ಶಾಂತಿ ಸ್ಥಾಪನೆ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರ ಮಹತ್ವ

Social Share

ಮೆಲ್ಬೋರ್ನ್,ಮಾ.6- ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಜಾಗತಿಕವಾಗಿ ಶಾಂತಿ ಸ್ಥಾಪನೆ ಪ್ರಕ್ರಿಯೆಯಲ್ಲಿ ಮಹಿಳೆಯರ ಸಹಭಾಗಿತ್ವ ಮತ್ತು ಸಕ್ರಿಯ ಪಾಲ್ಗೋಳುವಿಕೆಯ ಕುರಿತು ಅಭಿನಂದನೆಗಳು ವ್ಯಕ್ತವಾಗಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ ಬೆನ್ನಲ್ಲೆ ಮಹಿಳೆಯರು ಸೇನೆಯ ಮುಂಚೂಣಿ ಸ್ಥಾನಗಳಿಗೆ ಬಂದು ಕೆಲಸ ಮಾಡಿದ್ದಾರೆ. ಪುರುಷರಿಗೆ ಹೆಚ್ಚು ಆಧ್ಯತೆ ಇದ್ದ ಸೇನೆಯಲ್ಲಿ ಮಹಿಳಾ ಯೋಧರ ನೇಮಕಾತಿ ಹೆಚ್ಚಾಯಿತು.

2018 ರಲ್ಲಿ ಲಿಂಗ-ಅಂತರ್ಗತ ಸುಧಾರಣೆಯ ಭಾಗವಾಗಿ ಸಶಸ್ತ್ರ ಪಡೆಗಳಲ್ಲಿ ಪುರುಷರಿಗೆ ಸಮಾನವಾದ ಅವಕಾಶಗಳನ್ನು ಕಲ್ಪಿಸಲು ಕಾನೂನು ರೂಪಿಸಲಾಯಿತು. ವೆಲ್ಡಿಂಗ್, ಅಗ್ನಿಶಾಮಕ ಮತ್ತು ಅನೇಕ ರಕ್ಷಣಾ ಪಾತ್ರಗಳನ್ನು ಒಳಗೊಂಡಂತೆ 450 ವಿವಿಧ ಉದ್ಯೋಗಗಳಿಗೆ ಮಹಿಳೆಯರಿಗೆ ಅವಕಾಶ ನೀಡಲಾಯಿತು. ಈ ಕೆಲಸಗಳಲ್ಲಿ ತೊಡಗಿಸಿಕೊಂಡ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಆರೋಗ್ಯಕ್ಕೆ ಹಾನಿಯೂ ಆಗಿದೆ.

ಕೋಲ್ಕತ್ತಾದಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆ

ರಷ್ಯಾ ಆಕ್ರಮಣದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಪುರುಷರಂತೆ ಬೇರೆ ರೀತಿಯಲ್ಲಿ ಅಪಾಯಗಳನ್ನು ಎದುರಿಸಿದ್ದಾರೆ. ಯುದ್ಧ ಸಂದರ್ಭದಲ್ಲಿ ಘಟಿಸಿದ ಸಾವುಗಳ ಪೈಕಿ ಶೇ.70ರಷ್ಟು ಮಹಿಳೆಯರು ಯುದ್ಧವಲ್ಲದ ಕಾರಣಗಳಿಗೆ ಬಲಿಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಲಿಂಗ ಸಮಾನತಾ ವಿಭಾಗ ಸಂಗ್ರಹಿಸಿರುವ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.

ಮಹಿಳೆಯರು ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಮತ್ತು ತಾಯಿಯ ಮರಣಗಳಂತಹ ನಿರ್ದಿಷ್ಟ ಮತ್ತು ವ್ಯವಸ್ಥಿತ ಲಿಂಗ ಆಧಾರಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರ ಹೊರತಾಗಿ ಉಕ್ರೇನ್ ಯುದ್ಧ ನೆಲದಲ್ಲಿ ಮಹಿಳೆಯರು ವೀರಾಗ್ರಣಿಗಳಂತೆ ಶತ್ರುಗಳೊಂದಿಗೆ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಶ್ವಸಂಸ್ಥೆಯ ಹೆಗ್ಗುರುತಾಗಿರುವ ಭದ್ರತಾ ಮಂಡಳಿಯು 2000ರಲ್ಲಿ ನಿರ್ಣಯ ಸಂಖ್ಯೆ 1325 ಅನ್ನು ಅಂಗೀಕರಿಸಿ ಶಾಂತಿ ಮತ್ತು ಭದ್ರತೆಯಲ್ಲಿ ಮಹಿಳೆಯರ ಸಕ್ರಿಯ ತೊಡಗಿಸಿಕೊಳ್ಳಲು ಬೆಂಬಲ ವ್ಯಕ್ತಪಡಿಸಿದೆ. ಈ ಮೂಲಕ ಮಹಿಳೆಯರು ಕೇವಲ ಬಲಿಪಶುಗಳಲ್ಲ. ಶಾಂತಿ ಸ್ಥಾಪಕರು, ಸಮಾಲೋಚಕರು ಮತ್ತು ಶಾಂತಿಧೂತರಾಗಿಯೂ ಕೆಲಸ ಮಾಡಬಲ್ಲರು ಎಂದು ಸಾಬೀತು ಪಡಿಸಿದೆ.

