RCB vs MI : ಇಂದು ಸೋತವರ ಮಧ್ಯ ಸಮರ
ದುಬೈ, ಸೆ. 26- ಐಪಿಎಲ್ 14ರಲ್ಲಿ ಸೋತವರ ನಡುವೆ ಇಂದು ಸಮರ ನಡೆಯುತ್ತಿದ್ದು ಗೆಲುವಿನ ಲಯಕ್ಕೆ ಮರಳಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಾರಥ್ಯದ ಆರ್ಸಿಬಿ ಹಾಗೂ ಉಪನಾಯಕ ರೋಹಿತ್ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಹಾತೊರೆಯುತ್ತಿದ್ದಾರೆ.
ಮುಂಬೈ ಹಾಗೂ ಬೆಂಗಳೂರು ತಂಡಗಳಲ್ಲಿ ಘಟಾನುಘಟಿ ಬ್ಯಾಟ್ಸ್ಮನ್ಗಳಿದ್ದರೂ ಕೂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಎಡವಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ರನ್ಗಳ ಹೆಚ್ಚಿಸುವ ಹೊಣೆಯನ್ನು ಹೊತ್ತಿರುವ ರೋಹಿತ್ಶರ್ಮಾ, ಡಿ ಕಾಕ್, ಪೋಲಾರ್ಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಅವರು ರನ್ ಸುರಿಮಳೆ ಸುರಿಸಲು ಪರದಾಡುತ್ತಿದ್ದರೆ, ಬೌಲಿಂಗ್ನಲ್ಲಿ ಜಸ್ಪ್ರೀತ್ ಬಮ್ರಾರನ್ನು ಬಿಟ್ಟರೆ ಉಳಿದ ಬೌಲರ್ಗಳು ವಿಫಲರಾಗಿರುವುದರಿಂದ ಮುಂಬೈ ತಂಡವು ಸೋಲಿನ ಸುಳಿಗೆ ಸಿಲುಕಿದೆ.
ಆರ್ಸಿಬಿ ತಂಡವು ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅವರು ಅರ್ಧಶತಕ ಸಿಡಿಸಿದರೂ ಎಬಿಡಿ, ಮ್ಯಾಕ್ಸ್ವೆಲ್ರಿಂದ ಸೋಟಕ ಬ್ಯಾಟಿಂಗ್ ಬಾರದ ಕಾರಣ ಅತ್ಯಲ್ಪ ಮೊತ್ತಕ್ಕೆ ಕುಸಿಯುವಂತಾಗಿತ್ತು, ಇನ್ನೂ ಬೌಲಿಂಗ್ನಲ್ಲಿ ಹರ್ಷಲ್ಪಟೇಲ್, ಚಹಾಲ್ ಬಿಟ್ಟರೆ ಉಳಿದವರು ಪ್ಲಾಫ್ ಆಗಿರುವುದು ಕೊಹ್ಲಿ ನಿದ್ದೆ ಕೆಡಿಸಿದೆ.