ವಿಶ್ವಸಂಸ್ಥೆ 2023ನ್ನು ಅಂತಾರಾಷ್ಟ್ರೀಯ ರಾಗಿ ವರ್ಷವೆಂದು ಘೋಷಿಸಿದೆ : ಮೋದಿ

Social Share

ನವದೆಹಲಿ,ಜ.8- ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮೂಲಸೌಲಭ್ಯ ಹೆಚ್ಚಳ, ಹೂಡಿಕೆ, ಸಂಶೋಧನೆ ಮತ್ತು ಸರ್ವರನ್ನು ಒಳಗೊಳ್ಳುವಿಕೆಯ ನಾಲ್ಕು ಆಧಾರ ಸ್ಥಂಭಗಳ ಮೇಲೆ ಗಮನ ಕೇಂದ್ರಿಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಎಲ್ಲಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳ ಎರಡನೇ ಸಮಾವೇಶವನ್ನು ನವದೆಹಲಿಯಲ್ಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು, ಇಡೀ ವಿಶ್ವವೇ ಭಾರತದ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಿಕೊಂಡಿದೆ. ಇದರಿಂದಾಗಿ ಜಾಗತಿಕ ಸರಬರಾಜು ಸರಪಳಿಯ ಸ್ಥಿರತೆಯಲ್ಲಿ ಭಾರತ ಮಹತ್ವದ ಪಾತ್ರ ವಹಿಸುವಂತೆ ಮಾಡಿದೆ ಎಂದರು.

ಭಾರತದ ಉಪಕ್ರಮದ ಮೇರೆಗೆ ವಿಶ್ವಸಂಸ್ಥೆ 2023 ನ್ನು ಅಂತಾರಾಷ್ಟ್ರೀಯ ರಾಗಿ ವರ್ಷವೆಂದು ಘೋಷಿಸಿದೆ. ರಾಗಿ ಸ್ಮಾರ್ಟ್ ಆಹಾರ ಮಾತ್ರವಲ್ಲ. ಪರಿಸರ ಸ್ನೇಹಿ ಮತ್ತು ಇದು ಸುಸ್ಥಿರ ಭವಿಷ್ಯದ ಆಹಾರವಾಗಿ ಹೊರಹೊಮ್ಮಲಿದೆ.

ರಾಗಿ ಉತ್ಪನ್ನಗಳಿಗೆ ಸಂಬಂಧಿಸಿದ ಸಂಶೋಧನೆಗೆ ರಾಜ್ಯಗಳು ಶ್ರಮಿಸಬೇಕು. ದೇಶದಾದ್ಯಂತ ಪ್ರಮುಖ ಸಾರ್ವಜನಿಕ ಸ್ಥಳಗಳು ಮತ್ತು ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಮಿಲ್ಲೆಟ್ ಕೆಫೆಗಳನ್ನು ಸ್ಥಾಪಿಸಬೇಕು. ರಾಜ್ಯಗಳಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಭೆಗಳಲ್ಲಿ ರಾಗಿ ಮತ್ತು ಅದರ ಉತ್ಪನ್ನಗಳನ್ನು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.

ಇಂದು ಜಾಗತಿಕವಾಗಿ ಯಾವುದೇ ನಿರ್ಣಯಗಳಾಗಬೇಕಾದರೂ ಭಾರತವನ್ನು ಮುಂಚೂಣಿಯಾಗಿ ಪರಿಗಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶ ಈ ಅವಕಾಶದ ಲಾಭಗಳನ್ನು ರಾಜ್ಯಗಳು ಪಡೆದುಕೊಳ್ಳಬೇಕು ಮತ್ತು ಅಭಿವೃದ್ಧಿ ಹಾಗೂ ಗುಣಮಟ್ಟ ಪಾಲನೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಕಾಸರಗೂಡಿನಲ್ಲಿ ಬೀಡಿ ಕಟ್ಟುತ್ತಿದ್ದ ವ್ಯಕ್ತಿ ಇಂದು ಟೆಕ್ಸಾಸ್ ಜಿಲ್ಲಾ ನ್ಯಾಯಾಧೀಶ..!

