ಬೈರುತ್,ಮಾ.12- ಇಸ್ರೇಲಿ ಕ್ಷಿಪಣಿಗಳು ಭಾನುವಾರ ಪಶ್ಚಿಮ ಸಿರಿಯಾದ ನಗರವನ್ನು ಗುರಿಯಾಗಿಸಿಕೊಂಡು ಮಿಸೈಲ್ ದಾಳಿ ನಡೆಸಿದ್ದು, ಮೂವರು ಸಿರಿಯನ್ ಸೈನಿಕರನ್ನು ಗಾಯಗೊಂಡಿದ್ದಾರೆ ಎಂದು ಸಿರಿಯನ್ ರಾಜ್ಯ ಮಾಧ್ಯಮ ವರದಿ ಮಾಡಿದೆ.
ಸೇನಾ ಮೂಲವನ್ನು ಉಲ್ಲೇಖಿಸಿ ಅಧಿಕೃತ ಸುದ್ದಿ ಸಂಸ್ಥೆ ಎಸ್‍ಎಎನ್‍ಎ, ಹಮಾ ಪ್ರಾಂತ್ಯದ ಮಸ್ಯಾಫ್‍ನಲ್ಲಿ ಭಾನುವಾರ ಬೆಳಗಿನ ಜಾವ ಕ್ಷಿಪಣಿಗಳ ದಾಳಿಗಳು ನಡೆಸಿವೆ. ಅವುಗಳಲ್ಲಿ ಕೆಲವನ್ನು ಸಿರಿಯಾದ ವಾಯು ರಕ್ಷಣಾ ಪಡೆಗಳು ಹಲವನ್ನು ಹೊಡೆದುರುಳಿಸಿವೆ. ಘಟನೆಯಲಿಲ ಯಾವುದೇ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕ್ಷಿಪಣಿಗಳು ಕೃಷಿ ಭೂಮಿಗೆ ಅಪ್ಪಳಿಸಿರುವುದನ್ನು ಸುದ್ದಿ ಸಂಸ್ಥೆ ಫೋಟೋ ಸಮೇತ ವರದಿ ಮಾಡಿದೆ. ಘಟನೆ ಬಗ್ಗೆ ಇಸ್ರೇಲ್‍ನಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಹಲವಾರು ಬಾರಿ ಈ ರೀತಿಯ ಕಾರ್ಯಾಚರಣೆಗಳನ್ನು ಇಸ್ರೇಲ್ ಒಪ್ಪಿಕೊಂಡಿದೆ.
ಮೋದಿ ರೋಡ್ ಶೋ : ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಹೆಸರು ತೆರವು
ಇರಾನ್ ಹಾಗೂ ಮಿತ್ರ ಸೇನಾಪಡೆಗಳು ಸಿರಿಯಾದಲ್ಲಿನ ಉಗ್ರಗಾಮಿ ಗುಂಪುಗಳನ್ನು ಗುರಿಯಾಗಿಸಿಕೊಂಡು ಹಲವು ಬಾರಿ ದಾಳಿ ನಡೆಸಿವೆ. ಲೆಬನಾನ್‍ನ ಉಗ್ರಗಾಮಿ ಹಿಜ್ಬುಲ್ಲಾ ವಿರುದ್ಧ ಹಲವು ಬಾರಿ ಕಾರ್ಯಾಚರಣೆ ನಡೆಸಿದೆ. ಸಿರಿಯನ್ ಅಧ್ಯಕ್ಷ ಬಶರ್ ಅಸ್ಸಾದ್ ಅವರ ಸರ್ಕಾರಿ ಪಡೆಗಳ ವಿರುದ್ಧವೂ ಹೋರಾಟಗಳು ನಡೆದಿವೆ.
ಗುಡಿಸಲಿಗೆ ಬೆಂಕಿ ಬಿದ್ದು ಮೂರು ಮಕ್ಕಳು ಸೇರಿ ಐವರು ಸಜೀವ ದಹನ
ಸಿರಿಯಾದ ಉಗ್ರ ಚಟಿವಟಿಕೆಗಳ ವಿರುದ್ಧ ಇಸ್ರೇಲ್ ಕಾರ್ಯಚರಣೆ ನಡೆಸುತ್ತಲೇ ಇದೆ. ಶಸ್ತ್ರಾಸ್ತ್ರ ಸಾಗಣೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವ ಸಾಧ್ಯತೆಗಳಿವೆ. ಈ ಹಿಂದೆ 2022 ರ ಮೇ ಮತ್ತು ಆಗಸ್ಟ್‍ನಲ್ಲಿ ಇಸ್ರೇಲ್ ಸಿರಿಯಾದ ಮಸ್ಯಾಫ್ ಮೇಲೆ ದಾಳಿ ಮಾಡಿ ಐದು ಜನರನ್ನು ಕೊಂದು ಇಬ್ಬರನ್ನು ಗಾಯಗೊಳಿಸಿತ್ತು.
Israeli, Strikes, Syria, Wound, Three, Soldiers,