Wednesday, May 31, 2023
Homeಇದೀಗ ಬಂದ ಸುದ್ದಿಐಪಿಎಲ್ ಬೆಟ್ಟಿಂಗ್ ವಿಚಾರಕ್ಕೆ ಬಿತ್ತು ಯುವಕನ ಹೆಣ

ಐಪಿಎಲ್ ಬೆಟ್ಟಿಂಗ್ ವಿಚಾರಕ್ಕೆ ಬಿತ್ತು ಯುವಕನ ಹೆಣ

- Advertisement -

ಮದ್ದೂರು,ಮೇ.27-ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಯುವಕ ಬಲಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೋರಾಪುರ ಗೇಟ್ ಬಳಿ ಕಳೆದ ರಾತ್ರಿ ನಡೆದಿದೆ.,ಚಿಕ್ಕಅರಸಿಕೆರೆ ಗ್ರಾಮದ ಪುನೀತ್ (20) ಕೊಲೆಯಾದ ಯುವಕ.

ಪುನೀತ್ ಮತ್ತು ಆತನ ಕೆಲವು ಸ್ನೇಹಿತರು ಐಪಿಎಲ್ ಆರಂಭದಿಂದಲೂ ಯಾವ ತಂಡ ಗೆಲ್ಲುತ್ತದೆ, ಯಾವುದು ಸೋಲುತ್ತದೆ ಎಂದು ವಿವಿಧ ಆಯಾಮಗಳಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.ಈಗಾಗಲೇ ನಡೆದಿರುವ ಐಪಿಎಲ್ ಪಂದ್ಯಗಳಲ್ಲಿ ಪುನೀತ್ ಬೆಟ್ಟಿಂಗ್ ಹೆಚ್ಚು ಗೆದ್ದಿದ್ದ. ಇದರ ಹಣವನ್ನು ಕೊಡುವಂತೆ ಶರತ್, ಮಂಜು, ಸತೀಶ್ ಸತಾಹಿಸಿದ್ದಾರೆ.

ತನ್ನ ಸ್ನೇಹಿತರ ಜೊತೆ ನಿನ್ನೆ ಸಂಜೆ ಬೆಟ್ಟಿಂಗ್ ಹಣ ಪಡೆಯುಲು ಬೋರಾಪುರ ಗೇಟ್ ಬಳಿಯ ಕಾಲುವೆ ರಸ್ತೆಗೆ ಹೋಗಿದ್ದ ವೇಳೆ ಶರತ್ ಮತ್ತು ಆತನ ಸ್ನೇಹಿತರು ಕಿರಿಕ್ ತೆಗೆದು ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ ನಂತರ 10 ಮಂದಿ ದೊಣ್ಣೆ, ಕಲ್ಲು ಮತ್ತಿತರ ವಸ್ತುಗಳಿಂದ ಪುನೀತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-05-2023)

ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಪುನೀತ್ ನನ್ನು ಆತನ ಜೊತೆ ಬಂದಿದ್ದ ಸ್ನೇಹಿತರು ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದ ಪರಿಣಾಮ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ ಪುನೀತ್ ಸಾವನ್ನಪ್ಪಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಿಲ್ಲಾ ಪೊಲಿಸ್ ವರಿಷ್ಠಾಕಾರಿ ಎನï.ಯತೀಶï, ಹೆಚ್ಚುವರಿ ಪೊಲೀಸ್ ಅೀಕ್ಷಕ ತಿಮ್ಮಯ್ಯ, ಡಿವೈಎಸ್ಪಿ ನವೀನ್ ಕುಮಾರ್‍ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಸ್.ಸಂತೋಷ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿಲಾಗಿತ್ತು.

ಮಿಂಚಿನ ಕಾರ್ಯಾಚರಣೆ ನಡೆಸಿದ ಮದ್ದೂರು ಪೊಲಿಸರು 10 ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

#IPLBetting, #Murder, Madduru,

- Advertisement -
RELATED ARTICLES
- Advertisment -

Most Popular