ಮಹಿಳಾ ಸಿಬ್ಬಂದಿಯೊಂದಿಗೆ ಸಿಕ್ಕಿ ಬಿದ್ದ ಐಪಿಎಸ್ ಅಧಿಕಾರಿ

Social Share

ಕಲಬುರಗಿ,ಮಾ.13- ತಮ್ಮ ಅೀಧಿನದಲ್ಲಿ ಕೆಲಸ ಮಾಡುವ ಮಹಿಳಾ ಎಎಸ್‍ಐ ಜೊತೆ ಹಿರಿಯ ಐಪಿಎಸ್ ಅಧಿಕಾರಿ ಪಲ್ಲಂಗದಾಟ ನಡೆಸುವಾಗ ಪತಿಯ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಮಹಿಳಾ ಎಎಸ್‍ಐ ಪತಿಯಾಗಿರುವ ಹೆಡ್‍ಕಾನ್ಸಟೇಬಲ್ ಕಂಟೆಪ್ಪ ದೂರು ನೀಡಿದ್ದು, ಸ್ಟೆಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323, 324, 498, 376(2)(ಬಿ), 342, 504, 506(2), 420, 406, 500, 201, 109, 457 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಕಲಬುರಗಿಯ ಆಂತರಿಕ ಭದ್ರತಾ ವಿಭಾಗದಲ್ಲಿ ಎಸ್‍ಪಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ವಿಭಾಗದಲ್ಲಿ ಎಎಸ್‍ಐ ಆಗಿರುವ ಮಹಿಳಾ ಸಿಬ್ಬಂದಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಅನುಮಾನಗೊಂಡ ಪತಿ ಕಂಟೆಪ್ಪ ಒಂದುವರೆ ತಿಂಗಳ ಹಿಂದೆ ಪ್ರಶ್ನೆ ಮಾಡಿದ್ದಾರೆ. ಆದರೆ ಸರಿಯಾದ ಉತ್ತರ ನೀಡದೆ ಆಕೆ ಜಾರಿಕೊಂಡಿದ್ದರು ಎನ್ನಲಾಗಿದೆ.

ಬಳಿಕ ಎಸ್‍ಪಿ ಮತ್ತು ಮಹಿಳಾ ಎಎಸ್‍ಐ ಅಸಹ್ಯಕರ ರೀತಿಯಲ್ಲಿ ಖಾಸಗಿಯಾಗಿ ಸಿಕ್ಕಿ ಬಿದ್ದಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪತ್ನಿಗೆ ತಿಳಿ ಹೇಳಿ ಸಂಸಾರ ಮುಂದುವರೆಸಿದಾಗಿ ಕಂಟೆಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಕಳ್ಳನೇ ಕಾವಲುಗಾರರನನ್ನು ದೂಷಿಸಿದಂತೆ : ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ಕಂಟೆಪ್ಪ ದಂಪತಿ ಪರಸ್ಪರ ಪ್ರಿತಿಸಿ ವಿವಾಹವಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಪತ್ನಿಯ ನಡೆತೆ ಬಗ್ಗೆ ಅನುಮಾನಗೊಂಡು ಹಿಂಬಾಲಿಸಿದಾಗ ಮಾರ್ಚ್ 7ರಂದು ಲೋಕೋಪಯೋಗಿ ಕ್ವಾಟ್ರಸ್‍ನಲ್ಲಿ ಐಪಿಎಸ್ ಅಧಿಕಾರಿಯ ಜೊತೆ ತಮ್ಮ ಪತ್ನಿ ಅರೆಬೆತ್ತಲೆಯಾಗಿರುವುದನ್ನು ಕಂಡಿರುವುದಾಗಿ ಕಂಟೆಪ್ಪ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗೆ ದೂರು ನೀಡಿದ್ದಾರೆ.

ರೆಡ್‍ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ವೇಳೆ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ತಮ್ಮ ಮೇಲೆ ಹಲ್ಲೆ ನಡೆಸಿದರು. ನಮ್ಮ ಇಷ್ಟ ಬಂದ ಹಾಗೆ ಮಾಡಿಕೊಳ್ಳುತ್ತೇವೆ. ಕೇಳಲು ನೀನು ಯಾರು ಎಂದು ಧಮಕಿ ಹಾಕಿದರು. ಅವರಿಂದ ನಾನು ತಪ್ಪಿಸಿಕೊಂಡು ಬಂದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಲಂಕಾಕ್ಕೆ 2 ವಿಕೆಟ್‍ಗಳ ಸೋಲು : ಟೆಸ್ಟ್ ಫೈನಲ್‍ಗೇರಿದ ಭಾರತ

ಅರುಣ್ ರಂಗರಾಜನ್ 2020ರ ಫೆಬ್ರವರಿ 10ರಂದು ಬೆಂಗಳೂರಿನಲ್ಲಿ ನಡುರಾತ್ರಿ 2ಗಂಟೆಯವರೆಗೂ ಪತ್ನಿಯ ಮನೆ ಮುಂದೆ ಧರಣಿ ನಡೆಸಿ ಸುದ್ದಿಯಾಗಿದ್ದರು. ಇವರ ಪತ್ನಿಯೂ ಐಪಿಎಸ್ ಅಧಿಕಾರಿಯಾಗಿದ್ದರು. ಮಕ್ಕಳನ್ನು ನೋಡಲು ಪತ್ನಿ ಅವಕಾಶ ನೀಡುತ್ತಿಲ್ಲ ಎಂದು ಬೆಂಗಳೂರಿನಲ್ಲಿ ಧರಣಿ ನಡೆಸಿದ್ದ ಅರುಣ್‍ರನ್ನು ಆಗಿನ ಈಶಾನ್ಯ ಡಿಸಿಪಿ ಭೀಮಶಂಕರ್ ಗುಳೇದ್ ಹಾಗೂ ಇತರೆ ಅಧಿಕಾರಿಗಳು ಸಮಾಧಾನ ಪಡಿಸಿದ್ದರು.

IPS, Officer, Arun Rangarajan, Kalaburagi, ASI, women,

Articles You Might Like

Share This Article