ರಾಯಲ್ಸ್ ವಿರುದ್ಧ ಗೆದ್ದು ಪ್ಲೇಆಫ್‍ಗೇರಲು ಕೊಹ್ಲಿ ಹುಡುಗರ ಕಾತುರ

Spread the love

ದುಬೈ, ಸೆ.29- ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧ 54 ರನ್‍ಗಳ ಭಾರೀ ಅಂತರದಿಂದ ಗೆಲುವು ಸಾಸಿರುವ ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಸಂಜು ಸಮನ್ಸ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡದ ಸವಾಲನ್ನು ಎದುರಿಸಲಿದೆ.

ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಕಳೆದ ಋತುವಿನಲ್ಲಿ ಉತ್ತಮ ಸಾಧನೆಯನ್ನೇ ಮಾಡಿ ಎರಡೂ ಪಂದ್ಯದಲ್ಲೂ ಆರ್‌ಸಿಬಿಯೇ ಗೆಲ್ಲುವ ಕುದುರೆಯಾಗಿದೆ. ಆರ್‌ಸಿಬಿ ತಂಡವು ಅಬ್ಬರ ನಾಡಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಸೋಲು ಕಂಡರೂ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ಲಯಕ್ಕೆ ಮರಳುವ ಮೂಲಕ ಪಾಯಂಟ್ಸ್ ಪಟ್ಟಿಯಲ್ಲಿ 3ನೆ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಇಂದಿನ ಪಂದ್ಯವನ್ನು ಗೆದ್ದರೆ ಪ್ಲೇಆಫ್‍ಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ.

ಇನ್ನು ಸಂಜು ಸಮ್ಸನ್ ಸಾರಥ್ಯದ ಕಥೆಯು ಇದಕ್ಕಿಂತ ಭಿನ್ನವಾಗಿಲ್ಲ, ಆ ತಂಡದಲ್ಲಿ ಘಟಾನುಘಟಿ ಬ್ಯಾಟ್ಸ್‍ಮನ್‍ಗಳಿದ್ದರೂ ಸಂಜು ಬಿಟ್ಟರೆ ಉಳಿದ ಆಟಗಾರರಿಂದ ಸೋಟಕ ಆಟ ಹೊರಬಾರದ ಕಾರಣ ತಂಡವು ಸತತ ಸೋಲಿನ ಸುಳಿಯಲ್ಲಿ ಸಿಲುಕಿದೆ. ಆರ್‍ಆರ್ ಇದುವರೆಗೂ 10 ಪಂದ್ಯಗಳನ್ನಾಡಿದ್ದು 4 ರಲ್ಲಿ ಮಾತ್ರ ಗೆಲುವು ಸಾಸಿ 8 ಅಂಕಗಳನ್ನು ಕಲೆ ಹಾಕುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, ಪ್ಲೇಆಫ್‍ಗೇರಲು ಇಂದಿನ ಪಂದ್ಯ ಮಹತ್ತರದ್ದಾಗಿದೆ.

# ತ್ರಿಮೂರ್ತಿಗಳ ಅಬ್ಬರ:
ಆರ್‌ಸಿಬಿ ಪರ ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ (307 ರನ್, 10 ಪಂದ್ಯ, 3 ಅರ್ಧಶತಕ) ಹಾಗೂ ದೇವದತ್ ಪಡಿಕ್ಕಲ್ (287 ರನ್, 9 ಪಂದ್ಯ, 1 ಶತಕ , 1 ಅರ್ಧಶತಕ)ಅವರು ತಂಡಕ್ಕೆ ಉತ್ತಮ ಜೊತೆಯಾಟ ನೀಡುತ್ತಿರುವುದು ತಂಡವು ಬೃಹತ್ ಮೊತ್ತ ಗಳಿಸಲು ಸಹಕಾರಿಯಾಗಿದೆ.
ಮಧ್ಯಮ ಕ್ರಮಾಂಕದಲ್ಲಿ ಸೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‍ವೆಲ್ (300 ರನ್, 10 ಪಂದ್ಯ, 3ಅರ್ಧಶತಕ) ತಂಡಕ್ಕೆ ಉತ್ತಮ ಆಸರೆಯಾಗಿದ್ದರೆ, ಮಿಸ್ಟರ್ 360 ಖ್ಯಾತಿಯ ಎಬಿಡಿ ವಿಲಿಯರ್ಸ್ ಹಾಗೂ ಯುವ ಆಟಗಾರ ಶಿಖರ್ ಭರತ್, ಡೇನ್ ಕ್ರಿಶ್ಚಿಯನ್, ಕೈಲ್ ಜೆಮ್ಮಿಸನ್ ಅವರು ಸಿಡಿದೆದ್ದರೆ ಆರ್‌ಸಿಬಿ ಬೃಹತ್ ಮೊತ್ತವನ್ನು ಗಳಿಸಬಹುದು.

# ಸಂಜು ಆಸರೆ:
ರಾಜಸ್ಥಾನ್ ರಾಯಲ್ಸ್ ಪರ ಸಂಜುಸಮ್ಸನ್ ( 433 ರನ್, 10 ಪಂದ್ಯ, 1 ಶತಕ, 2 ಅರ್ಧಶತಕ), ಜೋಶ್‍ಬಟ್ಲರ್( 254 ರನ್, 7 ಪಂದ್ಯ, 1 ಅರ್ಧಶತಕ) ಬಿಟ್ಟರೆ ಉಳಿದ ಆಟಗಾರರಿಂದ ಬೃಹತ್ ರನ್ ಹರಿದು ಬರದಿರುವುದು ಸಂಜುರ ತಲೆನೋವಾಗಿದೆ. ತಂಡಕ್ಕೆ ಬಟ್ಲರ್‍ರ ಕೊರತೆಯು ಕಾಡುತ್ತಿದೆ.

