ಪೇಶಾವರ, ಮಾ. 5 ಶುಕ್ರವಾರದ ಪ್ರಾರ್ಥನೆಯ ವೇಳೆ ಪಾಕಿಸ್ತಾನದ ವಾಯುವ್ಯ ನಗರವಾದ ಪೇಶಾವರದಲ್ಲಿರುವ ಶಿಯಾ ಮುಸ್ಲಿಂ ಮಸೀದಿಯೊಳಗೆ ಏಕಾಂಗಿ ಅಫ್ಘಾನಿಸ್ತಾನದ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 56 ಆರಾಧಕರು ಸಾವನ್ನಪ್ಪಿದ್ದಾರೆ ಮತ್ತು 194 ಜನರು ಗಾಯಗೊಂಡಿದ್ದಾರೆ ಎಂದು ಇಸ್ಲಾಮಿಕ್ ಸ್ಟೇಟ್ ಹೇಳಿದೆ.
ಖೊರಾಸನ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆ ಮತ್ತು ಅಫ್ಘಾನಿಸ್ತಾನದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಂಘಟನೆ ಶುಕ್ರವಾರದ ಧ್ವಂಸಕ ದಾಳಿಯನ್ನು ನಡೆಸಿದೆ ಎಂದು ಗುಪ್ತಚರ ಸಂಸ್ಥೆ ಹೇಳಿದೆ. ಈ ಹೇಳಿಕೆಯನ್ನು ಗುಂಪಿನ ಅಮಾಕ್ ನ್ಯೂಸ್ ಏಜೆನ್ಸಿಯಲ್ಲಿ ಪೋಸ್ಟ್ ಮಾಡಲಾಗಿದ್ದು, ದಾಳಿಕೋರನನ್ನು ಅಫ್ಘಾನ್ ಎಂದು ಗುರುತಿಸಿ, ಭಾವಚಿತ್ರವನ್ನು ಪೋಸ್ಟ್ ಮಾಡಿದೆ.
ಶಿಯಾ ಧಾರ್ಮಿಕ ಕೇಂದ್ರಗಳನ್ನು ಭದ್ರಪಡಿಸಲು ತಾಲಿಬಾನ್ ಮಿಲಿಟಿಯಾ ಮತ್ತು ಪಾಕಿಸ್ತಾನಿ ಪೊಲೀಸರು ಅಳವಡಿಸಿಕೊಂಡಿರುವ ತೀವ್ರವಾದ ಭದ್ರತಾ ಕ್ರಮಗಳ ಹೊರತಾಗಿಯೂ ಇಸ್ಲಾಮಿಕ್ ಸ್ಟೇಟ್ ಹೋರಾಟಗಾರರು ನಿರಂತರವಾಗಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ವಾಸಿಸುವ ಶಿಯಾಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ.
ಪೇಶಾವರದ ಹಳೆಯ ನಗರದ ಕಿರಿದಾದ ಬೀದಿಯಲ್ಲಿನ ಮಸೀದಿಯಲ್ಲಿ ನಡೆದ ಹತ್ಯಾಕಾಂಡವು ಭಯಾನಕವಾಗಿದೆ. ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಯ ವಕ್ತಾರ ಅಸಿಮ್ ಖಾನ್ ಪ್ರಕಾರ, ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದೆ. ಬಲಿಪಶುಗಳಾದವರ ದೇಹಗಳು ಚೂರುಗಳಾಗಿವೆ.
ಪೇಶಾವರದ ಹಳೆಯ ನಗರದಲ್ಲಿರುವ ಮಸೀದಿಯ ಹೊರಗೆ ಶಸ್ತ್ರಸಜ್ಜಿತ ದಾಳಿಕೋರನೊಬ್ಬ ಪೊಲೀಸರ ಮೇಲೆ ಗುಂಡು ಹಾರಿಸಿದಾಗ ಹಿಂಸಾಚಾರ ಆರಂಭವಾಯಿತು ಎಂದು ಪೇಶಾವರ ಪೊಲೀಸ್ ಮುಖ್ಯಸ್ಥ ಮುಹಮ್ಮದ್ ಎಜಾಜ್ ಖಾನ್ ಹೇಳಿದ್ದಾರೆ. ಗುಂಡಿನ ಚಕಮಕಿಯಲ್ಲಿ ಒಬ್ಬ ಪೊಲೀಸ್ ಹುತಾತ್ಮರಾಗಿದ್ದು, ಮತ್ತೊಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.
ದಾಳಿಕೋರನು ಮಸೀದಿಯೊಳಗೆ ಓಡಿ ತನ್ನನ್ನು ತಾನು ಸ್ಫೋಟಸಿಕೊಂಡಿದ್ದಾನೆ. ಆತ ತನ್ನ ದೇಹಕ್ಕೆ 5 ಕೆಜಿಯಷ್ಟು (12 ಪೌಂಡ್) ಸೋಟಕ ಕಟ್ಟಿಕೊಂಡಿದ್ದ ಎಂದು ಪೇಶಾವರ ರಾಜಧಾನಿಯಾಗಿರುವ ಖೈಬರ್ ಪುಖ್ತುಂಖ್ವಾ ಪ್ರಾಂತ್ಯದ ಉನ್ನತ ಪೊಲೀಸ್ ಅಧಿಕಾರಿ ಮೊವಾಝಮ್ ಜಾಹ್ ಅನ್ಸಾರಿ ಹೇಳಿದ್ದಾರೆ.
ಸಿಸಿಟಿ ದೃಶ್ಯಾವಳಿಗಳ ಪ್ರಕಾರ, ದಾಳಿಕೋರನ ದೇಹದ ಹೆಚ್ಚಿನ ಭಾಗವನ್ನು ಆವರಿಸಿರುವ ದೊಡ್ಡ ಕಪ್ಪು ಶಾಲಿನ ಕೆಳಗೆ ಸೋಟವನ್ನು ಮರೆಮಾಡಲಾಗಿದೆ. ಬಾಂಬರ್ ಕಿರಿದಾದ ರಸ್ತೆಯಲ್ಲಿ ಮಸೀದಿಯ ಪ್ರವೇಶದ್ವಾರದ ಕಡೆಗೆ ವೇಗವಾಗಿ ಚಲಿಸುತ್ತಿರುವುದು ದೃಶ್ಯಾವಳಿಯಲ್ಲಿದ. ಒಳಗೆ ಪ್ರವೇಶಿಸುವ ಮೊದಲು ಆತ ಮಸೀದಿಯನ್ನು ರಕ್ಷಿಸುವ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ.
ಕೆಲವೇ ಸೆಕೆಂಡುಗಳಲ್ಲಿ, ಪ್ರಬಲವಾದ ಸೋಟ ಸಂಭಸಿದೆ, ಕ್ಯಾಮರಾ ಲೆನ್ಸ್ ಧೂಳು ಮತ್ತು ಶಿಲಾಖಂಡರಾಶಿಗಳಿಂದ ಅಸ್ಪಷ್ಟವಾಗಿದೆ. ಸ್ಫೋಟಕಕ್ಕೆ ಬಾಲ್ ಬೇರಿಂಗ್‍ಗಳನ್ನು ಅಳವಡಿಸಿದ್ದರಿಂದ ಹೆಚ್ಚಿನ ಅಪಾಯವಾಗಿದೆ, ಮತ್ತಷ್ಟು ಪ್ರಾಣ ಹಾನಿಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
