RH-200 ಸೌಂಡಿಂಗ್ ರಾಕೆಟ್‍ನ ಸತತ 200ನೇ ಯಶಸ್ವಿ ಉಡಾವಣೆ

Social Share

ಬೆಂಗಳೂರು, ನ.24 -ಇಸ್ರೋದ ಬಹುಮುಖ ಸೌಂಡಿಂಗ್ ರಾಕೆಟ್ RH-200 ತಿರುವನಂತಪುರಂನ ತುಂಬಾ ತೀರದಿಂದ ಸತತ 200 ನೇ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದನ್ನು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದೆ. ಇದಕ್ಕೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಇತರೆ ಅಧಿಕಾರಿಗ ಸಾಕ್ಷಿಯಾದರು.

ಭಾರತೀಯ ಸೌಂಡಿಂಗ್ ರಾಕೆಟ್‍ಗಳನ್ನು ಪವನಶಾಸ್ತ್ರ, ಖಗೋಳಶಾಸ್ತ್ರ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಗಳನ್ನು ನಡೆಸಲು ಮತ್ತು ವೈಜ್ಞಾನಿಕ ಸಮುದಾಯಕ್ಕೆ ವಿಶೇಷ ಸಾಧನಗಳಾಗಿ ಬಳಸಲಾಗುತ್ತದೆ ಎಂದು ಇಸ್ರೋ ಹೇಳಿಕೆ ತಿಳಿಸಿದೆ.

ರಾಜ್ಯದಲ್ಲಿ ಮತ್ತೆ ಜೋರಾಯ್ತು ಧರ್ಮ ದಂಗಲ್

ರೋಹಿಣಿ ಸೌಂಡಿಂಗ್ ರಾಕೆಟ್ ಸರಣಿಯು ಇಸ್ರೋದ ಭಾರವಾದ ಮತ್ತು ಹೆಚ್ಚು ಸಂಕೀರ್ಣವಾದ ಉಡಾವಣಾ ವಾಹನಗಳಿಗೆ ಮುಂಚೂಣಿಯಲ್ಲಿ ಬಳಸಲಾಗುತ್ತದೆ ವಾತಾವರಣ ಮತ್ತು ಹವಾಮಾನ ಅಧ್ಯಯನಗಳಿಗೆ ಇಂದಿಗೂ ನಿರಂತರವಾಗಿ ಇದನ್ನು ಬಳಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಬೆಂಗಳೂರು ಸೇರಿ ರಾಜ್ಯದಾದ್ಯಂತ ಇನ್ನೂ 2 ದಿನ ಜಿಟಿಜಿಟಿ ಮಳೆ

ಸದ್ಯದಲೇ ಶ್ರೀಹರಿಕೋಟದಲ್ಲಿ ಶುಕ್ರವಾರ ಪಿಎಸ್‍ಎಲ್/ಸಿ5 ಒಎಸ್-06 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ.

ISRO, attempt, 200th, consecutively, successful, launch, RH-200, sounding, rocket,

Articles You Might Like

Share This Article