ಟೋಕಿಯೊ,ಸೆ.15-ಚೀನಾದ ರಕ್ಷಣಾ ಸಚಿವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆಯೇ ಎಂದು ಜಪಾನ್‍ನಲ್ಲಿರುವ ಯುಎಸ್ ರಾಯಭಾರಿ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದೆ. ಚೀನಾ ರಕ್ಷಣಾ ಸಚಿವರು ಕಳೆದ ಎರಡು ವಾರಗಳ ಸಾರ್ವಜನಿಕ ವೀಕ್ಷಣೆಗೆ ಗೈರುಹಾಜರಾಗಿ ಗೊಂದಲ ಹೆಚ್ಚಿಸಿರುವ ಸಂದರ್ಭದಲ್ಲೇ ಅಮೆರಿಕ ಎಕ್ಸ್ ನಲ್ಲಿ ಈ ರೀತಿ ಪೋಸ್ಟ್ ಹಾಕಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪೋಸ್ಟ್ ನಲ್ಲಿ ರಕ್ಷಣಾ ಸಚಿವ ಲಿ ಶಾಂಗ್ಫಾ ಅವರನ್ನು 3 ವಾರಗಳಿಂದ ನೋಡಿಲ್ಲ ಅಥವಾ ಕೇಳಿಲ್ಲ, ಅವರು ವಿಯೆಟ್ನಾಂ ಪ್ರವಾಸಕ್ಕೆ ಹೋದ ಬಗ್ಗೆ ವರದಿಯಾಗಿಲ್ಲ ಆದರೂ ಅವರು ಗೈರುಹಾಜರಾಗಿದ್ದಾರೆ ಸಿಂಗಾಪುರದ ನೌಕಾಪಡೆಯ ಮುಖ್ಯಸ್ಥರೊಂದಿಗಿನ ಅವರ ನಿಗದಿತ ಸಭೆಯಿಂದ ಅವರನ್ನು ಗೃಹಬಂಧನದಲ್ಲಿ ಇರಿಸಿರಬಹುದು ಎಂದು ಶಂಕಿಸಲಾಗಿದೆ ಎಂದು ಬರೆದುಕೊಳ್ಳಲಾಗಿದೆ.
ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆ
ಪೋಸ್ಟ್ ನೊಂದಿಗೆ ಮಿಸ್ಟರಿ ಇನ್ ಬೀಜಿಂಗ್ ಬಿಲ್ಡಿಂಗ್ ಎಂಬ ಹ್ಯಾಶ್‍ಟ್ಯಾಗ್ ಇತ್ತು ಮತ್ತು ವಿಲಿಯಂ ಷೇಕ್ಸ್‍ಪಿಯರ್‍ನ ಹ್ಯಾಮ್ಲೆಟ್ ನಾಟಕದ ಡೆನ್ಮಾರ್ಕ್‍ನಲ್ಲಿ ಏನೋ ಕೊಳೆತಿದೆ ಎಂದು ಉಲ್ಲೇಖಿಸಲಾಗಿದೆ.ಕಳೆದ ವಾರ ಅವರು ವಿಯೆಟ್ನಾಂ ರಕ್ಷಣಾ ನಾಯಕರೊಂದಿಗಿನ ಸಭೆಯಿಂದ ಲಿ ಹಠಾತ್ತನೆ ಹಿಂದೆ ಸರಿದಿದ್ದಾರೆ ಎಂದು ವರದಿಯಾದ ನಂತರ ಅವರು ಇದುವರೆಗೂ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ.
ಅವರು ಕೊನೆಯದಾಗಿ ಬೀಜಿಂಗ್‍ನಲ್ಲಿ ಕಳೆದ ಆ. 29 ರಂದು ಆಫ್ರಿಕನ್ ರಾಷ್ಟ್ರಗಳೊಂದಿಗೆ ಭದ್ರತಾ ವೇದಿಕೆಯಲ್ಲಿ ಪ್ರಮುಖ ಭಾಷಣ ಮಾಡಿದ್ದೇ ಕೊನೆಯದಾಗಿತ್ತು.ನಾಪತ್ತೆಯಾಗಿರುವ ಲಿ ಅವರನ್ನು ಚೀನಾ ಸರ್ಕಾರ ಗೃಹಬಂಧನದಲ್ಲಿರಿಸಿ ತನಿಖೆಗೆ ಒಳಪಡಿಸಿರಬಹುದು ಎಂದು ಯುಎಸ್ ಸರ್ಕಾರ ನಂಬುತ್ತದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.
#China, #defenseminister, #under, #housearrest,