೆ. ಅವರು ಓಡಿಸಿದರೆ ನನಗೆ ಬಹಳ ನಂಬಿಕೆ ಇರುತ್ತದೆ. ಬೇರೆ ನಮ್ಮ ಗಂಡಸರಾದರೆ ಸಂಜೆ ಎಲ್ಲೋ ಹೋಗಬೇಕು ಎಂದು ಯೋಚಿಸುತ್ತಿರುತ್ತಾರೆ ಎಂದು ಹಾಸ್ಯ ಮಾಡಿದರು.
ಮೋದಿ ರೋಡ್ ಶೋ : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಗ ಬದಲಾವಣೆ
ನಾನು ಮಹಿಳಾ ಬಸ್ ಡ್ರೈವರ್ ಒಬ್ಬರನ್ನು ಕೇಳಿದೆ, ಯಾವೆಲ್ಲ ಗಾಡಿ ಓಡಿಸ್ತೀಯಾ ಎಂದಾಗ ಯಾವ ಗಾಡಿ ಕೊಟ್ಟರೂ ಓಡಿಸುತ್ತೇನೆ ಎಂದರು. ಅವರ ಆತ್ಮವಿಶ್ವಾಸ ಕಂಡು ತುಂಬಾ ಸಂತೋಷವಾಯಿತು ಎಂದು ಇದೇ ವೇಳೆ ಸ್ಮರಿಸಿಕೊಂಡರು.
ಈ ವರ್ಷ ನಮ್ಮ ಬಜೆಟ್ನಲ್ಲಿ ರೈತ ಮಹಿಳೆಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ, ಅಂಗನವಾಡಿ ಕಾರ್ಯಕರ್ತರರ ಸಹನೆ ಮೆಚ್ಚುವಂತದ್ದು, ಈ ವರ್ಷ 1 ಸಾವಿರ ಗೌರವ ಧನ ಹೆಚ್ಚಳ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗೌರವ ಧನ ನೀಡುವುದಾಗಿ ಸಿಎಂ ಭರವಸೆ ನೀಡಿದರು.
International Women’s Day, CM Bommai