ಐಪಿಎಲ್ ಮೆಗಾ ಹರಾಜಿಗೆ ದಿನಗಣನೆ ಆರಂಭ ; ಸ್ಟಾರ್ ಆಟಗಾರರಿಗೆ ಶಾಕ್

Social Share

ಬೆಂಗಳೂರು, ಫೆ. 10- ಐಪಿಎಲ್ ಮೆಗಾಹರಾಜಿಗೆ ದಿನಗಣನೆ ಶುರುವಾಗಿದ್ದು ಫೆ. 12 ಮತ್ತು 13 ರಂದು ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ. ಈಗಾಗಲೇ ತಂಡಗಳ ಫ್ರಾಂಚೈಸಿಗಳು ಸಿಲಿಕಾನ್ ಸಿಟಿಗೆ ತಲುಪಿದ್ದು ತಮ್ಮ ತಂಡಕ್ಕೆ ಯಾವ ಯಾವ ಆಟಗಾರರನ್ನು ತೆಗೆದುಕೊಳ್ಳಬೇಕೆಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಈಗಾಗಲೇ ಐಪಿಎಲ್‍ನ ಬಿಡ್‍ನಿಂದ ಸ್ಟಾರ್ ಆಟಗಾರರಾದ ಕ್ರಿಸ್‍ಗೇಲ್, ಮಿಚೆಲ್ ಸ್ಟ್ರಾಕ್, ಕೇಲ್ ಜೆಮ್ಮಿಸನ್, ಬೆನ್ ಸ್ಟ್ರೋಕ್ ಅವರು ಹೊರಗುಳಿದಿದ್ದರೆ, ಇನ್ನು ಬಿಡ್ ಅಖಾಡದಲ್ಲಿರುವ ಕೆಲವು ಸ್ಟಾರ್ ಆಟಗಾರರನ್ನು ಬಿಕರಿ ಮಾಡದೆ ಇರಲು ಕೂಡ ಫ್ರಾಂಚೈಸಿಗಳು ನಿರ್ಧರಿಸಿದ್ದರೆ. ಮೊದಲ ಸುತ್ತಿನಲ್ಲಿ ಸ್ಟಾರ್ ಆಟಗಾರರನ್ನು ಯಾವ ತಂಡಗಳ ಫ್ರಾಂಚೈಸಿಗಳು ಬಿಕರಿ ಮಾಡಿಕೊಳ್ಳದೆ ಎರಡನೇ ಸುತ್ತಿನಲ್ಲಿ ಕಡಿಮೆ ಬೆಲೆಗೆ ತಮ್ಮ ತಂಡದ ಪಾಲು ಮಾಡಿಕೊಳ್ಳುವ ಲೆಕ್ಕಾಚಾರಗಳನ್ನು ಕೂಡ ಹಾಕಿಕೊಂಡಿದ್ದಾರೆ.
ಕಳೆದ ಬಾರಿಯ ಐಪಿಎಲ್ ಬಿಡ್ಡಿಂಗ್‍ನಲ್ಲೂ ಕೆರಿಬಿಯನ್‍ನ ಸ್ಟಾರ್ ಆಟಗಾರ ಕ್ರಿಸ್ ಗೇಲ್ ಅವರನ್ನು ಮೂಲ ಬೆಲೆ 2 ಕೋಟಿಗೆ ಪ್ರೀತಿ ಜಿಂಟಾ ಮಾಲೀಕತ್ವದ ಕಿಂಗ್ಸ್ ಪಂಜಾಬ್ ಕೊಂಡೊಕೊಂಡ ಜಾಣ್ಮೆಯನ್ನು ಈ ಬಾರಿಯು ಫ್ರಾಂಚೈಸಿಗಳು ತೊಡಗಿದ್ದು, ಭಾರತ ಹಾಗೂ ವಿದೇಶಿ ಸ್ಟಾರ್ ಆಟಗಾರರನ್ನು ಕಡಿಮೆ ಬೆಲೆಗೆ ಬಿಕರಿ ಮಾಡಿಕೊಂಡು ತಂಡವನ್ನು ಬಲಿಷ್ಠಗೊಳಿಸಿಕೊಂಡು ಚಾಂಪಿಯನ್ ಆಗುವ ಲೆಕ್ಕಾಚಾರದಲ್ಲಿದೆ.
ಈ ಬಾರಿಯ ಐಪಿಎಲ್ ಬಿಡ್ಡಿಂಗ್‍ನಲ್ಲಿ ಲಖ್ನೋ ಹಾಗೂ ಅಹಮದಾಬಾದ್ ತಂಡಗಳು ಹೊಸದಾಗಿ ಸೇರ್ಪಡೆ ಆಗುವ ಮೂಲಕ ಒಟ್ಟು 10 ತಂಡಗಳಾಗಿದ್ದು ಈ ಬಾರಿ ನಾವು ಭಾರೀ ಮೊತ್ತಕ್ಕೆ ಮಾರಾಟ ವಾಗುತ್ತೇವೆ ಎಂದು ಅಂದಾಜಿಸಿರುವ ಸುರೇಶ್‍ರೈನಾ, ಕೆ.ಗೌತಮ್, ಕೃನಾಲ್ ಪಾಂಡ್ಯ, ದಿನೇಶ್ ಕಾರ್ತಿಕ್,
ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್‍ರಂತಹ ಆಟಗಾರರನ್ನು ಈ ಬಾರಿ ಕಡಿಮೆ ಮೊತ್ತಕ್ಕೆ ಬಿಕರಿ ಮಾಡಿಕೊಳ್ಳಲು ಫ್ರಾಂಚೈಸಿಗಳು ಲೆಕ್ಕಾಚಾರ ಹಾಕಿದ್ದಾರೆ.
