ಬೆಂಗಳೂರು,ಫೆ.21-ರಾಜ್ಯ ಸರ್ಕಾರಕ್ಕೆ ತೀವ್ರ ಮುಜಗರ ಸೃಷ್ಟಿಸಿದ ಹಿನ್ನಲೆಯಲ್ಲಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಅವರಿಗೆ ಹದ್ದಮೀರಿ ವರ್ತಿಸದಂತೆ ರಾಜ್ಯ ಸರ್ಕಾರ ಎಚ್ಚರಿಕೆ ಕೊಟ್ಟಿದೆ.
ಈ ಸಂಬಂಧ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಮೂಲಕ ಮುಜರಾಯಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ಮತ್ತು ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪ ಮೌದ್ಗಿಲ್‍ಗೆ ನೋಟಿಸ್ ಜಾರಿ ಮಾಡಿ ನಿಯಮ ಮೀರಿ ವರ್ತಿಸದಂತೆ ತಾಕೀತು ಮಾಡಲಾಗಿದೆ.
ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಅೀಧಿನ ಕಾರ್ಯದರ್ಶಿ ಜೇಮ್ಸ್ ತಾರಕನ್ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಅಖಿಲ ಭಾರತ ಸೇವಾ ನಿಯಮ ಉಲ್ಲಂಘಿಸದೆ ಕಾನೂನಿನ ಇತಿಮಿತಿಯಲ್ಲೇ ವರ್ತಿಸಬೇಕೆಂದು ಸೂಚಿಸಿದ್ದಾರೆ.
ಗ್ಯಾಂಗ್‍ಸ್ಟರ್ ಬಿಷ್ಣೋಯ್ ಅಡ್ಡೆಗಳ ಮೇಲೆ NIA ದಾಳಿ
ಇನ್ನು ಮುಂದೆ ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು, ಮಾಧ್ಯಮಗಳ ಮುಂದೆ ಹೋಗಿ ಹೇಳಿಕೆ ನೀಡುವುದು, ಆರೋಪ, ಪ್ರತ್ಯಾರೋಪ, ಟೀಕೆ, ಟಿಪ್ಪಣಿ ಮಾಡುವುದು, ಸರ್ಕಾರಿ ಸೇವಕರಾಗಿರುವ ನಿಮಗೆ ಶೋಭೆ ತರುವುದಿಲ್ಲ.
ನೀವು ಮಾಡಿರುವ ಆರೋಪಗಳಿಂದ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ. ಇನ್ನು ಮುಂದೆ ಮಾಧ್ಯಮಗಳ ಮುಂದೆ ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಪೆಪೋಸ್ಟ್ ಮಾಡಿದರೆ ಅಖಿಲ ಭಾರತ ಸೇವಾ ನಿಯಮ ಉಲ್ಲಂಘನೆ ಎಂದೇ ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನೊಬ್ಬ ಸರ್ಕಾರಿ ಅಧಿಕಾರಿ ವಿರುದ್ಧ ಆರೋಪಕ್ಕೆ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡಿದ್ದೀರಿ, ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆಯಿದೆ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೋಗಿದ್ದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ನಿಮ್ಮ ಈ ವರ್ತನೆ ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದ್ದಲ್ಲದೆ ಭಾರತೀಯ ನಾಗರಿಕ ಸೇವೆ ನಿಯಮಗಳ ಉಲ್ಲಂಘನೆಯಾಗಿದೆ. ನೀವು ಆರೋಪ ಮಾಡುವುದಾದರೆ ಸಕ್ಷಮ ಪ್ರಾಕಾರದ ಮುಂದೆ ಮಾಡಬಹುದು. ಯಾವುದೇ ರೀತಿಯ ಆರೋಪ-ಪ್ರತ್ಯಾರೋಪಗಳನ್ನು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಡಬಾರದು. ಇನ್ನು ಮುಂದಾದರೂ ಮಾಧ್ಯಮಗಳ ಮುಂದೆ ಹೋಗಿ ಹೇಳಿಕೆ ಕೊಡಬಾರದು ಎಂದು ನೋಟಿಸ್‍ನಲ್ಲಿ ಇಬ್ಬರಿಗೂ ಸೂಚನೆ ಕೊಡಲಾಗಿದೆ.
ಕಳೆದ ಮೂರು ದಿನಗಳಿಂದ ರೂಪ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ನಡುವೆ ಮಾತಿಗೆ ಮಾತು, ಏಟಿಗೆ ಎದುರೇಟು, ಆರೋಪ, ಪ್ರತ್ಯಾರೋಪ ನಡೆದಿತ್ತು. ಜಿದ್ದಿಗೆ ಬಿದ್ದವರಂತೆ ಇಬ್ಬರು ಆರೋಪಗಳ ಸುರಿಮಳೆಗೈದಿದ್ದರು.
ರೋಹಿಣಿ ಸಿಂಧೂರಿ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ರೂಪ ಮೌದ್ಗಿಲ್ ಆರೋಪಗಳ ಸುರಿಮಳೆಗೈದು ಹಲವು ಮೂಲಭೂತ ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ತಮ್ಮ ಮೇಲೆ ಕೇಳಿ ಬಂದ ಆರೋಪಗಳಿಗೆ ಉತ್ತರಿಸಬೇಕೆಂದು ಒತ್ತಾಯಿಸಿದ್ದಲ್ಲದೆ ಕೆಲವು ಸಂಶಯಾಸ್ಪದ ಫೋಟೋಗಳನ್ನು ಸಹ ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು.
ಯುವತಿಗೆ ತಂದೆ ಹಾಗೂ ಸಹೋದರನಿಂದಲೇ ಲೈಂಗಿಕ ಕಿರುಕುಳ
ಇದಕ್ಕೆ ತಿರುಗೇಟು ಕೊಟ್ಟಿದ್ದ ರೋಹಿಣಿ ಸಿಂಧೂರಿ ಮಾನಸಿಕ ಅಸ್ವಸ್ಥೆಯಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಸೋಮವಾರ ಈ ಇಬ್ಬರು ಅಧಿಕಾರಿಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರನ್ನು ಭೇಟಿಯಾಗಿ ದೂರು ಮತ್ತು ಪ್ರತಿ ದೂರು ನೀಡಿದ್ದಾರೆ.
ಸಚಿವ ಸಂಪುಟ ಸಭೆಯಲ್ಲೂ ಈ ಇಬ್ಬರು ಅಧಿಕಾರಿಗಳ ವರ್ತನೆ ಬಗ್ಗೆ ಚರ್ಚೆ ನಡೆದಿತ್ತು. ತಕ್ಷಣವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯ ಮಾಡಿದ್ದರು. ನಿಯಮ ಉಲ್ಲಂಘನೆ ಮಾಡದೆ ಏನೇ ಆರೋಪಗಳಿದ್ದರೂ ಸಕ್ಷಮ ಪ್ರಾಕಾರದ ಮುಂದೆಯೇ ಪ್ರಸ್ತಾವನೆ ಮಾಡಬೇಕೆಂದು ಸಿಎಂ ಸೂಚನೆ ಕೊಟ್ಟಿದ್ದರು.
IPS, Roopa Moudgil, IAS, Rohini Sindhuri, Notices issued,