ಕಬ್ಬಿಣ, ಅದಿರು ಉತ್ಪಾದನೆಯಲ್ಲಿ ರಾಜ್ಯ ನಂ.1 : ಸಿಎಂ

Social Share

ಬೆಂಗಳೂರು,ಡಿ.3- ಕರ್ನಾಟಕ ಶೀಘ್ರದಲ್ಲೇ ಕಬ್ಬಿಣ ಮತ್ತು ಅದಿರು ಉತ್ಪಾದನೆಯಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಗಣಿ ಉದ್ಯಮದಲ್ಲಿ ಅವಕಾಶಗಳ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬಳ್ಳಾರಿಯ ಅದಿರು ಮತ್ತು ಕಬ್ಬಿಣ ದೇಶದಲ್ಲೇ ಅತ್ಯುತ್ತಮವಾದ ನೈಸರ್ಗಿಕ ಸಂಪನ್ಮೂಲ ಎಂದು ಬಿಂಬಿತವಾಗಿದೆ.

ಹೀಗಾಗಿ ಈ ಉತ್ಪಾದನೆಯಲ್ಲಿ ನಾವು ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು.
ಗಣಿಗಾರಿಕೆ ಮತ್ತು ಅದಿರು ಉತ್ಪಾದನೆ ಮಾಡಲು ಉದ್ಯಮಿಗಳಿಗೆ ಅನುಕೂಲವಾಗುವಂತೆ ನ್ಯಾಯಾಲಯದ ನಿರ್ದೇಶನದಂತೆಯೇ ಅನುಮತಿ ಕೊಟ್ಟಿದ್ದೇವೆ. ಇದರಿಂದ ನಿಯಮಗಳು ಸರಳೀಕರಣಗೊಂಡು ಉದ್ಯಮಕ್ಕೂ ಅನುಕೂಲಾಗಿದೆ ಎಂದರು.

ಒಡಿಶಾ ಗಣಿಗಾರಿಕೆಯ ಪ್ರಮುಖ ರಾಜ್ಯವಾಗಿದೆ. ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳಿಗೂ ನಮ್ಮಲ್ಲಿ ಸಿಗುವ ಸಂಪನ್ಮೂಲಗಳಿಗೂ ಓಲಿಕೆ ಮಾಡುವುದು ಸರಿಯಲ್ಲ. ಕರ್ನಾಟಕದ ನೈಸರ್ಗಿಕ ಸಂಪನ್ಮೂಲಕ್ಕೆ ಜಾಗತಿಕ ಬ್ರಾಂಡ್ ಇದೆ ಎಂದು ಪ್ರಶಂಸಿಸಿದರು.

ದೇವರು ಕೊಟ್ಟ ನೈಸರ್ಗಿಕ ಸಂಪನ್ಮೂಲವನ್ನು ನಾವು ಮನುಕುಲದ ಒಳಿತಿಗಾಗಿ ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಇದು ದುರುಪಯೋಗವಾಗಬಾರದು. ನಮ್ಮ ಸರ್ಕಾರ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಚಿರತೆ ಸೆರೆಗೆ ವಿಶೇಷ ತಂಡ ರಚನೆ : ಮೃತರ ಕುಟುಂಬಕ್ಕೆ 15 ಲಕ್ಷ ಪರಿಹಾರ ಘೋಷಣೆ