ಈ ಪಟ್ಟಿಯಲ್ಲಿರುವ ಆಟಗಾರರ ಪೈಕಿ ಸೂರ್ಯಕುಮಾರ್ ಯಾದವ್ ಬಿಟ್ಟರೆ ಉಳಿದ ಯಾವ ಆಟಗಾರರು ಟ್ವೆಂಟಿ- 20 ಮಾದರಿಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿಲ್ಲದಿರುವುದು ಕೂಡ ಇವರ ವ್ಯಾಲ್ಯೂ ಕಡಿಮೆ ಆಗಲು ಕಾರಣವಾಗಿದೆ.
# ರೈನಾಗೆ ಶಾಕ್:
ಭಾರತ ತಂಡಕ್ಕೆ ರಾಜೀನಾಮೆ ನೀಡಿದ ನಂತರ ಸುರೇಶ್‍ರೈನಾ ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರೂ ಕೂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ, ಕಳೆದ ಬಾರಿ ಅವರು 11 ಕೋಟಿಗೆ ಸಿಎಸ್‍ಕೆ ರೀಟೈನ್ ಆಗಿದ್ದರು, ಆದರೆ ಈ ಬಾರಿ ತಂಡದಲ್ಲಿ ಸ್ಥಾನ ಕಾಪಾಡಿಕೊಳ್ಳುವಲ್ಲಿ ಎಡವಿರುವುದರಿಂದ ಕಡಿಮೆ ಮೊತ್ತಕ್ಕೆ ಮಾರಾಟವಾಗಲಿದ್ದಾರೆ.
ಕನ್ನಡಿಗರಿಗೆ ಕುಗ್ಗಿದ ಬೇಡಿಕೆ:
ಇನ್ನೂ ಕನ್ನಡಿಗರಾದ ಮನೀಷ್ ಪಾಂಡೆ, ಕೃಷ್ಣಪ್ಪ ಗೌತಮ್ ಅವರು ಕೂಡ ಕಳೆದ ಬಾರಿಯ ಐಪಿಎಲ್ ಬಿಡ್ಡಿಂಗ್‍ನಲ್ಲಿ ಕ್ರಮವಾಗಿ 11 ಕೋಟಿ (ಸನ್ ರೈಸರ್ಸ್ ಹೈದ್ರಾಬಾದ್) ಹಾಗೂ 9.5 ಕೋಟಿ( ಚೆನ್ನೈ ಸೂಪರ್ ಕಿಂಗ್ಸ್) ತಂಡದ ಪಾಲಾಗಿದ್ದರು ಆದರೆ ಈ ಬಾರಿ ಅವರನ್ನು ಕೂಡ ಕಡಿಮೆ ಮೊತ್ತಕ್ಕೆ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ಪ್ಲ್ಯಾನ್‍ಮಾಡಿದ್ದಾರೆ.
ಇನ್ನು ಕಳೆದ ಕೆಲವು ಋತುಗಳಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಸೂರ್ಯಕುಮಾರ್ ಯಾದವ್, ಕೃನಾಲ್ ಪಾಂಡ್ಯ( 8.8 ಕೋಟಿ), ಕೋಲ್ಕತ್ತಾ ನೈಟ್ ರೈಡರ್ಸ್‍ನ ಆಟಗಾರರಾದ ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ (15.5 ಕೋಟಿ), ದಿನೇಶ್ ಕಾರ್ತಿಕ್ (7.5 ಕೋಟಿ), ಇಯಾನ್ ಮಾರ್ಗನ್ (5.25 ಕೋಟಿ) ಅವರು ಕಳೆದ ಬಾರಿಯ ಐಪಿಎಲ್ ಬೆಡ್ಡಿಂಗ್‍ನಲ್ಲಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದರೂ ಕೂಡ ಈ ಬಾರಿ ಅವರನ್ನು ಕಡಿಮೆ ಬೆಲೆಗೆ ಬಿಕರಿ ಮಾಡಿಕೊಂಡು ಯುವ ಆಟಗಾರರ ಮೇಲೆ ಹೆಚ್ಚಿನ ಹಣವನ್ನು ಹೂಡುವ ಮೂಲಕ ತಂಡವನ್ನು ಬಲಿಷ್ಠಗೊಳಿಸಿಕೊಳ್ಳುವತ್ತ ಆರ್‍ಸಿಬಿ ಸೇರಿದಂತೆ ಎಲ್ಲಾ ತಂಡದ ಫ್ರಾಂಚೈಸಿಗಳು ಲೆಕ್ಕಾಚಾರ ಹಾಕಿದ್ದಾರೆ.

Articles You Might Like

Share This Article