ದೇಶದ ಹೆಮ್ಮೆ INS ವಿಕ್ರಾಂತ್‍ನಲ್ಲಿ ನೌಕಾಪಡೆ ಕಮಾಂಡರ್‌ಗಳ ಸಭೆ

ಅಫ್ಘಾನಿಸ್ತಾನದಲ್ಲಿ ಮೂಲಭೂತವಾದಿಗಳ ರೂಢಿಗಳು ಮತ್ತು ವರ್ತನೆಗಳು ಮಹಿಳೆಯರು ರಚನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವಿಕೆಗೆ ಸವಾಲೊಡ್ಡಿದೆ. ಅಫ್ಘಾನಿಸ್ತಾನಿಯರಲ್ಲಿನ ಧಾರ್ಮಿಕತೆ ಮಹಿಳೆ ಮಕ್ಕಳಿಗೆ ಜನ್ಮ ನೀಡಲು ಮತ್ತು ಕುಟುಂಬವನ್ನು ಪಾಲನೆ ಮಾಡಲು ಮಾತ್ರ ಇದ್ದಾಳೆ ಎಂದು ನಂಬಿಸಲಾಗಿದೆ. ಅವಳು ಬೇರೇನೂ ಮಾಡಬಾರದು ಎಂಬ ಕಟ್ಟಪ್ಪಣೆಯಿದೆ ಎಂದು ಬಾಂಗ್ಲಾದೇಶದ ಬಾರಕ್ ವಿಶ್ವವಿದ್ಯಾಲಯದ ಅಫ್ಘಾನಿ ವಿದ್ಯಾರ್ಥಿನಿ ಹೇಳಿದ್ದಾಳೆ.

ವಿಶ್ವವಿದ್ಯಾಲಯದ ಶಾಂತಿ ಮತ್ತು ನ್ಯಾಯ ಕೇಂದ್ರದಲ್ಲಿ ಕೆಲಸ ಮಾಡುವ ಮಂಜೂರ್ ಹಸನ್ ಮತ್ತು ಅರಾಫತ್ ರೆಜ ಅವರು, ಅನೇಕ ಮಹಿಳೆಯರು ಶಾಂತಿ ಸ್ತಾಪನೆಗಾಗಿ ಕೆಲಸ ಮಾಡುತ್ತಾರೆ, ಆದರೂ ಹೆಚ್ಚಿನ ಸಂದರ್ಭಗಳಲ್ಲಿ ರಹಸ್ಯವಾಗಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ.

ಬ್ರಿಟನ್ ಸಂಸತ್‍ನಲ್ಲಿ ರಾಹುಲ್ ಭಾಷಣ

ನಾನು ಕೂಡ ಯುಎನ್‍ಎಚ್‍ಸಿಆರ್‍ಗೆ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ. ಅಫ್ಘಾನಿಸ್ತಾನದಲ್ಲಿ 2005 ಮತ್ತು 2020 ರ ನಡುವೆ ನಡೆದ ಶೇ.80ರಷ್ಟು ಶಾಂತಿ ಮಾತುಕತೆಗಳಲ್ಲಿ ಮಹಿಳೆಯರನ್ನು ಹೊರಗಿಡಲಾಗಿದೆ| 67 ಸಭೆಗಳು ಮತ್ತು ಮಾತುಕತೆಗಳಲ್ಲಿ ಕೇವಲ 15 ರಲ್ಲಿ ಮಹಿಳೆಯರು ಭಾಗವಹಿಸಿದ್ದಾರೆ. ಮಹಿಳೆಯರನ್ನು ಶಿಕ್ಷಣದಿಂದ ವಂಚಿಸುವ ಮೂಲಕ ಶಾಂತಿ ಪ್ರಕ್ರಿಯೆಗಳಿಗೆ ಹಿನ್ನೆಡೆ ಮಾಡಲಾಗುತ್ತಿದೆ ಎಂದು ಅಭಿಪ್ರಾಯ ಪಡಲಾಗಿದೆ.

International, Women Day, Women, frontline, peace,

Articles You Might Like

Share This Article