ಬೆಂಗಳೂರು, ಫೆ. 12- ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 15 ಆವೃತ್ತಿಯ ಬಿಡ್ಡಿಂಗ್ ಆರಂಭಗೊಂಡಿದ್ದು ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಡು ಪ್ಲೆಸಿಸ್ ಅವರು 7 ಕೋಟಿಗೆ ಆರ್‍ಸಿಬಿ ಪಾಲಾಗಿದ್ದಾರೆ.
ಆರ್‍ಸಿಬಿಯು ಈಗಾಗಲೇ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಸೋಟಕ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಅವರು ರೀಟೇನ್ ಆಗಿದ್ದರಿಂದ ಆರ್‍ಸಿಬಿ ಆರಂಭಿಕ ಬ್ಯಾಟ್ಸ್‍ಮನ್ ಹಾಗೂ ಫಿನೀಷನರ್ ಆಟಗಾರರ ಕೊರತೆಯನ್ನು ಎದುರಿಸುತ್ತಿದ್ದರಿಂದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅನ್ನು ತಂಡಕ್ಕೆ ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದರಾದರೂ, ದಕ್ಷಿಣ ಆಫ್ರಿಕಾದ ಸೋಟಕ ಆಟಗಾರ ಡುಪ್ಲೆಸಿಸ್‍ಗೆ 7 ಕೋಟಿ ರೂ. ನೀಡಿ ಬಿಕರಿ ಮಾಡಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎಬಿಡಿವಿಲಿಯರ್ಸ್ ಅವರ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಆಟಗಾರ ತುಂಬುವರೇ ಎಂಬುದನ್ನು ಕಾದು ನೋಡಬೇಕಾಗಿದೆ.
ಶ್ರೇಯಾಸ್ ಅಯ್ಯರ್ಗೆ 12 ಕೋಟಿ:
ವಿರಾಟ್ ಕೊಹ್ಲಿ ನಾಯಕತ್ವ ಸ್ಥಾನವನ್ನು ತೊರೆದಿರುವುದರಿಂದ ದೇಶಿಯ ನಾಯಕನನ್ನೇ ತಂಡಕ್ಕೆ ಆಯ್ಕೆ ಮಾಡಿಕೊಂಡು ತಂಡವನ್ನು ಬಲಿಷ್ಠಗೊಳಿಸಿಕೊಳ್ಳಬೇಕೆಂದು ಲೆಕ್ಕಚಾರ ಹಾಕಿದ್ದ ಆರ್‍ಸಿಬಿ ಶ್ರೇಯಾಸ್ ಐಯ್ಯರ್ ಮೇಲೆ ಕಣ್ಣಿಟ್ಟಿತ್ತಾದರೂ ಕೆಕೆಆರ್ 12.25 ಕೋಟಿ ನೀಡಿ ಅಯ್ಯರ್‍ನನ್ನು ಖರೀದಿಸಿದೆ.
