ಲೀಗ್‍ನಿಂದ ಚಾಂಪಿಯನ್ಸ್ ಔಟ್, ಈ ಭಾರಿ ಹೊಸಬರಿಗೆ ಐಪಿಎಲ್ ಕಪ್..?

Spread the love

ಮುಂಬೈ, ಮೇ 23- ಟಾಟಾ ಐಪಿಎಲ್ 15ರ ಆವೃತ್ತಿಯಲ್ಲಿ ಹಲವು ಅಶ್ಚರ್ಯ ಸಂಗತಿಗಳು ಗತಿಸಿದ್ದರೆ, ಮತ್ತೊಂದೆಡೆ ಯಾರೂ ಪರಿಕಲ್ಪನೆ ಮಾಡಲಾಗರದಂತಹ ಫಲಿತಾಂಶಗಳು ಹೊರ ಹೊಮ್ಮಿವೆ. ಐಪಿಎಲ್ ಆವೃತ್ತಿ ಆರಂಭವಾ ದಾಗಿನಿಂದಲೂ ಚಾಂಪಿಯನ್ ತಂಡ ಹಾಗೂ ರನ್ನರ್ ಅಪ್ ತಂಡಗಳು ಲೀಗ್ ನಲ್ಲೇ ತಮ್ಮ ಖಾತೆಯನ್ನೇ ಮುಗಿಸಿ ರುವುದು ಇದೇ ಮೊದಲು.

ಕಳೆದ ಬಾರಿಯ ಚಾಂಪಿಯನ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಭಾರೀ ನಾಟಕೀಯಕತೆಗಳು ಮೂಡಿಬಂದವು, ಸರಣಿ ಆರಂಭಗೊಳ್ಳುವ ಒಂದು ದಿನದ ಮುಂಚೆ ಧೋನಿ ರಾಜೀನಾಮೆ ನೀಡಿ ಆ ಸ್ಥಾನಕ್ಕೆ ಬಂದ ರವೀಂದ್ರಾ ಜಡೇಜಾ ನಾಯಕ ಹಾಗೂ ಆಟಗಾರನಾಗಿ ಕಳಪೆ ಪ್ರದರ್ಶನ ನೀಡಿದ್ದರಿಂದ ಅವರನ್ನು ನಾಯಕನ ಸ್ಥಾನದಿಂದ ಅಲ್ಲದೆ ಆಟಗಾರನಾಗಿಯೂ ತಂಡದಿಂದ ಗೇಟ್‍ಪಾಸ್ ಕೊಡಲಾಯಿತು.

ಪ್ಲೇಆಫ್‍ನಲ್ಲೇ ಐಪಿಎಲ್ ವಿಜೇತರ ಆಟ ಖಾತಂ:
2008 ರಿಂದ ಆರಂಭಗೊಂಡ ಐಪಿಎಲ್ ಆವೃತ್ತಿಯಲ್ಲಿ ಇದುವರೆಗೂ ಪುಣೆ ವಾರಿಯರ್ಸ್, ಕೊಚ್ಚಿ ಟಸ್ಕರ್ಸ್, ರೈಸಿಂಗ್ ಪುಣೆ ಜೈಂಟ್ಸ್ , ಗುಜರಾತ್ ರಾಯಲ್ಸ್ ತಂಡಗಳು ಸೇರಿದಂತೆ 12 ವಿವಿಧ ತಂಡಗಳು ಇದುವರೆಗೂ ಆಡಿದ್ದರೂ ಚಾಂಪಿಯನ್ ಆಗುವ ಲಕ್ ಒಲಿದಿರುವುದು 5 ತಂಡಗಳಿಗೆ ಮಾತ್ರ, ಅದರಲ್ಲೂ 5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ( 2013, 2015, 2017, 2019 , 2020)

ಈ ಬಾರಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವುದು ವಿಪರ್ಯಾಸವೇ ಸರಿ. ಇನ್ನೂ 4 ಬಾರಿ ಐಪಿಎಲ್ ಮುಕುಟವನ್ನು ತಮ್ಮದಾಗಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ( 2010,2011, 2018, 2021) 9ನೆ ಸ್ಥಾನಕ್ಕೆ ಕುಸಿದಿದ್ದರೆ, 2 ಬಾರಿ ಚಾಂಪಿಯನ್ ಆಗಿರುವ ಶ್ರೇಯಾಸ್ ಅಯ್ಯರ್ ಸಾರಥ್ಯದ ಕೋಲ್ಕತ್ತಾ ನೈಟ್ ರೈಡರ್ಸ್ (2012, 2016) 8ನೆ ಸ್ಥಾನ ಹಾಗೂ 2016ರಲ್ಲಿ ಚಾಂಪಿಯನ್ ಆಗಿದ್ದ ಸನ್‍ರೈಸರ್ಸ್ ಹೈದ್ರಾಬಾದ್ 7ನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಹೊಸಬರಿಗೆ ಕಪ್:
ಈ ಬಾರಿಯ ಐಪಿಎಲ್ ಮುಕುಟವನ್ನು ಗೆಲ್ಲುವ ಹಾಟ್ ಫೇವರೇಟ್ ತಂಡಗಳು ಈಗಾಗಲೇ ಪ್ಲೇಆಫ್‍ಗೆ ಲಗ್ಗೆ ಇಟ್ಟಿದ್ದು, 2008ರಲ್ಲಿ ಚಾಂಪಿ ಯನ್ ಆಗಿದ್ದ ರಾಜಸ್ಥಾನ್ ರಾಯಲ್ಸ್ ಒಂದು ವೇಳೆ ಕಪ್ ಗೆಲ್ಲಲು ವಿಫಲರಾದರೆ ಹೊಸ ತಂಡಕ್ಕೆ ಈ ಬಾರಿ ಐಪಿಎಲ್ ಮುಕುಟ ಗೆಲ್ಲುವ ಅವಕಾಶ ಸಿಕ್ಕುತ್ತದೆ.

ನಾಳೆ ಕೋಲ್ಕತ್ತಾದ ಈಡನ್ ಗಾರ್ಡನ್‍ನಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟಾನ್ಸ್ , ಸಂಜು ಸಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಪರಸ್ಪರ ಮುಖಾಮುಖಿಯಾದರೆ, ಮೇ 25 ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಪಾಫ್ ಡುಪ್ಲೆಸಿಸ್ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪರಸ್ಪರ ಸೆಣಸಲಿದೆ.

ಈ ಪಂದ್ಯದಲ್ಲಿ ಗೆಲ್ಲುವ ತಂಡವು ಮೇ 27 ರಂದು ನಡೆಯಲಿರುವ ಕ್ವಾಲಿಫೈಯರ್ 2ನಲ್ಲಿ ಕ್ವಾಲಿಫೈಯರ್ 1 ತಂಡದ ಸವಾಲನ್ನು ಸ್ವೀಕರಿಸಲಿದ್ದು ಮೇ 29 ರಂದು ಐಪಿಎಲ್‍ನ ಚಾಂಪಿಯನ್ ತಂಡ ಹೊರ ಹೊಮ್ಮಲಿದೆ. ಒಂದು ವೇಳೆ ಲಕ್ನೋ ಅಥವಾ ಗುಜರಾತ್ ತಂಡಗಳು ಕಪ್ ಜಯಿಸಿದರೆ ಆರಂಭಿಕ ಋತುವಿನಲ್ಲೇ ಕಪ್ ಗೆದ್ದ ತಂಡವೆಂಬ ಕೀರ್ತಿಗೆ ಭಾಜನವಾಗಲಿದೆ.

Facebook Comments