3 ವರ್ಷದಿಂದ ತಲೆಮರೆಸಿಕೊಂಡಿದ್ದ ಇರಾನಿ ಗ್ಯಾಂಗ್‍ನ ಸರಗಳ್ಳ ಸೆರೆ

Social Share

ಬೆಂಗಳೂರು, ಡಿ. 22- ಮೂವತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇರಾನಿ ಗ್ಯಾಂಗ್‍ನ ಆರೋಪಿಯೊಬ್ಬನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ಜಿಲ್ಲೆ ಇರಾನಿ ಕಾಲೋನಿ ನಿವಾಸಿ ಅಬುಜರ್ ಅಲಿ ಅಲಿಯಾಸ್ ಅಬುಜರ್(33) ಬಂಧಿತ ಸರಗಳ್ಳ.

ಆರೋಪಿಯು ಇರಾನಿ ಗ್ಯಾಂಗ್‍ನ ವ್ಯಕ್ತಿಯಾಗಿದ್ದು, ನಗರದಲ್ಲಿ ಸುಮಾರು 30ಕ್ಕಿಂತ ಹೆಚ್ಚು ಸರ ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಈ ಪ್ರಕರಣವು ನ್ಯಾಯಾಲಯದ ವಿಚಾರಣೆ ಹಂತದಲ್ಲಿದ್ದು, 2019ನೇ ಸಾಲಿನಿಂದ ನ್ಯಾಯಾಲಯವು ಸಮನ್ಸ್ ಮತ್ತು ವಾರೆಂಟ್ ಹೊರಡಿಸಿದ್ದರೂ ಸಹ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದನು.

ಆರೋಪಿ ವಿರುದ್ಧ ದಸ್ತಗಿರಿ ವಾರೆಂಟ್ ಆದೇಶ ಮಾಡಿರುತ್ತದೆ. ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಬನಶಂಕರಿ ಠಾಣೆ ಇನ್ಸ್‍ಪೆಕ್ಟರ್ ಗಿರೀಶ್ ನಾಯಕ್ ನೇತೃತ್ವದ ತಂಡವನ್ನು ಆರೋಪಿ ಪತ್ತೆಗಾಗಿ ರಚಿಸಲಾಗಿತ್ತು.

ಕೋವಿಡ್ ನೆಪದಲ್ಲಿ ಚುನಾವಣೆ ಮುಂದೂಡುವ ಯತ್ನ ನಡೀತಿದೆ : ಡಿಕೆಶಿ

ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಮಾಡಿ, ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.

ಆರೋಪಿ ವಿರುದ್ಧ ಈ ಹಿಂದೆ ಸಂಜಯನಗರ ಒಂದು ಪ್ರಕರಣ, ಜ್ಞಾನಭಾರತಿ ಐದು ಪ್ರಕರಣ, ವಿಜಯನಗರ ಮೂರು ಪ್ರಕರಣ, ಕೆಜಿ ನಗರ ಒಂದು ಪ್ರಕರಣ, ಸಿಕೆ ಅಚ್ಚುಕಟ್ಟು ಮೂರು ಪ್ರಕರಣ, ಕೊಡಿಗೇಹಳ್ಳಿ ಎರಡು ಪ್ರಕರಣ, ಮಹದೇವಪುರ ಎರಡು ಪ್ರಕರಣ, ಕೆಂಗೇರಿ ಎರಡು ಪ್ರಕರಣ, ಚಂದ್ರಾಲೇಔಟ್ ಎರಡು ಪ್ರಕರಣ,

ಒಡಿಶಾ ಕರಾವಳಿಯಲ್ಲಿ ಡಾಲ್‍ಫಿನ್ ಗಣತಿ ಆರಂಭ

ಎಚ್‍ಎಎಲ್ ಎರಡು ಪ್ರಕರಣ, ವಿದ್ಯಾರಣ್ಯಪುರ ಒಂದು ಪ್ರಕರಣ, ಕಾಮಾಕ್ಷಿಪಾಳ್ಯ ಮೂರು ಪ್ರಕರಣ, ಗಿರಿ ನಗರ ಒಂದು ಪ್ರಕರಣ, ಕುಮಾರಸ್ವಾಮಿ ಲೇಔಟ್ ಎರಡು ಪ್ರಕರಣ, ಸುಬ್ರಮಣ್ಯಪುರ ಎರಡು ಪ್ರಕರಣ, ಯಲಹಂಕ ಎರಡು ಪ್ರಕರಣ, ಯಲಹಂಕ ನ್ಯೂಟೌನ್, ಬನಶಂಕರಿ ಠಾಣೆಯ ತಲಾ ಒಂದು ಪ್ರಕರಣಗಳು ಸೇರಿ ಒಟ್ಟು 36 ಪ್ರಕರಣಗಳು ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.

Irani gang, arrested, chain theft,

Articles You Might Like

Share This Article