ಕೋಲ್ಕತ್ತಾ, ಮಾ 19 -ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಇಂಡಿಯನ್ ಸೆಕ್ಯುಲರ್ ಫ್ರಂಟ್ ಪಕ್ಷದ ಶಾಸಕ ನೌಸಾದ್ ಸಿದ್ದಿಕ್ ಅವರ ಮೇಲೆ ವ್ಯಕ್ತಿ ಯೊಬ್ಬ ಏಕಾಏಕಿ ಹಲ್ಲೆ ನಡೆಸಿದ ಘಟನೆ ಇಲ್ಲಿ ನಡೆದಿದೆ.
ಕೋಲ್ಕತ್ತಾ ನಗರದ ಹೊರಬಾಗದ ಮೈದಾನಲ್ಲಿ ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಸರ್ಕಾರಿ ನೌಕರರನ್ನು ಉದ್ದೇಶಿಸಿ ಸಿದ್ದಿಕ್ ಮಾತನಾಡಿ ಹೊರಡಲು ಮುಂದಾದಾಗ , ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ವೇದಿಕೆಯ ಮೇಲೆ ಬಂದು ಅಲ್ಪಸಂಖ್ಯಾತರಿಗೆ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ .
ಪ್ರತ್ಯುತ್ತರವಾಗಿ, ಶಾಸಕರು ತಾವು ಯಾವುದೇ ಸಮುದಾಯಕ್ಕೆ ನಿರ್ದಿಷ್ಟವಾಗಿ ಏನನ್ನೂ ಮಾಡುವುದಿಲ್ಲ ಎಂದು ಹೇಳಿದ್ದರೆ.
ನಕಲಿ IPS ಅಧಿಕಾರಿ ಬಂಧನ : 36 ಲಕ್ಷ ಹಣ ಸೇರಿ 54 ಲಕ್ಷ ಮೌಲ್ಯದ ಮಾಲು ಜಪ್ತಿ
ಆಕ್ರೋಶಗೊಂಡ ವ್ಯಕ್ತಿ ಶಾಸಕರ ಕಪಾಳಕ್ಕೆ ಹೊಡೆದಿದ್ದಾನೆ ನಂತರ ತಳಿದ್ದಾನೆ. ಘಟನೆಗಳ ದಿಗ್ಭ್ರಮೆಗೊಂಡ ಪ್ರತಿಭಟನೆಕಾರರು ಆ ವ್ಯಕ್ತಿಯನ್ನು ತಡೆದು ದಳಿಸಿದ್ದಾರೆ ನಂತರ ಮೈಕ್ ನಲ್ಲಿ ಸಿದ್ದಿಕ್ ಅವರು ಅವನಿಗೆ ಏನೂ ಮಾಡಬೇಡಿ, ದಯವಿಟ್ಟು ಸುಮ್ಮನಿರಿ, ಇದೊಂದು ನಾಟಕ, ಪೊಲೀಸರು ಕರೆದುಕೊಂಡು ಹೋಗಲಿ ಎಂದು ಸಮಾಧಾನ ಮಾಡಿದ್ದಾರೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಮಮತಾ ಬ್ಯಾನರ್ಜಿ ಸರ್ಕಾರದ ತೀವ್ರ ಟೀಕೆಗೆ ಗುರಿಯಾಗಿದ್ದ ಸಿದ್ದಿಕ್ ಅವರು ಕಳೆದ ಜನವರಿಯಲ್ಲಿ ನಗರದಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಬಂಧಿನಕ್ಕೆ ಒಳಗಾಗಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಶಂಕಿತ ಉಗ್ರರಿಂದ 25 ಕಡೆ ಟ್ರಯಲ್ ಬ್ಲಾಸ್ಟ್ : NIA ಚಾರ್ಜ್‍ಶೀಟ್
ಸಿದ್ದಿಕ್ ಮೇಲೆ ಹಲ್ಲೇ ನಡೆಸಿದ ವ್ಯಕ್ತಿಯನ್ನು ಹೌರಾ ಜಿಲ್ಲೇಯ ಬಂಕ್ರಾ ನಿವಾಸಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ISF, MLA, Nawsad Siddique, attacked, Kolkata,