ನವದೆಹಲಿ,ಜ.21- ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರ ಪದಚ್ಯುತಿ, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ತನಿಖೆಗೆ ಉಸ್ತುವಾರಿ ಸಮಿತಿಯನ್ನು ರಚನೆ ಸೇರಿದಂತೆ ಹಲವು ಭರವಸೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಕುಸ್ತಿ ಪಟುಗಳ ಪ್ರತಿಭಟನೆ ನಿನ್ನೆ ತಡ ರಾತ್ರಿ ಅಂತ್ಯಗೊಂಡಿದೆ.
ಕೇಂದ್ರ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಅನುರಾಗ್ಸಿಂಗ್ ಠಾಕೂರ್ ಅವರೊಂದಿಗೆ ನಡೆದ ಸುದೀರ್ಘ ಮಾತುಕತೆಯಲ್ಲಿ ಕೆಲ ಸ್ಪಷ್ಟ ಭರವಸೆಗಳು ದೊರೆತಿದ್ದವು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮುಷ್ಕರ ಅಂತ್ಯಗೊಳಿಸುವುದಾಗಿ ಘೋಷಿಸಲಾಗಿದೆ.
ತನಿಖೆಗಾಗಿ ರಚಿಸಲಾಗಿರುವ ಉಸ್ತುವಾರಿ ಸಮಿತಿಯೇ ಫೆಡರೇಶನ್ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಬೇಕು ಎಂದು ನಿರ್ಧರಿಸಲಾಗಿದೆ. ಈ ಮೂಲಕ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮತ್ತು ಅಥ್ಲೇಟಿಕ್ಗಳ ನಡುವಿಬ ಸಂಘರ್ಷ ತಾತ್ಕಾಲಿಕವಾಗಿ ಕೊನೆಗೊಂಡಿದೆ. ಕುಸ್ತಿಪಟುಗಳ ಮೊದಲ ಬೇಡಿಕೆಯಾಗಿ ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಪದಚ್ಯುತಿಗೆ ಸೂಚನೆ ನೀಡಲಾಗಿದೆ.
ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ
ಕೇಂದ್ರ ಸಚಿವ ಅನುರಾಗ್ ಠಾಕೂರ್ರೊಂದಿಗೆ ಕಿಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ರವಿ ದಹಿಯಾ ಸೇರಿದಂತೆ ಅನೇಕರು ಜಂತರ್ ಮಂತರ್ನಲ್ಲಿ ಸಂಧಾನ ಸಭೆ ನಡೆಸಿದರು. ಬಳಿಕ ಸಚಿವರು ತಮ್ಮ ನಿವಾಸದಲ್ಲಿ ಕುಸ್ತಿಪಟುಗಳ ಜೊತೆ ತಡರಾತ್ರಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಅಗ್ನಿಪರೀಕ್ಷೆ ಕೊನೆಗೊಂಡಿದೆ, ಸಮಿತಿಯ ರಚನೆ ಮಾಡಿ, ಒಂದು ತಿಂಗಳ ಅವಧಿಯಲ್ಲಿ ವರದಿ ಪಡೆಯಲಾಗುವುದು ಎಂದು ತಿಳಿಸಿದರು.
ಮೇಲ್ವಿಚಾರಣಾ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ, ಸಮಿತಿಯ ಹೆಸರನ್ನು ಶೀಘ್ರವೇ ಪ್ರಕಟಿಸಲಾಗುವುದು. ಆರ್ಥಿಕ ಅಥವಾ ಲೈಂಗಿಕ ಕಿರುಕುಳದ ಎಲ್ಲಾ ಆರೋಪಗಳನ್ನು ಸಮಿತಿ ಸಂಪೂರ್ಣವಾಗಿ ತನಿಖೆ ಮಾಡಲಿದೆ. ತನಿಖೆ ಮುಗಿಯುವವರೆಗೆ ಹಾಲಿ ಅಧ್ಯಕ್ಷ ಶರಣ್ ಸಿಂಗ್ ಬದಿಗೆ ಸರಿಯಲಿದ್ದಾರೆ ಮತ್ತು ತನಿಖೆಗೆ ಸಹಕರಿಸುತ್ತಾರೆ ಎಂದು ಐದು ಗಂಟೆಗಳ ಕಾಲ ನಡೆದ ಸಭೆಯ ಬಳಿಕ ಠಾಕೂರ್ ಹೇಳಿದರು.
ಕುಸ್ತಿಪಟುಗಳ ಪರವಾಗಿ, ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ, ಪ್ರತಿಭಟನೆ ಬೇಕೆಂದು ಮಾಡಿದ್ದಲ್ಲ, ಅನಿವಾರ್ಯ ಪರಿಸ್ಥಿತಿ ನಮ್ಮನ್ನು ಅದಕ್ಕೆ ದೂಡಿತ್ತು. ಪ್ರಸ್ತುತ ಪ್ರತಿಭಟನೆ ಮುಗಿದಿದೆ. ಸಚಿವರು ನಮಗೆ ಸುರಕ್ಷತೆ ಮತ್ತು ಭದ್ರತೆಯನ್ನು ಭರವಸೆ ನೀಡಿದ್ದಾರೆ. ಕುಸ್ತಿ ಫೆಡರೇಷನ್ನ ಅಧ್ಯಕ್ಷರು ಈ ಮೊದಲು ನಮಗೆ ಬೆದರಿಕೆ ಹಾಕಿದ್ದರು. ಟೋಕಿಯೊ ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ ಅರ್ಹತಾ ಪಂದ್ಯಗಳು ಸಮೀಪಿಸುತ್ತಿರುವ ಕಾರಣ 2023 ನಿರ್ಣಾಯಕ ವರ್ಷವಾಗಿದೆ ಎಂದರು.
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಟಿಎಂಸಿ ಯುವ ನಾಯಕನ ಬಂಧನ
ಕ್ರೀಡಾ ಸಚಿವರಾಗಲಿ ಅಥವಾ ಕುಸ್ತಿಪಟುಗಳಾಗಲಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಈ ಮೊದಲು ಡಬ್ಲ್ಯುಎಫ್ಐ ಅಧ್ಯಕ್ಷರನ್ನು ವಜಾಗೊಳಿಸುವವರೆಗೆ ಮತ್ತು ಒಕ್ಕೂಟವನ್ನು ವಿಸರ್ಜಿಸುವವರೆಗೂ ಧರಣಿಯನ್ನು ಮುಂದುವರೆಸುವುದಾಗಿ ಕುಸ್ತಿಪಟುಗಳು ಪಟ್ಟು ಹಿಡಿದಿದ್ದರು.
IOA, sets, committee, probe, charges, wrestling, chief,Brij Bhushan,