ನಿನ್ನೆ ಮುಕ್ತಾಯವಾದ ಮೂರು ದಿನಗಳ ಸಮಾವೇಶದಲ್ಲಿ ಸುಸ್ಥಿರ ಮತ್ತು ಶೀಘ್ರ ಆರ್ಥಿಕ ಬೆಳವಣಿಗೆ ರಾಜ್ಯಗಳ ಪಾಲುದಾರಿಕೆ ಬಹಳ ಮುಖ್ಯವಾಗಿದೆ. ರಾಜ್ಯಗಳು ಅಭಿವೃದ್ಧಿ ಪರ ಆಡಳಿತಕ್ಕೆ ಗಮನ ನೀಡಬೇಕು. ಸುಲಭವಾದ ವ್ಯಾಪಾರ ಪರಿಸರ ಸೃಷ್ಟಿ, ಸುಲಭ ಜೀವನ, ಸಂವೃದ್ಧ ಮೂಲಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅರ್ಥಹೀನ ಅನುಸರಣೆ, ಹಳೆಯ ಕಾನೂನು, ನಿಯಮಗಳನ್ನು ಕೈ ಬಿಡಬೇಕು ಎಂದು ಮುಖ್ಯಕಾರ್ಯದರ್ಶಿಗಳಿಗೆ ಕರೆ ನೀಡಿದ ಪ್ರಧಾನಿಯವರು, ಭಾರತವು ಸಾಟಿಯಿಲ್ಲದ ಸುಧಾರಣೆಗಳನ್ನು ಪ್ರಾರಂಭಿಸುತ್ತಿರುವ ಸಮಯದಲ್ಲಿ, ಅತಿಯಾದ ನಿಯಂತ್ರಣ ಮತ್ತು ಬುದ್ದಿಹೀನ ನಿರ್ಬಂಧಗಳಿಗೆ ಅವಕಾಶ ಇರಬಾರದು ಎಂದು ಹೇಳಿದರು.

ದೇಶಾದ್ಯಂತ ಗುರುತಿಸಲಾದ 500 ಬ್ಲಾಕ್‍ಗಳಲ್ಲಿ ನಾಗರಿಕರಿಗೆ ಜೀವನ ಸೌಕರ್ಯವನ್ನು ಸುಧಾರಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಪ್ರಧಾನಿ ಇದೇ ವೇಳೆ ಚಾಲನೆ ನೀಡಿದರು. ವಿವಿಧ ಸರ್ಕಾರಿ ಇಲಾಖೆಗಳು ಒಂದೇ ರೀತಿಯ ದಾಖಲೆಗಳನ್ನು ಹೇಗೆ ಕೇಳುತ್ತವೆ ಎಂಬುದನ್ನು ಪ್ರಸ್ತಾಪಿಸಿದ ಅವರು, ಸ್ವಯಂ ಪ್ರಮಾಣೀಕರಣ, ಡೀಮ್ಡ್ ಅನುಮೋದನೆಗಳು ಮತ್ತು ಫಾರ್ಮ್‍ಗಳ ಪ್ರಮಾಣೀಕರಣ ಮಾರ್ಗಗಳನ್ನು ಬಳಸಿಕೊಂಡು ಫಲಾನುಭವಿಗಳಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.

ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳೆರಡನ್ನೂ ಉತ್ತಮಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್‍ಪ್ಲಾನ್ ಅನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯವನ್ನು ಬಲಪಡಿಸಬೇಕು. ಇದು ದೇಶ ಸ್ವಾವಲಂಭಿಯಾಗಲು ಸಹಕಾರಿಯಾಗಲಿದೆ.

