ಬಿಡ್ಡಿಂಗ್‍ಗೂ ಮುಂಚೆಯೇ ಸ್ಥಾನ ಭದ್ರಪಡಿಸಿಕೊಂಡ ಸ್ಟಾರ್ ಆಟಗಾರರು

Social Share

ಬೆಂಗಳೂರು, ಫೆ. 12- ಉತ್ತಮ ಪ್ರದರ್ಶನ ತೋರುವ ಮೂಲಕ ತಾವು ಪ್ರತಿನಿಸಿದ ತಂಡಗಳಿಗೆ ಹಲವು ಗೆಲುವು ತಂದುಕೊಟ್ಟು ಹಾಗೂ ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಆಟಗಾರರು ಈ ಬಾರಿಯೂ ಫ್ರಾಂಚೈಸಿಗಳು ಉಳಿಸಿಕೊಂಡಿದ್ದು, ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಐಪಿಎಲ್‍ನ ಆರಂಭಿಕ ಋತುವಿನಿಂದಲೂ ಸ್ಥಾನ ಪಡೆದಿರುವ ವಿರಾಟ್ ಕೊಹ್ಲಿ ಈ ಬಾರಿಯೂ ಆ ತಂಡದಲ್ಲೇ ಉಳಿದುಕೊಂಡಿದ್ದಾರೆ.
ಇನ್ನು ಇದೇ ಬಾರಿ ಹೊಸದಾಗಿ ಐಪಿಎಲ್ ಬಿಡ್ಡಿಂಗ್‍ನಲ್ಲಿ ಸ್ಥಾನ ಪಡೆದಿರುವ ಗುಜರಾತ್ ಟೈಟಾನ್ಸ್ ತಂಡವು ಬಿಡ್ಡಿಂಗ್‍ಗೂ ಮುನ್ನವೇ ಹಾರ್ದಿಕ್ ಪಾಂಡ್ಯ (15 ಕೋಟಿ), ರಶೀದ್‍ಖಾನ್ (15ಕೋಟಿ) ಹಾಗೂ ಶುಭಮನ್‍ಗಿಲ್( 8 ಕೋಟಿ)ರನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದರೆ, ಲಖನೌ ಸೂಪರ್ ಜೆಂಟ್ಸ್ ತಂಡವು ಕೆ.ಎಲ್.ರಾಹುಲ್ (17 ಕೋಟಿ), ಮಾಕ್ರ್ಯುಸ್ ಸ್ಟೋನಿಸ್ (9.2 ಕೋಟಿ), ರವಿ ಬಿಸ್ನೋಯ್ (4 ಕೋಟಿ) ರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ.
# ರೀಟೇನ್ ಆಗಿರುವ ಆಟಗಾರರು:
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ): ರವೀಂದ್ರ ಜಡೇಜಾ (16 ಕೋಟಿ), ಎಂಎಸ್ ಧೋನಿ (12 ಕೋಟಿ), ಮೊಯಿನ್ ಅಲಿ (8 ಕೋಟಿ), ರುತುರಾಜ್ ಗಾಯಕ್ವಾಡ್ (6 ಕೋಟಿ).
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್): ಆಂಡ್ರೆ ರಸೆಲ್ (12 ಕೋಟಿ), ವರುಣ್ ಚಕ್ರವರ್ತಿ (8 ಕೋಟಿ), ವೆಂಕಟೇಶ್ ಅಯ್ಯರ್(8 ಕೋಟಿ), ಸುನಿಲ್ ನರೈನ್ (6 ಕೋಟಿ).
ಸನ್‍ರೈಸರ್ಸ್ ಹೈದರಾಬಾದ್ (ಎಸ್‍ಆರ್‍ಎಚ್): ಕೇನ್ ವಿಲಿಯಮ್ಸನ್ (14 ಕೋಟಿ), ಅಬ್ದುಲ್ ಸಮದ್ (4 ಕೋಟಿ), ಉಮ್ರಾನ್ ಮಲಿಕ್ (4 ಕೋಟಿ).
