ISIL ಭಯೋತ್ಪಾದಕರಿಂದ 19 ಜನರ ನರಮೇದ

ISIL--01

ಮರವಿ (ಫಿಲಿಪ್ಪೈನ್ಸ್), ಮೇ 19-ಇಸ್ಲಾಮ್ ಭಯೋತ್ಪಾದಕರು ನಡೆಸಿದ ಭೀಕರ ಹಿಂಸಾಚಾರದಲ್ಲಿ 19 ನಾಗರಿಕರು ಮೃತಪಟ್ಟ ಘಟನೆ ದಕ್ಷಿಣ ಫಿಲಿಪ್ಪೈನ್ಸ್ ನ ಮರವಿಯಲ್ಲಿ ನಡೆದಿದೆ. ಈ ಹತ್ಯಾಕಾಂಡದೊಂದಿಗೆ ಕಳೆದ ಒಂದು ವಾರದಲ್ಲಿ ಮೃತಪಟ್ಟವರ ಸಂಖ್ಯೆ 85ಕ್ಕೇರಿದೆ.   ಮುಸ್ಲಿಮರೇ ಹೆಚ್ಚಾಗಿರುವ ಈ ಪಟ್ಟಣದಲ್ಲಿರಂಜಾನ್ ಹಬ್ಬದ ಸಂದರ್ಭದಲ್ಲೇ ಹಿಂಸಾಚಾರ ಮರುಕಳಿಸಿದ್ದು, ಜನರು ಮತ್ತಷ್ಟು ಆತಂಕಗೊಂಡಿದ್ಧಾರೆ.ವಿಶ್ವದ ಅತ್ಯಂತ ಕ್ರೂರ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಉಗ್ರರು ಭದ್ರತಾ ಪಡೆಗಳೊಂದಿಗೆ ಬೀದಿ ಕಾಳಗಕ್ಕೆ ಇಳಿದಿದ್ದು, ಘರ್ಷಣೆಯಲ್ಲಿ ಮೂವರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ 19 ಅಮಾಯಕ ನಾಗರಿಕರು ಹತರಾಗಿದ್ದಾರೆ.  ಹಿಂಸಾಚಾರ ತೀವ್ರಗೊಂಡಿರುವುದರಿಂದ, ಅಧ್ಯಕ್ಷ ರೋಡ್ರಿಗೋ ಡುಟೆರ್ಟೆ ಈ ನಗರದಲ್ಲಿ ಮಾರ್ಷಲ್ ಲಾ (ಮಿಲಿಟರಿ ಕಾನೂನು) ಘೋಷಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin