ಮಧ್ಯಾಹ್ನದ ವೇಳೆ ಮಲಗುವುದು ಸರಿಯೋ..? ತಪ್ಪೋ..?

Spread the love

Day-Time-Sleep--01

ಮಧ್ಯಾಹ್ನ ನಿದ್ದೆ ಮಾಡುವವರನ್ನು ಸಾಮಾನ್ಯವಾಗಿ ಸೋಮಾರಿಗಳು ಎಂದು ಹೇಳುತ್ತೇವೆ. ಸಾಮಾನ್ಯವಾಗಿ ಮಧ್ಯಾಹ್ನ ಊಟ ಮಾಡಿದ ಕೂಡಲೇ ಏನು ಕೆಲಸ ಮಾಡದೇ ಕುಳಿತರೆ ನಿದ್ದೆ ಬರುಹುದು ಸಹಜ.ಆದರೆ ಮುಂದುವರೆಯುತ್ತಿರುವ ಈ ಪ್ರಪಂಚದಲ್ಲಿ ನಮ್ಮ ಜನಕ್ಕೆ ಮಧ್ಯಾಹ್ನ ಅಲ್ಲ ರಾತ್ರಿ ಕೂಡ ನಿದ್ದೆ ಮಾಡಲು ಸಮಯ ಸಿಗುತ್ತಿಲ್ಲ.ನಿದ್ದೆ ಮಾಡಿದರೆ ನಮ್ಮ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ ಹಾಗು ನಿದ್ದೆ ಆಯಾಸವನ್ನು ನೀಗುಸುತ್ತದೆ.ಮತ್ತು ಚೆನ್ನಾಗಿ ನಿದ್ದೆ ಮಾಡಿದರೆ ನಮ್ಮ ದೇಹ ತುಂಬಾ ಆಕ್ಟಿವ್ ಆಗಿರುತ್ತದೆ. ಆದ್ದರಿಂದ ಮಧ್ಯಾಹ್ನದ ಹೊತ್ತು ಮಲಗುವುದು ಆರೋಗ್ಯದ ದೃಷ್ಟಿಯಲ್ಲಿ ಸರಿ ಎನ್ನುತ್ತಾರೆ ವೈದ್ಯರು. ಆದರೆ ಅದು 1 ಗಂಟೆಯಿಂದ 2 ಗಂಟೆಗೆ ಮಾತ್ರ ಸೀಮಿತವಾಗಿರಬೇಕು, ಮಧ್ಯಾಹ್ನದ ಸಮಯ ಅತಿಯಾಗಿ ನಿದ್ದೆ ಮಾಡುವುದರಿಂದ ಸೋಮಾರಿತನ ಕಾಡುತ್ತದೆ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿರುತ್ತದೆ.

ಬೆಳಗಿನ ಜಾವ ಬೇಗನೆ ಎದ್ದು, ಮನೆಗೆಲಸವನ್ನೆಲ್ಲಾ ಮಾಡಿ, ಅಡುಗೆ ಮಾಡಿ, ಮಕ್ಕಳನ್ನ ಶಾಲೆಗೆ ಸಿದ್ದ ಮಾಡಿ ಕಳಿಸಿ, ಪತಿಗೆ ಡಬ್ಬಿಯಲ್ಲಿ ಊಟವನ್ನ ಕಟ್ಟಿ ಕಚೇರಿಗೆ ಕಳಿಸುವಷ್ಟರಲ್ಲಿ ಗೃಹಿಣಿಯರಿಗೆ ನಕ್ಷತ್ರಗಳು ಕಾಣಿಸುತ್ತಿರುತ್ತವೆ. ಈ ಕಾರಣಕ್ಕಾಗಿ ಗೃಹಿಣಿಯರು ಈ ಕೆಲಸಗಳನ್ನೆಲ್ಲಾ ಮಾಡಿ ಮುಗಿಸಿದ ಮೇಲೆ, ಮಕ್ಕಳು ಶಾಲೆಯಿಂದ ವಾಪಸ್ ಬರುವುದರ ಒಳಗೆ ಒಂದು ರೌಂಡ್ ನಿದ್ದೆ ಮಾಡಿ ವಿಶ್ರಮಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇದರಿಂದ ದೇಹಕ್ಕೆ ಆಗುವ ಪರಿಣಾಮಗಳು ಏನೆಂಬುದು ನಿಮಗೆ ಗೊತ್ತೇ? ಇಲ್ಲಿವೆ ನೋಡಿ.

ನಿದ್ದೆ ಮಾಡುವುದರಿಂದ ಶೇಕಡಾ 33% ಹೃಧಯಾಘಾತ ವಾಗುವ ಪ್ರಮಾಣ ಕಡಿಮೆ ಆಗುತ್ತದೆ.60 ವರ್ಷ ಮೇಲ್ಪಟ್ಟ ಜನರು ಮಧಾಹ್ನ ನಿದ್ದೆ ಮಾಡುವುದರಿಂದ ಬೇರೆಯವರಿಗಿಂತ ತುಂಬಾ ಆಕ್ಟಿವ್ ಆಗಿರುತ್ತಾರೆ.ಹಾಗೂ ಅವರ ಬುದ್ಧಿವಂತಿಕೆಯ ಪ್ರಮಾಣ ಹೆಚ್ಚಳವಾಗುತ್ತದೆ ಎನ್ನಲಾಗುತ್ತೆ. ಹೌದು ನೀವು ಕೆಲಸದ ಒತ್ತಡದಿಂದ ತುಂಬ ನಿಮ್ಮ ಅರೋಗ್ಯ ಹದಗೆಟ್ಟಿರುತ್ತದೆ ಹಾಗಾಗಿ ನೀವು ಪ್ರತಿದಿನ ಒಂದು ಅಧ್ಯಯನದ ಪ್ರಕಾರ 30 ನಿಮಿಷ ಮಲಗಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ. ಹಾಗೆಂದು ನೀವು ಪ್ರತಿದಿನ ಸುಮಾರು ಹೊತ್ತು ಮಲಗಿದರೆ ಇದರಿಂದ ನಿಮ್ಮ ಆರೋಗ್ಯದ ಮೇಲೆ ತುಂಬ ಅಡ್ಡಪರಿಣಾಮಗಳು ಬೀರುತ್ತವೆ ಎನ್ನುತ್ತಾರೆ ವೈದ್ಯರು. ಹಾಗಾಗಿ ಒಂದು 30 ನಿಮಿಷ ಮಲಗಿ ನಿಮ್ಮ ಆರೋಗ್ಯಕ್ಕೆ ಬೇಕಾಗಿರುವ ಲಾಭವನ್ನು ಪಡೆದುಕೊಳ್ಳಿ.

ಇತ್ತೀಚಿಗಷ್ಟೇ ನಡೆಸಿದ ಅಧ್ಯಯನದಲ್ಲಿ ಯಾರೆಲ್ಲಾ ಪ್ರತಿದಿನ ಮಧ್ಯಾಹ್ನ 10,20 ಅಥವಾ 30 ನಿಮಿಷಗಳ ಕಾಲ ಮಲಗುವುದರಿಂದ ಜ್ಞಾಪಕ ಶಕ್ತಿ ಚುರುಕಾಗುತ್ತದೆ ಎಂಬುದು ತಿಳಿದು ಬಂದಿದೆ. ಈ ಅಧ್ಯಯನದಲ್ಲಿ 20 ನಿಮಿಷಗಳಿಗಿಂತ ಹೆಚ್ಚು ನಿದ್ದೆ ಮಾಡುವವರು ಎದ್ದೊಡನೆ ಸ್ವಲ್ಪ ತೂಕಡಿಕೆ ವ್ಯಕ್ತಪಡಿಸಿ ನಂತರ ಚುರುಕಾದರೆ, 10 ನಿಮಿಷಗಳ ಸಣ್ಣ ನಿದ್ದೆ ಮಾಡುವವರಲ್ಲಿ ಎದ್ದೊಡನೆ ಜ್ಞಾಪಕ ಶಕ್ತಿ ಮತ್ತು ಕಾಗ್ನಿಟಿವ್ ಸ್ಕಿಲ್ (ಅರಿವಿನ ಕೌಶಲ್ಯತೆ) ಹೆಚ್ಚು ಚುರುಕಾಗುವ ಲಕ್ಷಣಗಳು ಗೋಚರಿಸಿದವು ಎಂಬುದು ತಿಳಿದು ಬಂದಿದೆ.  ಬೆಳಕಿರುವ ಸಮಯದಲ್ಲಿ ಮಲಗಿದರೆ ಹೃದಯ ರಕ್ತನಾಳದ ಮೇಲೆ ಕಡಿಮೆ ಒತ್ತಡ ಬೀಳುವುದರಿಂದ, ರಕ್ತದೊತ್ತಡವು ಕಡಿಮೆ ಆಗುತ್ತದೆ. ದಿನದಲ್ಲಿ ಸ್ವಲ್ಪ ಹೊತ್ತು ನಿದ್ದೆ ಮಾಡುವುದರಿಂದ ದೇಹದಲ್ಲಿ ಬ್ಲಡ್‌ ಸರ್ಕ್ಯುಲೇಶನ್‌ ಸುಧಾರಣೆಯಾಗುತ್ತದೆ. ಇದರಿಂದಾಗಿ ಮಸಲ್ಸ್‌ ರಿಲ್ಯಾಕ್ಸ್‌ ಆಗಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆಯನ್ನು ಇಂಪ್ರೂವ್‌ ಮಾಡುತ್ತದೆ. ಇದರಿಂದ ನರವ್ಯೂಹ ವ್ಯವಸ್ಥೆ ಸುಧಾರಣೆಯಾಗುತ್ತದೆ. ಮಧ್ಯಾಹ್ನದ ನಿದ್ದೆಯಿಂದ ಏಕಾಗ್ರತೆ ಅಥವಾ ಫೋಕಸ್‌ ಹೆಚ್ಚುತ್ತದೆ. ಇದರಿಂದ ನೀವು ಚುರುಕಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಹೈ ಬಿಪಿ ರೋಗಿಗಳಿಗೆ ಹೆಚ್ಚು ಲಾಭದಾಯಕವಾಗಿದೆ.

