ಬೆಂಗಳೂರು, ಫೆ. 13- ಪ್ರತಿ ವರ್ಷದಂತೆ ಈ ವರ್ಷವೂ ಬೆಡ್ಡಿಂಗ್ ಹಂತದಲ್ಲೇ ಎಡವಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2ನೆ ದಿನವೂ ತೀವ್ರ ಕಷ್ಟ ಅನುಭವಿಸುವಂತಹ ಸ್ಥಿತಿಯನ್ನು ತಂದೊಡ್ಡುಕೊಂಡಿದೆ. ಆರ್‍ಸಿಬಿಯ ಪರ ಬಿಡ್ಡಿಂಗ್‍ನಲ್ಲಿ ಪಾಲ್ಗೊಂಡಿರುವ ಹೆಡ್ ಕೋಚ್ ಡೇವಿಡ್ ಹೆಸನ್, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರು ಅಳೆದು ತೂಗಿ ಆಟಗಾರರನ್ನು ಖರೀದಿಸುವ ಬದಲು ಕೇವಲ 3 ಆಟಗಾರರು ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಪಾಲ್ಗೊಳ್ಳದ ಆಟಗಾರರ ಮೇಲೆಯೇ ಹೆಚ್ಚು ಮೊತ್ತ ಸುರಿದಿರುವುದರಿಂದ ಈ ಬಾರಿ ತಂಡಕ್ಕೆ ಬೇಕಾಗಿರುವ ಸ್ಟಾರ್ ಆಟಗಾರರು ಇರಲಿ 18 ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ದೊಡ್ಡ ಸವಾಲಾಗೇ ಪರಿಣಮಿಸಿದೆ.
ಐಪಿಎಲ್ ಬಿಡ್ಡಿಂಗ್‍ನ ಮೊದಲ ದಿನದಲ್ಲಿ ಆರ್‍ಸಿಬಿ ತಂಡವು ಟ್ವೆಂಟಿ-20 ಮಾದರಿಯ ನಂಬರ್ 1 ಬೌಲರ್ ಆಗಿರುವ ಶ್ರೀಲಂಕಾದ ವಹಿಂದು ಹಸರಂಗ (10.75 ಕೋಟಿ), ವೇಗಿಗಳಾದ ಹರ್ಷಲ್ ಪಟೇಲ್ (10.75 ಕೋಟಿ), ಜೋಶ್ ಹೆಜಲ್ ವುಡ್( 7.75 ಕೋಟಿ), ದಕ್ಷಿಣ ಆಫ್ರಿಕಾದ ಅಗ್ರಮಾನ್ಯ ಬ್ಯಾಟ್ಸ್‍ಮನ್ ಪ್ಲಾಫ್ ಡುಪ್ಲೆಸ್ಸಿ (7 ಕೋಟಿ), ವಿಕೆಟ್ ಕೀಪರ್‍ಗಳಾದ ದಿನೇಶ್ ಕಾರ್ತಿಕ್ ( 5.50 ಕೋಟಿ), ಅನೂಜ್ ರಾವತ್( 3.40 ಕೋಟಿ), ಅಲೌಂಡರ್ ಶಹಬಾಜ್ ಅಹಮದ್ (2.40 ಕೋಟಿ) ರನ್ನು ಬಿಕರಿ ಮಾಡಿಕೊಂಡಿದೆ.
ಈ 8 ಆಟಗಾರರನ್ನು ಖರೀದಿಸಲು ಆರ್‍ಸಿಬಿ 47.75 ಕೋಟಿ ಹಣವನ್ನು ವ್ಯಯಿಸಿರುವುದೇ ಸಂಕಷ್ಟ ಅನುಭವಿಸುವಂತಾಗಿದೆ.
ಇಂದಿನ ಬಿಡ್‍ನಲ್ಲಿ ನಿನ್ನೆ ಬಿಕರಿಯಾಗದೆ ಉಳಿದಿರುವ ಒಂದಿಬ್ಬರು ಸ್ಟಾರ್ ಆಟಗಾರರನ್ನು ಪಡೆಯಲು ಮುಂದಾದರೆ ತಂಡ ಹೆಚ್ಚಿನ ಹಣವನ್ನು ವ್ಯಯಿಸುವ ಅನಿವಾರ್ಯತೆ ಇರುವುದರಿಂದ 18 ಆಟಗಾರರನ್ನು ಬಿಕರಿ ಮಾಡಿಕೊಳ್ಳಲು ಸಾಧ್ಯವಾಗದಿರು ವುದರಿಂದ ಈ ಬಾರಿ ಬಿಡ್ಡಿಂಗ್‍ನಲ್ಲಿ ಭಾರೀ ಹಿನ್ನೆಡೆ ಅನುಭವಿಸುವ ಮೂಲಕ ಟೀಕೆಗಳಿಗೆ ಗುರಿಯಾಗಿದ್ದಾರೆ.
ಕಳೆದ ಬಾರಿ ಆಡುವ ಬಳಗದಲ್ಲಿದ್ದ ಕನ್ನಡಿಗ ದೇವದತ್ ಪಡಿಕ್ಕಲ್‍ರನ್ನು ಈ ಬಾರಿ ಬಿಟ್ಟುಕೊಟ್ಟಿರುವ ಆರ್‍ಸಿಬಿ ಈಗ ಒಂದಿಬ್ಬರು ಕನ್ನಡಿಗರನ್ನು ಕೊಂಡುಕೊಳ್ಳುವ ಮೂಲಕ ಅಭಿಮಾನಿಗಳ ಮನ ಗೆಲ್ಲುವತ್ತಲೂ ಚಿತ್ತ ಹರಿಸುವ ಅವಶ್ಯಕತೆ ಇದೆ. ಕೃಷ್ಣಪ್ಪ ಗೌತಮ್‍ಗೆ 90ಲಕ್ಷ ಬೆಂಗಳೂರು, ಫೆ.13- ಕಳೆದ ವರ್ಷದ ಬಿಡ್ಡಿಂಗ್‍ನಲ್ಲಿ 9.25 ಕೋಟಿ ಭಾರೀ ಮೊತ್ತಕ್ಕೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದ ಕನ್ನಡಿಗ ಕೃಷ್ಣಪ್ಪ ಗೌತಮ್‍ಗೆ ಈ ಬಾರಿ ಭಾರೀ ಹಿನ್ನೆಡೆ ಉಂಟಾಗಿದೆ.
ಕೃಷ್ಣಪ್ಪ ಗೌತಮ್‍ರವರು ಕಳೆದ ಬಾರಿ ಸಿಎಸ್‍ಕೆ ಪರ ಉತ್ತಮ ಪ್ರದರ್ಶನ ತೋರಲು ಅವಕಾಶ ಸಿಗದ ಕಾರಣ ಹಾಗೂ ಯಾವುದೇ ದೇಶಿಯ ಕ್ರಿಕೆಟ್‍ನಲ್ಲಿ ಮಿಂಚು ಹರಿಸಲು ಎಡವಿದ ಪರಿಣಾಮ ಅವರನ್ನು ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಲಖನೌ ಸೂಪರ್ ಜೆಂಟ್ಸ್ 90 ಲಕ್ಷಕ್ಕೆ ಬಿಕರಿ ಮಾಡಿಕೊಂಡಿದೆ.
