ಗಾಜಾ, ಆ. 8- ಪ್ಯಾಲಿಸ್ತೇನ್‍ನ ಹಮಾಸ್ ಉಗ್ರ ಸಂಘಟನೆ ಹಾಗೂ ಇಸ್ರೇಲಿ ಪಡೆಗಳ ನಡುವೆ ಗಾಜಾ ನಗರದಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಕಳೆದ ಒಂದು ವಾರದಲ್ಲಿ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಹಿಂಸಾಚಾರಗಳು ಆತಂಕ ಮೂಡಿಸಿದ್ದು, ಪ್ಯಾಲೆಸ್ತೇನ್ ಕಡೆಯಿಂದ ಉಗ್ರರು ರಾಕೇಟ್‍ಗಳನ್ನು ಉಡಾಯಿಸುತ್ತಿದ್ದಾರೆ. ಇತ್ತ ಇಸ್ರೇಲ್ ವಾಯು ದಾಳಿ ಮೂಲಕ ಉಗ್ರರ ಹಡಗು ತಾಣಗಳನ್ನು ನಾಶಪಡಿಸುತ್ತಿದೆ. ಎರಡು ಕಡೆಗಳಿಂದ ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕಿ ಬಾಂಬ್ ದಾಳಿ ನಡೆಯುತ್ತಿದ್ದು, ಹೆಚ್ಚಿನ ಅನಾಹುತ ಪ್ಯಾಲೆಸ್ತೇನ್ ಕಡೆ ಉಂಟಾಗಿದೆ.
ಗಾಜಾ ನಗರದಲ್ಲಿ ಕ್ಷಿಪಣಿ ದಾಳಿಯಿಂದ ಮಹಿಳೆಯರು, ಮಕ್ಕಳು ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಇಸ್ರೇಲ್ ಮಾತ್ರ ತಾವು ಉಗ್ರರ ಮೇಲೆ ಮಾತ್ರ ದಾಳಿ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.