ಟಾಪ್ 2 ಸ್ಥಾನ ದಕ್ಕಿಸಿಕೊಳ್ಳಲು ಕೆ.ಎಲ್.ರಾಹುಲ್ ಪಡೆ ಹೋರಾಟ

Spread the love

ಮುಂಬೈ, ಮೇ 18- ಇಲ್ಲಿನ ಡಿ.ವೈ.ಪಾಟೀಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಲಕ್ನೋ ಸೂಪರ ಜೈಂಟ್ಸ್ ಹಾಗೂ ಶ್ರೇಯಾಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಲೀಗ್‍ನ ಕೊನೆಯ ಪಂದ್ಯವನ್ನು ಆಡುತ್ತಿದ್ದು ಗೆಲುವಿನ ಮೂಲಕ ಮುಗಿಸಲು ಹಾತೊರೆಯುತ್ತಿದ್ದಾರೆ.

ಕೆಕೆಆರ್ ಈಗಾಗಲೇ ಪ್ಲೇಆಫ್ ರೇಸ್‍ನಿಂದ ಹೊರಬಿದ್ದಿದ್ದರೂ ಕೂಡ ಪಾಯಿಂಟ್ಸ್ ಪಟ್ಟಿಯಲ್ಲಿ 2ನೆ ಸ್ಥಾನವನ್ನು ದಕ್ಕಿಸಿಕೊಳ್ಳಲು ಲಕ್ನೋ ಪಡೆ ಭಾರೀ ರನ್ ಅಂತರದಿಂದ ಗೆಲ್ಲುವ ಅನಿವಾರ್ಯತೆಯಿದೆ.

ಸಂಜು ಸಮ್ಸನ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ಪ್ರಸಕ್ತ ಪಾಯಿಂಟ್ಸ್ ಪಟ್ಟಿಯಲ್ಲಿ 2ನೆ ಸ್ಥಾನದಲ್ಲಿದ್ದು ಮುಂದಿನ ಪಂದ್ಯದಲ್ಲಿ ಸೋತರೆ ಆಗ ಪಾಯಿಂಟ್ಸ್ ಪಟ್ಟಿಯಲ್ಲಿ ಬದಲಾವಣೆ ಆಗುವುದರಿಂದ ಇಂದಿನ ಪಂದ್ಯದಲ್ಲಿ ಲಕ್ನೋಗೆ ಭಾರೀ ಅಂತರದಿಂದ ಗೆಲುವು ಅವಶ್ಯಕವಾಗಿದೆ.

ಆರಂಭಿಕರೇ ಜೀವಾಳ: ಲಕ್ನೋ ಸೂಪರ್ ಜೈಂಟ್ಸ್‍ಗೆ ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ ಹಾಗೂ ದಕ್ಷಿಣ ಆಫ್ರಿಕಾದ ಕ್ಲಿಂಟನ್ ಡಿ ಕಾಕ್ ಅವರೇ ಜೀವಾಳವಾಗಿದ್ದಾರೆ. ಈ ಇಬ್ಬರು ಆಟಗಾರರ ಪೈಕಿ ಒಬ್ಬರು ಸೋಟಕ ಬ್ಯಾಟಿಂಗ್ ನಡೆಸಿದರೆ ಬೃಹತ್ ಮೊತ್ತ ಕಲೆ ಹಾಕಬಹುದು. ಇದಕ್ಕೆ ತದ್ವಿರುದ್ಧ ವಾಗಿರುವ ಕೆಕೆಆರ್ ಆರಂಭಿಕರ ಕೊರತೆ ಅನುಭವಿಸುತ್ತಿದೆ, ಕಳೆದೆರಡು ಪಂದ್ಯಗಳಿಂದ ಆರಂಭಿಕ ಆಟಗಾರನಾಗಿದ್ದ ಅಜೆಂಕಾ ರಹಾನೆ ಐಪಿಎಲ್‍ನಿಂದ ಸಂಪೂರ್ಣವಾಗಿ ಹೊರಗುಳಿದಿರುವ ವೆಂಕಟೇಶ್ ಅಯ್ಯರ್‍ರೊಂದಿಗೆ ಯಾವ ಬ್ಯಾಟ್ಸ್‍ಮನ್ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ನೋಡಬೇಕು.

ಕೆಕೆಆರ್ ಮಧ್ಯಮಕ್ರಮಾಂಕ ಸ್ಟ್ರಾಂಗ್: ಆರಂಭಿಕರ ಕೊರತೆ ಎದುರಿಸುತ್ತಿರುವ ಕೆಕೆಆರ್ ಮಧ್ಯಮ ಕ್ರಮಾಂಕ ಸ್ಟ್ರಾಂಗ್ ಆಗಿದೆ, ಆ್ಯಂಡ್ರೂ ರಸೆಲ್, ಶ್ರೇಯಾಸ್ ಅಯ್ಯರ್, ನಿತಿಶ್ ರಾಣಾ, ರಿಂಕು ಸಿಂಗ್ ಉತ್ತಮ ಲಯದಲ್ಲಿದ್ದರೆ, ಆದರೆ ಲಕ್ನೋ ತಂಡವು ಇದರ ಸಮಸ್ಯೆ ಎದುರಿಸುತ್ತಿದ್ದು, ಮಿಡಲ್ ಆರ್ಡರ್ ಬ್ಯಾಟ್ಸ್‍ಮನ್‍ಗಳಾದ ಬದೋನಿ, ಕೃನಾಲ್ ಪಾಂಡ್ಯ, ಸ್ಟೋನಿಸ್, ಹೋಲ್ಡರ್ ಕಳೆದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವುದು ತಂಡಕ್ಕೆ ಹೊರೆ ಆಗುತ್ತಿದೆ.

ಬೌಲರ್‍ಗಳ ಮಿಂಚು: ಲಕ್ನೋ ಹಾಗೂ ಕೆಕೆಆರ್ ಎರಡು ತಂಡಗಳಲ್ಲಿರುವ ಆವೇಶ್‍ಖಾನ್, ಮೊಸಿನ್‍ಖಾನ್, ಉಮೇಶ್‍ಯಾದವ್, ಆ್ಯಂಡ್ರು ರಸೆಲ್ ಮಿಂಚುತ್ತಿದ್ದು ಇಂದಿನ ಪಂದ್ಯದಲ್ಲೂ ಎದುರಾಳಿ ಬ್ಯಾಟ್ಸ್‍ಮನ್‍ಗಳಿಗೆ ಲಗಾಮು ಹಾಕಲು ಹೊರಟಿದ್ದಾರೆ.

Facebook Comments