ಆರ್ಥಿಕ ಬೆಳವಣಿಗೆ ಪೂರಕವಾಗಿದೆ. ಸ್ಥಳೀಯ ಉತ್ಪನ್ನಗಳನ್ನು ಜನಪ್ರಿಯಗೊಳಿಸುವುದರಿಂದ ಆತ್ಮನಿರ್ಭರ್ ಯಶಸ್ಸು ಅಡಗಿದೆ. ಆರ್ಥಿಕತೆಯ ಪ್ರತಿಯೊಂದು ಕ್ಷೇತ್ರದಲ್ಲೂ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ತಾಕೀತು ಮಾಡಿದರು. ಸರಾಜ್ಯಗಳು ಬಲವಾದ ಸೈಬರ್ ಭದ್ರತಾ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಜನಸಾಮಾನ್ಯರಿಗೂ ಇದರಿಂದ ಬಹಳ ತೊಂದರೆಯಾಗುತ್ತಿದೆ. ಬಲಿಷ್ಠ ವ್ಯವಸ್ಥೆಯನ್ನು ರೂಪಿಸಿ ಸೈಬರ್ ಸುರಕ್ಷತೆಯನ್ನು ಖಚಿತ ಪಡಿಸಬೇಕು. ಸೈಬರ್ ಸುರಕ್ಷತೆಯ ಮೇಲಿನ ಹೂಡಿಕೆ ಭವಿಷ್ಯದ ವಿಮಾ ಹೂಡಿಕೆಯಂತೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ದೇಶವೂ ವಿಶಾಲವಾದ ವಿಶೇಷ ಆರ್ಥಿಕ ವಲಯವು ಸಂಪನ್ಮೂಲಗಳೊಂದಿಗೆ ಸುಸಜ್ಜಿತವಾಗಿದೆ ಮತ್ತು ದೇಶಕ್ಕೆ ಪ್ರಚಂಡ ಅವಕಾಶಗಳನ್ನು ನೀಡುತ್ತದೆ. ಸರಕು ಸಾಗಾಣಿಕೆಗೆ ಸಮುದ್ರ ಮಾರ್ಗ ಬಳಕೆಯಿಂದ ಹೆಚ್ಚು ಅನುಕೂಲಕರವಾಗಿದೆ.

ಚೀನಾದಲ್ಲಿ ಸರಣಿ ಅಪಘಾತ, 17 ಮಂದಿ ಸಾವು

ಅದಕ್ಕಾಗಿ ಕರಾವಳಿ ತೀರಗಳನ್ನು ಸುಧಾರಿಸಲು ಆದ್ಯತೆ ನೀಡಬೇಕು. ವೃತ್ತಾಕಾರದ ಆರ್ಥಿಕತೆಯ ಬದುಕಿನ ಸುಧಾರಣೆಗೆ ಪ್ರಮುಖ ಪಾತ್ರವಹಿಸಲಿದೆ. ಮಿಷನ್ ಲೈಫ್ (ಪರಿಸರದ ಜೀವನಶೈಲಿ) ಮತ್ತು ಅದನ್ನು ಮುಂದುವರಿಸುವಲ್ಲಿ ರಾಜ್ಯಗಳು ಪ್ರಮುಖ ಪಾತ್ರವಹಿಸಬೇಕು ಎಂದರು ಪ್ರತಿಪಾದಿಸಿದರು.

ರಾಜ್ಯಗಳಲ್ಲಿ ಜಿ-20 ಸಭೆಗಳಿಗೆ ಸಂಬಂಸಿದ ಸಿದ್ಧತೆಗಳಿಗಾಗಿ ಪ್ರಧಾನಮಂತ್ರಿಯವರು ಸಾಮಾನ್ಯ ನಾಗರಿಕರನ್ನು ಒಳಗೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು. ಅಕಾರಶಾಹಿಯ ಸಾಮಥ್ರ್ಯವನ್ನು ಹೆಚ್ಚಿಸುವ ಅಗತ್ಯತೆ ಮತ್ತು ಮಿಷನ್ ಕರ್ಮಯೋಗಿಯ ಪ್ರಾರಂಭದ ಬಗ್ಗೆಯೂ ಪ್ರಧಾನಿ ಮೋದಿ ಚರ್ಚಿಸಿದರು.

International Year of Millets, India, promote, ragi, PM Modi,

Articles You Might Like

Share This Article