ಕರ್ನಾಟಕ ದೇಶಕ್ಕೆ ಮಾದರಿಯಾದ ಗಣಿಗಾರಿಕೆ ನೀತಿಯನ್ನು ಜಾರಿಗೆ ತಂದಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ಎಲ್ಲರೂ ವ್ಯವಸ್ಥೆಯೊಳಗೆ ಕೆಲಸ ಮಾಡಬೇಕು. ಸರಿಯಾದ ಬಳಕೆಯಾದರೆ ಮಾತ್ರ ರಾಜ್ಯ ಮತ್ತು ದೇಶ ಉದ್ದಾರವಾಗಲು ಸಾಧ್ಯವಾಗುತ್ತದೆ. ದುರ್ಬಳಕೆ ಮಾಡಿಕೊಂಡರೆ ಸಮಾಜ ನಾಶವಾಗುತ್ತದೆ ಎಂದು ಸಿಎಂ ಎಚ್ಚರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿಯುಳ್ಳ ಆಡಳಿತಾಗಾರರು. ವಿಶೇಷವಾಗಿ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ಗಮನಕೊಟ್ಟಿದ್ದಾರೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಕಲೆಹಾಕಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಇಂಧನ ಅಭಿವೃದ್ಧಿಗೆ ಪೂರಕವಾಗಿದೆ. ಕರ್ನಾಟಕ ಮುಂದಿನ ಮೂರು ವರ್ಷಗಳಲ್ಲಿ ಇಂಧನ ನವೀಕರಣಕ್ಕಾಗಿ ಎರಡೂವರೆ ಕೋಟಿ ಹಣವನ್ನು ಹೂಡಿಕೆ ಮಾಡಲಿದೆ. ನಮ್ಮ ರಾಜ್ಯ ದೇಶದಲ್ಲೇ ಅತಿ ಹೆಚ್ಚು ಇಂಧನ ನವೀಕರಣಕ್ಕೆ ಹೂಡಿಕೆ ಮಾಡುವ ರಾಜ್ಯವಾಗಿದೆ ಎಂದು ಪ್ರಶಂಸಿಸಿದರು.

ಕೇಂದ್ರ ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ದೇಶದಲ್ಲಿ ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿದೆ.ನನ್ನ ಪ್ರಕಾರ 2040 ರಲ್ಲಿ ಇಂಧನ ಬೇಡಿಕೆ ಡಬಲ್ ಆಗಲಿದೆ.ಇಂಥ ಸಂದರ್ಭದಲ್ಲಿ ನಮ್ಮ ತಯಾರಿಯನ್ನ ಪೂರ್ತಿಯಾಗಿಡಬೇಕು.ಕಳೆದ ವರ್ಷಕ್ಕೆ ಹೊಲಿಕೆ ಮಾಡಿದ್ರೆ ಈ ವರ್ಷ ವಿದ್ಯುತ್ 25% ಹೆಚ್ಚು ಬೇಡಿಕೆ ಇದೆ ಎಂದು ಹೇಳಿದರು.

ಪಿಎಸ್‍ಐ ನೇಮಕಾತಿ ಅಕ್ರಮ : ಅಮೃತ್‍ಪೌಲ್ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ

ಒಂದು ಕಡೆ ನವೀಕರಿಸಬಹುದಾದ ಇಂಧನ ಶೇಖರಣೆ ಮಾಡುತ್ತಿದ್ದರು ಸಹ, ಪರ್ಯಾಯ ಇಂಧನದ ಕಡೆ ಸುಸ್ತಿರತೆ ಬಗ್ಗೆ ಗಮನ ಕೊಡಬೇಕು. ವಿದ್ಯುತ್ ಉತ್ಪಾದನೆ ಮಾಡುವುದು ಅನಿವಾರ್ಯವಾಗಿದೆ. ಈ ವಿದ್ಯುತ್ ಉತ್ಪಾದನೆ ವೇಳೆ ಮಾಲಿನ್ಯ ಸಹ ಆಗುತ್ತೆ, ಆಗ ಗಿಡಗಳನ್ನ ಹೆಚ್ಚು ಬೆಳೆಸುವುದು ಹಾಗೂ ಗಣಿಗಾರಿಕೆಯಿಂದ ಬರುವ ತ್ಯಾಜ ನೀರನ್ನ ಮನುಷ್ಯರಿಗೆ ಮತ್ತು ನೀರಾವರಿಗೆ ಬಳಸುವ ಮೂಲಕ ಸುಸ್ಥಿರತೆ ಕಾಪಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಎಲ್ಲಾ ಕ್ರಮಗಳನ್ನ ಕೈಗೊಳ್ಳುವ ಮೂಲಕ ಕಲ್ಲಿದ್ದಲು ಉತ್ಪಾದನೆ ಮಾಡಬೇಕು ಹಾಗೇ ಉಪಯೋಗ ಮಾಡಿಕೊಳ್ಳಬೇಕು. ವಿದ್ಯುತ್ ಉತ್ಪಾದನೆ ವೇಳೆ ಹೆಚ್ಚು ಮಾಲಿನ್ಯವಾಗಬಾರದು ಎಂಬ ಹಿನ್ನಲೆಯಲ್ಲಿ ಬಳಸಬೇಕಾದ ತಂತ್ರಜ್ಞಾನದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. 141 ಬ್ಲಾಕ್ ಗಳನ್ನ ಹರಾಜು ಮಾಡಲಾಗಿದೆ. ಕಲ್ಲಿದ್ದಲು ಹೊರತುಪಡಿಸಿ ಬೇರೆ ಬೇರೆ ಗಣಿಗಾರಿಕೆಯ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಅತ್ಮನಿರ್ಭರ ಭಾರತದಲ್ಲಿ ಹೂಡಿಕೆಯಾಗಬೇಕು ಎಂದು ಉದ್ಯಮಗಳಿಗೆ ಕರೆ ಕೊಟ್ಟರು.

