ಗೆಲುವಿನ ಲಯಕ್ಕೆ ಮರಳಲು ಡೆಲ್ಲಿ, ಪಂಜಾಬ್ ಸೆಣಸು

Spread the love

ಮುಂಬೈ, ಏ. 20- ಐಪಿಎಲ್ 15ರ ಆವೃತ್ತಿಯನ್ನು ಜಯದೊಂದಿಗೆ ಆರಂಭಿಸಿ ಆತ್ಮವಿಶ್ವಾಸ ಮೂಡಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಇಂದು ತಮ್ಮ ಸೋಲಿನ ಸರಪಳಿ ಕಳಚಿಕೊಳ್ಳಲು ಪರಸ್ಪರ ಹೋರಾಡುತ್ತಿದೆ. ಡೆಲ್ಲಿ ಹಾಗೂ ಪಂಜಾಬ್ ತಂಡಗಳು ತಾವು ಆಡಿರುವ ಕಳೆದ 5 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿ ಮೂರರಲ್ಲಿ ಸೋಲು ಕಂಡಿರುವುದರಿಂದ ಇಂದು ಯಾವ ತಂಡ ಗೆಲ್ಲುತ್ತದೆ ಎಂದು ಮೇಲ್ನೋಟಕ್ಕೆ ಹೇಳಲು ಆಗುವುದಿಲ್ಲ.

ಡೆಲ್ಲಿಗೆ ಕೊರೊನಾ ಆತಂಕ:
ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‍ಗೆ ಕೊರೊನಾ ಆತಂಕ ಕಾಡುತ್ತಿದೆ. ಆ ತಂಡದ ಸ್ಟಾರ್ ಆಟಗಾರ ಮಿಚೆಲ್ ಮಾರ್ಷ್ ಸೇರಿದಂತೆ ನಾಲ್ವರು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಇಂದಿನ ಪಂದ್ಯವನ್ನು ಪುಣೆ ಬದಲು ಮುಂಬೈನ ಬೆಬ್ರೋನ್ ಮೈದಾನದಲ್ಲಿ ನಡೆಸುತ್ತಿದ್ದರೂ ಕೂಡ ಇನ್ನೂ ಯಾವ ಯಾವ ಆಟಗಾರರಿಗೆ ಕೊರೊನಾ ಸೋಂಕು ತಗುಲಿದೆಯೋ ಎಂಬ ಭೀತಿಯಲ್ಲೇ ಪಂದ್ಯವನ್ನು ಆಡುತ್ತಿದೆ.

ಮಯಾಂಕ್ ವಾಪಸ್:
ಸನ್‍ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್‍ನ ನಾಯಕ ಮಯಾಂಕ್ ಅಗರ್‍ವಾಲ್ ಅವರು ಗಾಯಗೊಂಡಿದ್ದರಿಂದ ಆಡುವ 11ರ ಬಳಗದಿಂದ ಹೊರಗುಳಿದಿದ್ದರೂ ಇಂದಿನ ಪಂದ್ಯದಲ್ಲಿ ಅವರು ಆಡುವ ಎಲ್ಲಾ ಲಕ್ಷಣಗಳು ಗೋಚರಿಸಿರುವುದರಿಂದ ಪಂಜಾಬ್‍ನ ಬ್ಯಾಟಿಂಗ್ ಬಲ ಹೆಚ್ಚಿದೆ.

ಲಿವಿಂಗ್‍ಸ್ಟನ್ ಸ್ಥಿರ ಪ್ರದರ್ಶನ ತೋರುತ್ತಿದ್ದರೆ, ಧವನ್, ಬ್ಯಾರಿಸ್ಟ್ರೋ, ಒಡೆನ್ ಸ್ಮಿತ್‍ರವರ ಬ್ಯಾಟ್‍ನಿಂದ ರನ್‍ಗಳು ಹರಿದು ಬರದಿರುವುದು ತಂಡದ ರನ್ ಕುಸಿಯಲು ಕಾರಣವಾಗಿದೆ. ರಬಡಾ, ರಾಹುಲ್ ಚಹರ್, ಲಿವಿಂಗ್‍ಸ್ಟನ್, ಹರ್ಷದೀಪ್‍ರಂತಹ ವೇಗ ಹಾಗೂ ಸ್ಪಿನ್ ಬೌಲಿಂಗ್ ಪಡೆ ಹೊಂದಿರುವ ಕಿಂಗ್ಸ್ , ಡೆಲ್ಲಿ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕಲು ಹೊರಟಿದೆ.

ಕ್ಯಾಪಿಟಲ್ಸ್‍ಗೆ ಶಾ ಬಲ:
ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರ ಪೃಥ್ವಿ ಶಾ ಬೃಹತ್ ಮೊತ್ತ ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರೆ ಇವರಿಗೆ ಡೇವಿಡ್ ವಾರ್ನರ್ ಉತ್ತಮ ಸಾಥ್ ನೀಡಿದ್ದರೆ, ಆದರೆ ರಿಷಭ್‍ಪಂತ್, ಸರ್ಫಾರಾಜ್ ಬ್ಯಾಟ್‍ನಿಂದ ರನ್‍ಗಳು ಹರಿದು ಬರದಿರುವುದರಿಂದ ತಂಡಕ್ಕೆ ಹಿನ್ನೆಡೆ ಉಂಟಾಗಿದೆ.
ಖಲೀಲ್ ಅಹಮ್ಮದ್, ಮುಸ್ತಾಫಿಜುರ್ ರೆಹಮಾನ್, ಕುಲ್‍ದೀಪ್, ಅಕ್ಷರ್‍ಪಟೇಲ್‍ರ ವೇಗ ಹಾಗೂ ಸ್ಪಿನ್ ಬಲ ತಂಡಕ್ಕಿದೆ.

Facebook Comments