ದುಬೈ, ಸೆ. 4- ಸಾಂಪ್ರಾದಾಯಿಕ ಬದ್ಧ ವೈರಿಗಳಾದ ಪಾಕಿಸ್ತಾನ ಹಾಗೂ ಭಾರತ ನಡುವೆ ಪಂದ್ಯಗಳು ನಡೆದರೆ ಪರಸ್ಪರ ಟೀಕೆಗಳು ಸರ್ವೇ ಸಾಮಾನ್ಯ. ಅದೇ ರೀತಿಯ ಟೀಕೆ ಮಾಡಲು ಹೊರಟಿದ್ದ ಪಾಕ್‍ನ ಅಭಿಮಾನಿಯೊಬ್ಬರಿಗೆ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ತಿರುಗೇಟು ನೀಡಿರುವ ಪ್ರಸಂಗ ಒಂದು ನಡೆದಿದೆ.
ಇಂದು ದುಬೈನಲ್ಲಿ ಏಷ್ಯಾ ಕಪ್‍ನ ಸೂಪರ್ 4 ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆ ಎಂದು ಪಾಕ್ ಅಭಿಮಾನಿ ಮೊಹಿನ್ ಶಕೀಬ್ ಅವರು ಹಾಸ್ಯಾಸ್ಪದವಾಗಿ ಕೇಳಿದ್ದಾರೆ, ಅದಕ್ಕೆ ಪ್ರತಿಕ್ರಿಯಿಸಿರುವ ಇರ್ಫಾನ್ ಪಠಾಣ್ ಇನ್ನ್ಯಾರು ಇಂದಿನ ಪಂದ್ಯದಲ್ಲೂ ರೋಹಿತ್ ಶರ್ಮಾ ನಾಯಕತ್ವದ ಭಾರತವೇ ಗೆಲ್ಲುತ್ತದೆ ಎಂದು ತಿರುಗೇಟು ನೀಡಿದ್ದಾರೆ.
2019ರ ವಿಶ್ವಕಪ್‍ನಲ್ಲಿ ಪಾಕಿಸ್ತಾನವು ಭಾರತ ವಿರುದ್ಧ ಹೀನಾಯ ಸೋಲು ಕಂಡ ಬೆನ್ನಲ್ಲೇ ಪಾಕ್ ಕ್ರಿಕೆಟ್ ಪ್ರೇಮಿ ಮೊಹಿನ್ ಅವರು ` ಮಾರೋ ಮುಜೆ ಮಾರೋ’ ಎಂಬ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು, ಆಗ ಆ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು.
2021ರ ಚುಟುಕು ವಿಶ್ವಕಪ್‍ನಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸಿತ್ತಲ್ಲಾ ಆದ್ದರಿಂದ ಇಂದಿನ ಪಂದ್ಯದಲ್ಲೂ ಪಾಕ್ ತಂಡವೇ ಗೆಲ್ಲುತ್ತದಲ್ಲವೇ ಎಂದು ಪಠಾಣ್‍ರನ್ನು ಮೊಹಿನ್ ಪ್ರಶ್ನಿಸಿದ್ದಾರೆ.
ಏಷ್ಯಾ ಕಪ್‍ನ ಮೊದಲ ಪಂದ್ಯದಲ್ಲೇ ಹಾರ್ದಿಕ್ ಪಾಂಡ್ಯರ ರೋಚಕ ಆಟದಿಂ ದಾಗಿ ಪಾಕ್ ತಂಡವನ್ನು ಸೋಲಿಸುವ ಮೂಲಕ ಭಾರತ ತಂಡವು ತಿರುಗೇಟು ನೀಡಿದ್ದಾಗಿದೆ, ಇಂದಿನ ಪಂದ್ಯದಲ್ಲೂ ಟೀಂ ಇಂಡಿಯಾವೇ ಗೆಲ್ಲುವ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಲಿದೆ ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡಿದರು.
ರವೀಂದ್ರಾಜಾಡೇಜಾರ ಬದಲಿಗೆ ತಂಡದಲ್ಲಿ ಉತ್ತಮ ಆಟಗಾರನನ್ನೇ ಮೈದಾನಕ್ಕೆ ಇಳಿಸುವ ಸಾಧ್ಯತೆಗಳಿವೆ ಎಂದು ಪಠಾಣ್ ಹೇಳಿದರು.