ಅಹಮದಾಬಾದ್, ಮೇ 28- ಐಪಿಎಲ್ ನ ಹದಿನಾರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಟ್ರೋಫಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಪೈಪೋಟಿ ನಡೆಸುತ್ತಿದ್ದು, ಈ ನಡುವೆ ಬಿಸಿಸಿಐ 46.5 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ.
ಚಾಂಪಿಯನ್ ತಂಡ, ರನ್ನರ್ಸ್ ಅಪ್ , 3 ಮತ್ತು 4ನೇ ಸ್ಥಾನ ಪಡೆದ ತಂಡಗಳು, ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್, ಸೂಪರ್ ಸ್ಟ್ರೈಕರ್, ಅತಿ ಹೆಚ್ಚು ಸಿಕ್ಸರ್, ಉದಯೋನ್ಮುಖ ಆಟಗಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಇಂದಿನ ಪಂದ್ಯ ಮುಗಿದ ನಂತರ ನಡೆಯುವ ಸಮಾರಂಭದಲ್ಲಿ ವಿತರಿಸಲಾಗುವುದು.
ಐಪಿಎಲ್ ಟೂರ್ನಿಯ ಆರಂಭಿಕ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ರಾಜಸ್ಥಾನ್ ರಾಯಲ್ಸ್ 4.8 ಕೋಟಿ ಮೊತ್ತ ಗೆದ್ದಿದ್ದರೆ, ರನ್ನರ್ಸ್ ಅಪ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 2.4 ಕೋಟಿ ಲಭಿಸಿತ್ತು.
ಪ್ರಸ್ತುತ ದಿನಗಳಲ್ಲಿ ಐಪಿಎಲ್ ಟೂರ್ನಿ ವಿಶ್ವದೆಲ್ಲೇಡೆ ಪ್ರಚಲಿತಗೊಂಡಿದ್ದು, ಪ್ರಾಯೋಜಕತ್ವದ ಸಂಖ್ಯೆಯು ಹೆಚ್ಚಾಗಿದೆ. 2022 ರ ಐಪಿಎಲ್ ಟೂರ್ನಿಯ ಚಾಂಪಿಯನ್ ಪಟ್ಟ ದಕ್ಕಿಸಿಕೊಂಡಿದ್ದ ಗುಜರಾತ್ ಟೈಟಾನ್ಸ್ ಗೆ 20 ಕೋಟಿ ರೂ. ಹಾಗೂ ರನ್ನರ್ಸ್ ಅಪ್ ಆಗಿದ್ದ ರಾಜಸ್ಥಾನ್ ರಾಯಲ್ಸ್‍ಗೆ 13 ಕೋಟಿ ಲಭಿಸಿತ್ತು. ಕ್ವಾಲಿಫೈರ್ಯ 2 ಹಂತ ತಲುಪಿದ್ದ ಆರ್‍ಸಿಬಿಗೆ 7 ಕೋಟಿ ಹಾಗೂ ಪ್ಲೇ- ಆಫ್ ಗೇರಿದ್ದ ಲಖನೌ ಸೂಪರ್ ಜಯಂಟ್ಸ್‍ಗೆ 6.5 ಕೋಟಿ ನಗದು ಬಹುಮಾನ ಸಂದಾಯವಾಗಿತ್ತು.
ಮಂತ್ರಘೋಷಗಳ ನಡುವೆ ಹೊಸ ಸಂಸತ್ ಲೋಕರ್ಪಾಣೆ
2023 ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ತಂಡಕ್ಕೆ 20 ಕೋಟಿ ಲಭಿಸಿದರೆ, ರನ್ನರ್ಸ್ ಅಪ್ ತಂಡಕ್ಕೆ 13 ಕೋಟಿ ನಗದು ಬಹುಮಾನ ದೊರೆಯಲಿದೆ. ಕ್ವಾಲಿಫೈಯರ್ 2 ರಲ್ಲಿ ಸೋಲು ಕಂಡಿರುವ 5 ಬಾರಿ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯ£್ಸï ಗೆ 7 ಕೋಟಿ, ಎಲಿಮಿನೇರ್ಟ ಹಂತದಲ್ಲೇ ಪಯಣ ಮುಗಿಸಿದ ಲಖನೌ ಸೂಪರ್ ಜಯಂಟ್ಸ್‍ಗೆ 6.5 ಕೋಟಿ ಲಭಿಸಲಿದೆ.
ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಆಟಗಾರರಿಗೆ ನೀಡುವ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿರುವ ಗುಜರಾತ್ ಟೈಟಾನ್ಸ್ ನ ಶುಭಮನ್ ಗಿಲ್ (851 ರನ್, ಫೈನಲ್ ಪಂದ್ಯಕ್ಕೂ ಮುನ್ನ) 15 ಲಕ್ಷ ನಗದು ಬಹುಮಾನ ಸಿಗಲಿದೆ. ಅತಿ ಹೆಚ್ಚು ವಿಕೆಟ್ ಪಡೆಯುವ ಬೌಲರ್‍ಗೆ ನೀಡುವ ಪರ್ಪಲ್ ಕ್ಯಾಪ್ ರೇಸ್ ನಲ್ಲಿ ಮೊಹಮ್ಮದ್ ಶಮಿ (28 ವಿಕೆಟ್), ರಶೀದ್ ಖಾನ್ (27 ವಿಕೆಟ್) ಹಾಗೂ ಮೋಹಿತ್ ಶರ್ಮಾ ( 24 ವಿಕೆಟ್) ಪೈಕಿ ಒಬ್ಬರು 15 ಲಕ್ಷ ಬಹುಮಾನ ಬಾಚಿಕೊಳ್ಳಲಿದ್ದಾರೆ.
ಇದಲ್ಲದೆ ಉದಯೋನ್ಮುಖ ಆಟಗಾರರಿಗೂ 20 ಲಕ್ಷ ನಗದು ಬಹುಮಾನ ಸಿಗಲಿದ್ದು, ಕೆಕೆರ್ಆ ನ ರಿಂಕು ಸಿಂಗ್ ( 474 ರನï), ಪಂಜಾಬ್ ಕಿಂಗ್ಸ್ ನ ಪ್ರಭಸಿಮ್ರನ್( 358 ರನ್), ಚೆನ್ನೈ ಸೂಪರ್ ಕಿಂಗ್ಸ್ ನ ವೇಗಿ ಮಥಿಶ ಪಥಿರಣ (15 ವಿಕೆಟï) ರೇಸ್‍ನಲ್ಲಿದ್ದಾರೆ.
ಮುಂದೆ ನನಗೆ ಸೂಕ್ತ ಸ್ಥಾನಮಾನ ಸಿಗುವ ಭರವಸೆಯಿದೆ: ಶೆಟ್ಟರ್
ಇನ್ನು ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರರಿಗೂ ಕೂಡ 12 ಲಕ್ಷ ಬಹುಮಾನ ಲಭಿಸಲಿದ್ದು, ಗುಜರಾತ್ ಟೈಟಾನ್ಸ್ ನ ಯುವ ಸ್ಪೋಟಕ ಆಟಗಾರ ಶುಭಮನ್ ಗಿಲ್ (851 ರನ್ ಫೈನಲ್ ಪಂದ್ಯಕ್ಕೂ ಮುನ್ನ ), ಆರ್ ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (730 ರನï), ರಶೀದ್ ಖಾನ್ ( 27 ವಿಕೆಟ, ಫೈನಲ್ ಪಂದ್ಯಕ್ಕೂ ಮುನ್ನ ) ರೇಸ್ ನಲ್ಲಿ ದ್ದಾರೆ.
ವರ್ಷದ ಗೇಮ್ ಚೇಂಜರ್ ಆಟಗಾರರಿಗೆ 12 ಲಕ್ಷ ರೂ. ಸಿಗಲಿದ್ದು, ಗುಜರಾತ್ ಟೈಟಾನ್ಸ್ ನ ಶುಭಮನ್ ಗಿಲï, ರಶೀದ್ ಖಾನ್, ಆರ್ ಸಿಬಿಯ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ , ರಾಜಸ್ಥಾನ್ ರಾಯಲ್ಸ್‍ನ ಯಶಸ್ವಿ ಜೈಸ್ವಾಲ್ ರೇಸ್ ನಲ್ಲಿದ್ದಾರೆ. ಇನ್ನುಳಿದಂತೆ ಆವೃತ್ತಿಯ ಪವರ್ ಪ್ಲೇ, ಸೂಪರ್ ಸ್ಟ್ರೈಕರ್‍ಗಳ ರೂಪದಲ್ಲೂ 15 ಲಕ್ಷ ರೂ. ನಗದು ನೀಡಿದರೆ, ಅತಿ ಸಿಕ್ಸರ್ ಸಿಡಿಸಿದ ಆಟಗಾರನಿಗೆ 12 ಲಕ್ಷ ದೊರೆಯಲಿದೆ.
IPL2023, #Prize, #Money, #GujaratTitans, #ChennaiSuperKings, #Final,