ಪ್ಲೇಆಫ್ ರೇಸ್‍ನಲ್ಲಿ ಉಳಿಯಲು ಎಸ್‍ಆರ್‌ಎಚ್‌ಗೆ  ಗೆಲುವು ಅವಶ್ಯಕ

Spread the love

ಮುಂಬೈ, ಮೇ 17- ಐದು ಬಾರಿ ಚಾಂಪಿಯನ್ ಆಗಿರುವ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಈಗಾಗಲೇ ಐಪಿಎಲ್ 15ರ ಪ್ಲೇಆಫ್ ರೇಸ್‍ನಿಂದ ಹೊರಬಿದ್ದಿದ್ದರೂ ಉಳಿದಿರುವ 2 ಪಂದ್ಯಗಳನ್ನು ಗೆದ್ದು ಮಾನ ಉಳಿಸಿಕೊಳ್ಳಲು ರಣತಂತ್ರ ಹೆಣೆದಿದೆ.

ಮತ್ತೊಂದೆಡೆ ಆರಂಭಿಕ 2 ಪಂದ್ಯಗಳಲ್ಲಿ ಸೋಲು ಕಂಡರೂ ಕೂಡ ನಂತರ ಗೆಲುವಿನ ಲಯಕ್ಕೆ ಮರಳಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಕೇನ್ ವಿಲಿಯಮ್ಸ್ ನಾಯಕತ್ವದ ಸನ್‍ರೈಸರ್ಸ್ ಹೈದ್ರಾಬಾದ್ ತಂಡವು ನಂತರ 5 ಪಂದ್ಯಗಳಲ್ಲಿ ಸೋಲು ಕಂಡಿದ್ದರೂ ಕೂಡ ಪ್ಲೇಆಫ್ ರೇಸ್‍ನಲ್ಲಿ ಉಳಿದಿದೆ, ಒಂದು ವೇಳೆ ಇಂದಿನ ಪಂದ್ಯದಲ್ಲಿ ಸೋತರೆ ಅದರ ಪ್ಲೇಆಫ್ ಹಾದಿ ಕೊನೆಗೊಳ್ಳುವುದರಿಂದ ಇಂದಿನ ಪಂದ್ಯವನ್ನು ಗೆಲ್ಲಲು ಕೇನ್ ಪಡೆ ಹರಸಾಹಸ ಪಡುತ್ತಿದೆ.

ಬ್ಯಾಟಿಂಗ್ ವೈಫಲ್ಯ:
ಸನ್‍ರೈಸರ್ಸ್ ಹೈದ್ರಾಬಾದ್ ತಂಡವು ಬೌಲಂಗ್‍ನಲ್ಲಿ ಬಲಿಷ್ಠವಾಗಿದ್ದರೂ ಕೂಡ ಬ್ಯಾಟಿಂಗ್‍ನಲ್ಲಿ ತುಸು ಎಡವುತ್ತಿರುವುದು ತಂಡ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಎಡವುತ್ತಿದೆ. ಆರಂಭಿಕ ಆಟಗಾರರಾದ ನಾಯಕ ಕೇನ್ ವಿಲಿಯಮ್ಸ್ ಹಾಗೂ ಅಭಿಷೇಕ್ ಶರ್ಮಾ ಅವರು ವೈಯಕ್ತಿಕವಾಗಿ ರನ್‍ಗಳನ್ನು ಗಳಿಸುತ್ತಿದ್ದರಾದರೂ, ಉತ್ತಮ ಜೊತೆಯಾಟ ನೀಡುವಲ್ಲಿ ಎಡವುತ್ತಿದ್ದಾರೆ, ಕೇನ್ ಆಡಿರುವ 12 ಪಂದ್ಯಗಳಲ್ಲಿ 288 ರನ್ ಗಳಿಸಿದ್ದರೂ ಕೂಡ ಸೂಕ್ತ ಸಮಯದಲ್ಲಿ ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 43 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರೂ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳು ರನ್ ಗಳಿಸಲು ಎಡವಿದ್ದರಿಂದ ತಂಡವು ಸೋಲು ಕಂಡಿತ್ತು.

ಈ ತಂಡದಲ್ಲಿರುವ ನಿಕೋಲಸ್ ಪೂರನ್, ಆಡಿಲ್ ಮಾಕ್ರಂ ಅವರು ಸೋಟಕ ಬ್ಯಾಟಿಂಗ್ ಪ್ರದರ್ಶಿಸಿದರೆ, ಮುಂಬೈ ಇಂಡಿಯನ್ಸ್ ವಿರುದ್ಧ ಬೃಹತ್ ಮೊತ್ತವನ್ನು ಕಲೆ ಹಾಕಬಹುದು. ಹೈದ್ರಾಬಾದ್ ತಂಡವು ವೇಗ ಹಾಗೂ ಸ್ಪಿನ್ ವಿಭಾಗದಲ್ಲಿ ಸಮತೋಲಿತ ಬೌಲರ್‍ಗಳನ್ನು ಹೊಂದಿದ್ದಾರೆ. ಭುವನೇಶ್ವರ್‍ಕುಮಾರ್, ಟಿ.ನಟರಾಜನ್, ಭುವನೇಶ್ವರ್‍ಕುಮಾರ್ ಅವರು ಎದುರಾಳಿ ಬೌಲರ್‍ಗಳನ್ನು ನಿಯಂತ್ರಿಸಲು ರಣತಂತ್ರ ರೂಪಿಸುತ್ತಿದ್ದಾರೆ.

ಗೆಲುವಿನ ವಿಶ್ವಾಸದಲ್ಲಿ ಮುಂಬೈ:
ಕಳೆದ ಪಂದ್ಯದಲ್ಲಿ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಸಿರುವ ರೋಹಿತ್ ಪಡೆಯು ಇಂದು ಕೂಡ ಅದೇ ಹುಮ್ಮಸ್ಸಿನಲ್ಲಿ ಮೈದಾನಕ್ಕೆ ಇಳಿದು ಮತ್ತೊಂದು ಗೆಲುವನ್ನು ದಕ್ಕಿಸಿಕೊಳ್ಳುವತ್ತ ಗಮನ ಹರಿಸಿದೆ.

ಯುವ ಪಡೆ ವೈಭವ:
ಮುಂಬೈ ಇಂಡಿಯನ್ಸ್ ಹಿರಿಯ ಆಟಗಾರರಿಗಿಂತ ಯುವ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ, ಕಳೆದ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ತಿಲಕ್ ವರ್ಮಾ, ರಮಣದೀಪ್‍ಸಿಂಗ್, ಟಿಮ್ ಡೇವಿಡ್, ಟ್ರಿಸ್ವಾನ್ ಅವರು ಇಂದಿನ ಪಂದ್ಯದಲ್ಲೂ ಮಿಂಚಲು ಸಿದ್ಧವಾಗಿದೆ.

ಹಿರಿಯ ಆಟಗಾರರಾದ ರೋಹಿತ್‍ಶರ್ಮಾ, ಜಸ್‍ಪ್ರೀತ್ ಬೂಮ್ರಾ, ಡೆನಿಯಲ್ ಸ್ಯಾಮ್ಸ್ ಕೂಡ ಇಂದಿನ ಪಂದ್ಯದಲ್ಲಿ ಉತ್ತಮ ಲಯಕ್ಕೆ ಮರಳಿದರೆ ಸನ್‍ರೈಸರ್ಸ್ ಹೈದ್ರಾಬಾದ್ ವಿರುದ್ಧ ಸುಲಭª Áಗಿ ಗೆಲುವು ಸಾಧಿಸಬಹುದು.

Facebook Comments