ನಮ್ಮ ದೇಶದ ಭೂಗರ್ಭದಲ್ಲಿರುವ ಸಂಪನ್ಮೂಲಗಳನ್ನು ಹೊರ ತೆಗೆಯೋದರಿಂದ ಮುಂದಿನ ಪೀಳಿಗೆಗೆ ತೊಂದರೆ ಆಗಬಾರದು, ಅಂತಹ ಎಚ್ಚರಿಕೆ ವಹಿಸಬೇಕು. ಹಾಗೆಯೇ ಆರ್ಥಿಕವಾಗಿಯೂ ದೇಶ ಸದೃಢವಾಗಿರಬೇಕು, ದೇಶಕ್ಕೆ ಆರ್ಥಕ ದುಸ್ಥಿತಿಯೂ ಬಾರದ ರೀತಿ ಕಲ್ಲಿದ್ದಲು ಬಳಿಕೆಯನ್ನ ಮಾಡಬೇಕಿದೆ. ಈಗಾಗಲೇ ಇಡಿ ದೇಶದಲ್ಲಿ 67 ಗಣಿಗಳನ್ನು ಹರಾಜು ಮಾಡಲಾಗಿದೆ ಎಂದು ಹೇಳಿದರು.

ಒಂದು ವರ್ಷದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ. ಗಣಿಗಾರಿಕೆ ಮತ್ತು ಅದರ ನೀತಿಗಳಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ. ಕಳೆದ ಒಂದು ವರ್ಷದಲ್ಲಿ 115 ಬ್ಲಾಕ್ಸ್‍ಗಳು ಹರಾಜ ಗಿವೆ. ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಹಾಗೆಯೇ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ವಿದ್ಯುತ್ ಉತ್ಪಾದನೆಯೂ ಹೆಚ್ಚಾಗಬೇಕಾದ ಅನಿವಾರ್ಯತೆ ಇದೆ. ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಕಲ್ಲಿದ್ದಲು ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ ನೀಡಲಾಗುತ್ತಿದೆ. ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ಮಹಾರಾಷ್ಟ್ರಕ್ಕೆ 13 ಕಲ್ಲಿದ್ದಲು ಬ್ಲಾಕ್ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ದತ್ತ ಜಯಂತಿಗೆ ಬಿಗಿ ಪೊಲೀಸ್ ಬಂದೋಬಸ್ತ್

ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ಛತ್ತೀಸ್‍ಗಢದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಬಳಕೆಯನ್ನು ಇನ್ನಷ್ಟು ಸುಧಾರಿಸುವ ಮಾರ್ಗೋಪಾಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ. ರೈಲ್ವೆ ವ್ಯಾಗನ್ಗಳಿಂದ ಕಲ್ಲಿದ್ದಲು ಇಳಿಸುವಿಕೆಯ ಸಮಯ ಸುಧಾರಿಸಲು ಒತ್ತು ನೀಡುವುದು ಸೇರಿದಂತೆ ಹಲವು ಸುಧಾರಣೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

ರಸ್ತೆ ಮಾರ್ಗ ಹಾಗೂ ರೋಪ್ ವೇ ಮೂಲಕ 40,000 ಟನ್ ಕಲ್ಲಿದ್ದಲನ್ನು ಸಾಗಣೆಗೆ ಅವಕಾಶವಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುವಂತೆಯೂ ಸೂಚಿಸಲಾಗಿದೆ ಎಂದು ಜೋಶಿ ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವ ಆಚಾರ್ ಹಾಲಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

#Iron, #Ore, #Production, #Karnataka, #CMBommai,

Articles You Might Like

Share This Article