ಉಗ್ರರಿಂದ ರಾಕೆಟ್‍ದಾಳಿ, 11 ಈಜಿಪ್ಟ್ ಯೋಧರ ಸಾವು

Spread the love

ಕೈರೋ, ಮೇ 9 (ಎಪಿ) ಈಜಿಪ್ಟ್ ನ ಸೂಯೆಜ್ ಕಾಲುವೆಯ ಪೂರ್ವ ನೀರು ಪಂಪಿಂಗ್ ಕೇಂದ್ರ ಮೇಲೆ ಉಗ್ರಗಾಮಿಗಳು ರಾಕೆಟ್‍ದಾಳಿ ನಡೆಸಿದ್ದು 11 ಯೋದರು ಸಾವನ್ನಪ್ಪಿದ್ದಾರೆ.

ಈಜಿಪ್ಟ್  ಮಿಲಿಟರಿ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಆಮಾಕ್ ಸುದ್ದಿ ಸಂಸ್ಥೆ ಐಎಸ್ ಉಗ್ರಗಾಮಿ ಸಂಘಟನೆ ನಡಿದ ಹೇಳಿಕೆಯಲ್ಲಿ ದಾಳಿಯ ಹೊಣೆ ಹೊತ್ತಿಕೊಂಡಿದೆ, ಮೃತರ ಯೋದರ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ಸೂಯೆಜ್ ಕಾಲುವೆಯಿಂದ ಪೂರ್ವಕ್ಕೆ ಚಾಚಿಕೊಂಡಿರುವ ಇಸ್ಮಾಯಿಲಿಯಾ ಪ್ರಾಂತ್ಯದ ಕ್ವಾಂತಾರಾ ಪಟ್ಟಣದಲ್ಲಿ ದಾಳಿ ನಡೆದಿದೆ. ಉಗ್ರರು ಸೈನಿಕರ ಮೇಲೆ ದಾಳಿ ಮಾಡಿ ನಂತರ ಪಲಾಯನ ಮಾಡಿದರು ದಾಳಿಕೋರರನ್ನು ಹಿಂಬಾಲಿಸುತ್ತಿವೆ ಎಂದು ಸೇನೆ ಹೇಳಿದೆ.

ಉಗ್ರಗಾಮಿಗಳು ಮುಖ್ಯವಾಗಿ ಭದ್ರತಾ ಪಡೆಗಳು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿಗಳನ್ನು ನಡೆಸಿದ್ದಾರೆ.ಅದನ್ನು ಹತ್ತಿಕ್ಕಲು ಕಾರ್ಯಾಚರಣೆ ನಡೆಸಲಾಗಿತ್ತಿದೆ ಎಮದು ಸೇನೆ ಅಕಾರಿಗಳು ತಿಳಿಸಿದ್ದಾರೆ.

Facebook Comments