ಶಿಯಾ ಧರ್ಮಗುರು ರಾಜೀನಾಮೆ, ಇರಾಕಿನಲ್ಲಿ ಘರ್ಷಣೆ, 15 ಮಂದಿ ಸಾವು

Social Share

ಬಾಗ್ದಾದ್, ಆ.30 -ಪ್ರಭಾವಿ ಶಿಯಾ ಧರ್ಮಗುರು ರಾಜಕೀಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರಿಂದ ಕೋಪಗೊಂಡ ನೂರಾರು ಅನುಯಾಯಿಗಳು ಸರ್ಕಾರಿ ಅರಮನೆಗೆ ನುಗ್ಗಲು ಮತ್ತು ಭದ್ರತಾ ಪಡೆಗಳೊಂದಿಗೆ ಘರ್ಷಣೆಯಲ್ಲಿ ತೊಡಗಿದ ಪರಿಣಾಮ ಸುಮಾರು 15 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ.

ಧರ್ಮಗುರು ಮುಕ್ತಾದ ಅಲ್ -ಸದರ್ ಅವರಿಗೆ ನಿಷ್ಠರಾಗಿರುವ ಪ್ರತಿಭಟನಾಕಾರರು ಸರ್ಕಾರಿ ಅರಮನೆಯ ಹೊರಗಿನ ಸಿಮೆಂಟ್ ತಡೆಗೊಡೆಯನ್ನು ಒಡೆದುಹಾಕಿ ಹಗ್ಗಗಳಿಂದ ಎಳೆದು ಅರಮನೆಯ ದ್ವಾರಗಳನ್ನು ಮುರಿದರು. ಇರಾಕಿನ ರಾಷ್ಟ್ರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ,

ಇರಾಕ್ ಸೇನೆ ರಾಷ್ಟ್ರವ್ಯಾಪಿ ಕಫ್ರ್ಯೂ ಘೋಷಿಸಿದ್ದು , ಉಸ್ತುವಾರಿ ಪ್ರಧಾನ ಮಂತ್ರಿ ಕ್ಯಾಬಿನೆಟ್ ಅವೇಶನಗಳನ್ನು ಅಮಾನತುಗೊಳಿಸಿದ್ದಾರೆ.ಮೆಷಿನ್ ಗನ್‍ಗಳಿಮದ ಗುಂಡಿನ ಮೊರೆತ ಬೆಂಕಿಯ ಜ್ವಾಲೆ ಕೇಂದ್ರ ಬಾಗ್ದಾದ್‍ದಾದ್ಯಂತ ಕಂಡುಬಮದಿದೆ.

ಘರ್ಷಣೆಯಲ್ಲಿ ಮೋಟಾರ್‍ಗನ್‍ಗಳು ಮತ್ತು ರಾಕೆಟ್ ಚಾಲಿತ ಗ್ರೆನೇಡ್‍ಗಳನ್ನು ಬಳಸಲಾಗಿದೆ ಎಂದು ಭದ್ರತಾ ಅಕಾರಿಗಳು ತಿಳಿಸಿದ್ದಾರೆ, ಇದು ರಾಜಕೀಯ ಬಿಕ್ಕಟ್ಟಿನ ಪ್ರತಿಸ್ಪರ್ಧೆಯ ಪರಾಕಾಷ್ಠೆಯಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

Articles You Might Like

Share This Article