ಬೆಂಗಳೂರು, ಫೆ. 13- ಐಪಿಎಲ್ ಆರಂಭಗೊಂಡಾಗಿನಿಂದಲೂ ತಮ್ಮ ಬೌಲಿಂಗ್‍ನಿಂದ ಗಮನ ಸೆಳೆಯುತ್ತಿದ್ದ ಭಾರತದ ಹಿರಿಯ ವೇಗಿ ಇಶಾಂತ್ ಶರ್ಮಾ ಅವರು ಈ ಬಾರಿ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಎಡವಿದ್ದಾರೆ.
ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ 3 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಕಬಳಿಸಿ ದುಬಾರಿಯಾಗಿದ್ದರಿಂದ ಈ ಬಾರಿ ಇಶಾಂತ್ ತಮ್ಮ ಮೂಲ ಬೆಲೆಯನ್ನು 1.5 ಕೋಟಿ ಎಂದು ಘೋಷಿಸಿದ್ದರಾದರೂ ಇವರನ್ನು ಕೊಂಡುಕೊಳ್ಳಲು ಯಾವುದೇ ಫ್ರಾಂಚೈಸಿಗಳು ಒಲವು ತೋರಿಲ್ಲ.
ಇಶಾಂತ್ ಶರ್ಮಾ ಇದುವರೆಗೂ 93 ಐಪಿಎಲ್ ಪಂದ್ಯಗಳಲ್ಲಿ 73 ವಿಕೆಟ್‍ಗಳನ್ನು ಕಬಳಿಸಿದ್ದಾರೆ.
