ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೇ..?

Social Share

ಬೆಂಗಳೂರು,ಡಿ.14-ಕೊಪ್ಪಳದಲ್ಲಿ ನಾಳೆ ಬಿಜೆಪಿ ಕಚೇರಿ ಉದ್ಘಾಟನೆ ಕಾರ್ಯಕ್ರಮ ನಿಗದಿಯಾಗಿದ್ದರೂ ಈವರೆಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಲಾಗಿಲ್ಲ.ಇದು ಬಿಜೆಪಿಯೊಳಗೆ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬುದಕ್ಕೆ ಇಂಬು ನೀಡುವಂತಿದೆ.

ನಾಳೆ ಕೊಪ್ಪಳಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಆಗಮಿಸುತ್ತಿದ್ದು , ಏಕಕಾಲಕ್ಕೆ 10 ಕಚೇರಿಗಳು ಮತ್ತು ಮೂರು ಕಾರ್ಯಾಲಯಗಳನ್ನು ಉದ್ಘಾಟಿಸಲಿದ್ದಾರೆ.ಸಮಾರಂಭ ನಡೆಯಲು ಇನ್ನು ಕೇವಲ ಕೆಲವೇ ಗಂಟೆಗಳು ಬಾಕಿಯಿದ್ದರೂ ಯಡಿಯೂರಪ್ಪ ಅವರಿಗೆ ಆಹ್ವಾನ ಪತ್ರಿಕೆಯನ್ನೇ ಸಂಘಟಿಕರು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಪ್ರಮುಖರಿಗೆ ಬಿಜೆಪಿ ಕಚೇರಿಯಿಂದ ಆಹ್ವಾನ ಪತ್ರಿಕೆಯನ್ನು ನೀಡಿ ಆಗಮಿಸಬೇಕೆಂದು ಮನವಿ ಮಾಡಲಾಗಿದೆ. ಹಿರಿಯರಾಗಿರುವ ಬಿಎಸ್‍ವೈಗೆ ಮಾತ್ರ ಆಹ್ವಾನ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬಗರ್ ಹುಕುಂ ಭೂಮಿ ಮಂಜೂರು ಕುರಿತು ಕಂದಾಯ ಇಲಾಖೆ ಮಹತ್ವದ ಆದೇಶ

ಪಕ್ಷದಲ್ಲಿ ಯಡಿಯೂರಪ್ಪ ಅವರಿಗೆ ಉನ್ನತ ಗೌರವ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯರಾದ ಬಳಿಕ ಬಿಜೆಪಿ ವರಿಷ್ಠರು ಅವರನ್ನು ಗೌರವಾಧರಗಳಿಂದ ನೋಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದಕ್ಕೆ ಪುಷ್ಟಿ ನೀಡುವಂತೆ ಗುಜರಾತ್ ಮತ್ತು ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಹಂಚಿಕೆಗೆ ಸಂಬಂಸಿದಂತೆ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿತ್ತು. ಇತ್ತೀಚೆಗೆ ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ವೇಳೆ ಯಡಿಯೂರಪ್ಪ ಅವರನ್ನು ವೀಕ್ಷಕರಾಗಿ ಸಹ ನೇಮಿಸಲಾಗಿತ್ತು.ಆದರೆ ಪಕ್ಷದ ಅಕೃತ ಕಾರ್ಯಕ್ರಮಕ್ಕೆ ಅವರಿಗೆ ಆಹ್ವಾನ ಕೊಡದಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕಿದೆ.

#Yeddyurappa, #BeingCornered, #BJP, #KoppalaBJPOffice, #JPNadda, #ಯಡಿಯೂರಪ್ಪ,

Articles You Might Like

Share This Article