# ಹರ್ಷಲ್ ಕಮಾಲ್:
ಮುಂಬೈ ಇಂಡಿಯನ್ಸ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಆರ್‍ಸಿಬಿ ಯುವ ವೇಗಿ ಹರ್ಷಲ್ ಪಟೇಲ್ (23 ವಿಕೆಟ್) ಅವರು ಆರ್ ಆರ್ ತಂಡಕ್ಕೆ ಡೆತ್ ಓವರ್‍ನಲ್ಲಿ ಬ್ಯಾಟ್ಸ್‍ಮನ್‍ಗಳಿಗೆ ಲಗಾಮು ಹಾಕುವ ತಂತ್ರವನ್ನು ಕಲಿತಿದ್ದಾರೆ. ಇವರಿಗೆ ಸ್ಪಿನ್ ಯಜುವೇಂದ್ರ ಚಹಾಲ್ (9ವಿಕೆಟ್), ಕೇಲ್ ಜೆಮ್ಮಿಸನ್ (9 ವಿಕೆಟ್) ಸಾಥ್ ನೀಡುತ್ತಿದ್ದಾರೆ.

ಬೌಲರ್‍ಗಳ ಪರದಾಟ:
ರಾಜಸ್ಥಾನ್ ರಾಯಲ್ಸ್‍ನಲ್ಲೂ ವಿಶ್ವ ಶ್ರೇಷ್ಠ ಬೌಲರ್‍ಗಳಿದ್ದರೂ ಕೂಡ ಅವರನ್ನು ಸರಿಯಾದ ಸಮಯದಲ್ಲಿ ಬಳಸಿಕೊಳ್ಳಲು ನಾಯಕ ಸಂಜು ಸಮ್ಸನ್ ಎಡವಿದ್ದಾರೆ.

ಉತ್ತಮ ಬೌಲಿಂಗ್ ಮಾಡುತ್ತಿ ರುವ ಕ್ರಿಸ್ ಮೋರಿಸ್(14ವಿಕೆಟ್) ಎದುರಾಳಿ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕುತ್ತಿದ್ದರೆ, ಮುಷ್ತಾಫಿಜುರ್ ರೆಹಮಾನ್ (11 ವಿಕೆಟ್), ಸರ್ಕಾರಿಯಾ (11 ವಿಕೆಟ್) ಕೂಡ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ ಆದರೂ ಸರಿಯಾದ ಸಮಯದಲ್ಲಿ
ಇವರನ್ನು ಬಳಸಿಕೊಳ್ಳದೆ ಸಂಜು ಎಡುತ್ತಿರುವುದೇ ತಂಡದ ಸೋಲಿಗೆ ಕಾರಣವಾಗಿದೆ.ಒಟ್ಟಾರೆ ಆರ್‍ಸಿಬಿ ಹಾಗೂ ಆರ್‍ಆರ್ ತಂಡವು ಪ್ರೇಕ್ಷಕರಿಗೆ ಉತ್ತಮ ಮನರಂಜನೆಯನ್ನು ನೀಡುವುದಂತೂ ಖಚಿತ.

# 7000 ರನ್ ಗಳಿಸುವತ್ತ ಮ್ಯಾಕ್ಸಿ ಚಿತ್ತ
ದುಬೈ, ಸೆ. 29- ಆರ್‍ಸಿಬಿ ತಂಡದ ಸೋಟಕ ಬ್ಯಾಟ್ಸ್‍ಮನ್ ಗ್ಲೆನ್ ಮ್ಯಾಕ್ಸ್‍ವೆಲ್ ಅವರು ಚುಟುಕು ಮಾದರಿಯ ಕ್ರಿಕೆಟ್‍ನಲ್ಲಿ 7 ಸಾವಿರ ರನ್ ಗಳಿಸುವತ್ತ ಚಿತ್ತ ಹರಿಸಿದ್ದಾರೆ.

ಆಸ್ಟ್ರೇಲಿಯಾದ ಸೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‍ವೆಲ್ ಇದುವರೆಗೂ 72 ಅಂತರರಾಷ್ಟ್ರೀಯ ಚುಟುಕು ಪಂದ್ಯಗಳಲ್ಲಿ 1780 ರನ್, 92 ಐಪಿಎಲ್ ಪಂದ್ಯಗಳಲ್ಲಿ 1805 ರನ್ ಸೇರಿದಂತೆ ಒಟ್ಟು 316 ಟ್ವೆಂಟಿ -20 ಪಂದ್ಯಗಳನ್ನಾಡಿ 6974 ರನ್ ಗಳಿಸಿದ್ದು ಇಂದಿನ ಆರ್‍ಆರ್ ವಿರುದ್ಧದ ಪಂದ್ಯದಲ್ಲಿ 24 ರನ್ ಗಳಿಸಿದರೆ 7 ಸಹಸ್ರ ರನ್ ಗಳಿಸಿದ ಬ್ಯಾಟರ್‍ಗಳ ಸಾಲಿಗೆ ಸೇರಲಿದ್ದಾರೆ.

Facebook Comments