ಯೂನಿವರ್ಸಿಟಿ ಆಫ್ ಬರ್ಕ್ಲಿ ಅಲ್ಲಿ ನಡೆದ ಸಂಶೋಧನೆ ಪ್ರಕಾರ ಮಧ್ಯಾಹ್ನದ ಹೊತ್ತು 90 ನಿಮಿಷಗಳ ಕಾಲ ಮಲಗುವುದರಿಂದ ನಿಮಗೆ ದೇಹಕ್ಕೆ ಮತ್ತು ಚಿತ್ತಕ್ಕೆ ಆರಾಮ ಸಿಗುತ್ತದೆ ಎಂಬುದು ತಿಳಿದು ಬಂದಿದೆ.  ದಿನದಲ್ಲಿ 30 ನಿಮಿಷ ದಿಂದ 1 ಗಂಟೆ ನಿದ್ದೆ ಮಾಡಿದರೆ ಹೃದಯಕ್ಕೆ ಸರಿಯಾದ ರೀತಿಯಲ್ಲಿ ರಕ್ತ ಪರಿಚಲನೆಯಾಗುತ್ತದೆ. ಇದರಿಂದ ಹೃದಯ ಆರೋಗ್ಯದಿಂದಿರಲು ಸಹಾಯವಾಗುತ್ತದೆ. ಅಮೆರಿಕಾದ ನಾಸಾ ಸಂಸ್ಥೆಯಲ್ಲಿ ಮಿಲಿಟರಿ ಪೈಲಟ್ ಮತ್ತು ಗಗನಯಾತ್ರಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ, 40 ನಿಮಿಷ ಅವಧಿಯ ನಿದ್ದೆಯು ಅವರ ಕಾರ್ಯಕ್ಷಮತೆಯನ್ನ 37% ಅಷ್ಟು ಹೆಚ್ಚು ಮಾಡಿದರೆ, ಅವರ ಜಾಗರೂಕತೆಯನ್ನ 100% ಅಷ್ಟು ಹೆಚ್ಚು ಮಾಡುತ್ತದೆ ಎಂಬುದು ತಿಳಿದು ಬಂದಿದೆ.

ಇದು ನಿಮ್ಮ ಜ್ಞಾಪಕ ಶಕ್ತಿ ಮತ್ತು ಗ್ರಹಣ ಶಕ್ತಿಯನ್ನ ಹೆಚ್ಚಿಸುವುದಷ್ಟೇ ಅಲ್ಲದೆ, ಅದರ ಪರಿಣಾಮವಾಗಿ ನಿಮ್ಮ ಸೃಜನಶೀಲತೆ ಕೂಡ ಹೆಚ್ಚಿಸುತ್ತದೆ.    ಮನೋಶಾಸ್ತ್ರದ ಪ್ರಕಾರ ನೀವು ನಿದ್ದೆಯ ಕೊರತೆ ಎದುರಿಸುತ್ತಿದ್ದರೆ, ನಿಮ್ಮ ಮೆದುಳಿಗೆ ಅಡಚಣೆಗಳನ್ನ ನಿರ್ಲಕ್ಷಿಸುವುದು ಮತ್ತು ನಿಮ್ಮ ಚಿತ್ತವನ್ನ ನಿಯಂತ್ರಣದಲ್ಲಿ ಹಿಡಿದುಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ನೀವು ಮಧ್ಯಾಹ್ನದ ಹೊತ್ತು ಮಲಗಿ ಎದ್ದರೆ, ನಿಮ್ಮ ಮೆದುಳು ಅಡಚಣೆಗಳನ್ನ ನಿರ್ಲಕ್ಷಿಸಿ ಗುರಿಯ ಕಡೆ ಮಾತ್ರ ನೀವು ನೋಡುವಂತೆ ಮಾಡಿ, ನಿಮ್ಮ ಇಚ್ಚಾಶಕ್ತಿಯನ್ನ ಹೆಚ್ಚಿಸುತ್ತದೆ.

Facebook Comments

Sri Raghav

Admin