Saturday, September 23, 2023
Homeಇದೀಗ ಬಂದ ಸುದ್ದಿಐಪಿಎಲ್‍ನಲ್ಲಿ ಇತಿಹಾಸ ಸೃಷ್ಟಿಸಲು ಹೊರಟ ರಶೀದ್‍ಖಾನ್

ಐಪಿಎಲ್‍ನಲ್ಲಿ ಇತಿಹಾಸ ಸೃಷ್ಟಿಸಲು ಹೊರಟ ರಶೀದ್‍ಖಾನ್

- Advertisement -

ಅಹಮದಾಬಾದ್, ಮೇ 28- ವಿಶ್ವ ಟಿ 20 ಸ್ವರೂಪದ 1 ನಂಬರ್ ಬೌಲರ್ ಆಗಿರುವ ಆಫ್ಘಾನಿಸ್ತಾನ ಮೂಲದ ಲೆಗ್ ಸ್ಪಿನ್ನರ್ ರಶೀದ್ ಖಾನ್, ಸಿಎಸ್‍ಕೆ ವಿರುದ್ಧದ ಫೈನಲ್ ಪಂದ್ಯದಲ್ಲಿ ಐಪಿಎಲ್ ಇತಿಹಾಸದಲ್ಲಿ ಯಾವ ಸ್ಪಿನ್ನರ್ ಕೂಡ ಮಾಡಲಾಗದ ಮಹತ್ತರ ದಾಖಲೆ ನಿರ್ಮಿಸುವತ್ತ ಗಮನ ಹರಿಸಿದ್ದಾರೆ.

2022ರಲ್ಲಿ ಗುಜರಾತ್ ಟೈಟನ್ಸ್ ಚೊಚ್ಚಲ ಐಪಿಎಲ್ ಮುಕುಟ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಆಫ್ಘಾನಿಸ್ಥಾನದ ಖ್ಯಾತ ಸ್ಪಿನ್ನರ್ ರಶೀದ್ ಖಾನ್, ಪ್ರಸಕ್ತ ಟೂರ್ನಿಯಲ್ಲೂ 27 ವಿಕೆಟ್ ಪಡೆದಿದ್ದು, ಇನ್ನೊಂದು ವಿಕೆಟ್ ಪಡೆದರೆ, ಐಪಿಎಲ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಕೆಡವಿದ ಬೌಲರ್ ಎನಿಸಿಕೊಳ್ಳಲಿದ್ದಾರೆ.

- Advertisement -

ನಾನು ಸ್ವಂತ ಮನೆಯವನು: ಮೂಲ-ವಲಸಿಗ ಕದನಕ್ಕೆ ಮುನ್ನುಡಿ ಬರೆದ ಹರಿಪ್ರಸಾದ್

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್‍ಗಳ ಪಟ್ಟಿ ಕೆಳಕಂಡಂತಿದೆ:

  • ಯುಜ್ವೇಂದ್ರ ಚಹಲ್- 27 ವಿಕೆಟ್- ರಾಜಸ್ಥಾನ್ ರಾಯಲ್ಸ್ -2022
  • ರಶೀದ್‍ಖಾನ್- 27 ವಿಕೆಟ್- ಗುಜರಾತ್ ಟೈಟನ್ಸ್ – 2022
  • ಇಮ್ರಾನ್ ತಹೀರ್- 26 ವಿಕೆಟ್- ಚೆನ್ನೈಸೂಪರ್ ಕಿಂಗ್ಸ್- 2019
  • ವಾನಿಂದು ಹಸರಂಗ- ರಾಯಲ್ ಚಾಲೆಂಜರ್ಸ್ ಬೆಂಗಳೂರು- 2022
  • ಸುನೀಲ್ ನರೈನ್- ಕೋಲ್ಕತ್ತಾ ನೈಟ್ ರೈಡರ್ಸ್- 2012
  • ಹರ್ಭಜನ್‍ಸಿಂಗ್- ಮುಂಬೈ ಇಂಡಿಯನ್ಸ್- 2013
    ಪರ್ಪಲ್ ಕ್ಯಾಪ್ ರೇಸ್‍ನಲ್ಲಿ ಪೈಪೋಟಿ:
    2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ 27 ವಿಕೆಟ್ ಪಡೆದಿರುವ ಆಫ್ಘಾನಿಸ್ತಾನದ ಖ್ಯಾತ ಲೆಗ್‍ಸ್ಪಿನ್ನರ್ ರಶೀದ್‍ಖಾನ್ 27 ವಿಕೆಟ್ ಕಬಳಿಸಿದ್ದು ಪರ್ಪಲ್ ಕ್ಯಾಪ್ ಗೆಲ್ಲುವ ರೇಸ್‍ನಲ್ಲಿದ್ದಾರೆ.
    ಪರ್ಪಲ್ ಕ್ಯಾಪ್ ರೇಸ್‍ನಲ್ಲಿ ಗುಜರಾತ್ ಟೈಟನ್ಸ್‍ನ ಮೊಹಮ್ಮದ್ ಶಮಿ 28 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆಲ್ಲುವ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದರೆ, ಇದೇ ತಂಡದ ಮೋಹಿತ್ ಶರ್ಮಾ 24 ವಿಕೆಟ್ ಪಡೆದು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
  • IPL2023, #Final, #Spinner, #RashidKhan, #1Wicket , #Creating, #History,
- Advertisement -
RELATED ARTICLES
- Advertisment -

Most Popular