ಮುಂಬೈ ಇಂಡಿಯ£್ಸï : ರೋಹಿತ್ ಶರ್ಮಾ (16 ಕೋಟಿ), ಜಸ್ಪ್ರೀತ್ ಬುಮ್ರಾ (12 ಕೋಟಿ), ಸೂರ್ಯಕುಮಾರ್ ಯಾದವ್ (8 ಕೋಟಿ), ಕೀರಾನ್ ಪೆÇಲಾರ್ಡ್ (6 ಕೋಟಿ).
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍ಸಿಬಿ): ವಿರಾಟ್ ಕೊಹ್ಲಿ (15 ಕೋಟಿ), ಗ್ಲೆನ್ ಮ್ಯಾಕ್ಸ್‍ವೆಲ್ (11 ಕೋಟಿ), ಸಿರಾಜ್ (7 ಕೋಟಿ).
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (14 ಕೋಟಿ), ಜೋಸ್ ಬಟ್ಲರ್(10 ಕೋಟಿ), ಯಶಸ್ವಿ ಜೈಸ್ವಾಲ್ (4 ಕೋಟಿ).
ಪಂಜಾಬ್ ಕಿಂಗ್ಸ್  : ಮಯಾಂಕ್ ಅಗರ್ವಾಲ್ (12 ಕೋಟಿ, 14 ಕೋಟಿ ಪರ್ಸ್‍ನಿಂದ ಕಡಿತಗೊಳಿಸಲಾಗುವುದು), ಅರ್ಷದೀಪ್ ಸಿಂಗ್ (4 ಕೋಟಿ).
ಡೆಲ್ಲಿ ಕ್ಯಾಪಿಟಲ್ಸ್: ಪಂತ್( 16 ಕೋಟಿ), ಅಕ್ಷರ್‍ಪಟೇಲ್( 9 ಕೋಟಿ), ಪೃಥ್ವಿ ಶಾ ( 7.50 ಕೋಟಿ),ನೋರ್ಟಿಜ್( 6.50 ಕೋಟಿ)
# ಕನ್ನಡಿಗರಿಗೆ ಜಾಕ್‍ಪಾಟ್
ಬೆಂಗಳೂರು, ಫೆ.12- ಈ ಬಾರಿಯ ಐಪಿಎಲ್ ಬೆಂಗಳೂರಿನಲ್ಲಿ ನಡೆಯುತ್ತಿರುವುದರಿಂದ ಕರ್ನಾಟಕದ ಆಟಗಾರರು ಯಾವ ತಂಡಕ್ಕೆ, ಎಷ್ಟು ಕೋಟಿ ಅಥವಾ ಲಕ್ಷಕ್ಕೆ ಬಿಕರಿ ಆದರು ಎಂಬ ಕುತೂಹಲವೂ ಕೂಡ ಹೆಚ್ಚಾಗಿದೆ.
ಈಗಾಗಲೇ ಕನ್ನಡಿಗರಾದ ಲೋಕೇಶ್ ರಾಹುಲ್ (17 ಕೋಟಿ) ಹಾಗೂ ಮಯಾಂಕ್ ಅಗರ್‍ವಾಲ್ (15 ಕೋಟಿ) ಅವರು ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದು ಬಿಡ್ಡಿಂಗ್ ಅಖಾಡದಲ್ಲಿರುವ ಕರ್ನಾಟಕ ರಣಜಿ ತಂಡದ ನಾಯಕ ಮನೀಷ್ ಪಾಂಡೆ ಅವರು 4.6 ಕೋಟಿ ಪಡೆದು ಲಖನೌ ಸೂಪರ್ ತಂಡದ ಪಾಲಾದರು.
ಕಳೆದೆರಡು ಋತುಗಳಿಂದ ಆರ್‍ಸಿಬಿ ತಂಡದ ಆರಂಭಿಕ ಆಟಗಾರನಾಗಿದ್ದ ದೇವದತ್ ಪಡಿಕಲ್ ಅವರು ಈ ಬಾರಿ 7.75 ಕೋಟಿ ರೂಪಾಯಿ ಪಡೆದು ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಕೊಡಗಿನ ಕುವರ ರಾಬಿನ್ ಉತ್ತಪ್ಪ ಅವರು ಮೂಲ ಬೆಲೆ 2 ಕೋಟಿಗೆ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ.

Articles You Might Like

Share This Article