ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿರುವ ಉಪಗ್ರಹ ಯಶಸ್ವಿ ಉಡಾವಣೆ, ದತ್ತಾಂಶ ನಷ್ಟ

Social Share

ಶ್ರೀಹರಿಕೋಟಾ,ಆ.7- ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿರುವ ಭೂ ನಿಗಾವಣೆ ಉಪಗ್ರಹ(ಇಒಎಸ್-02), ಸಣ್ಣ ಉಪಗ್ರಹ ವಾಹಕ ವಾಹನ(ಎಸ್‍ಎಸ್‍ಎಲ್‍ವಿ-ಡಿ1)ದಲ್ಲಿ ಇಂದು ಅಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಸಂಸ್ಥೆಯಿಂದ ಯಶಸ್ವಿಯಾಗಿ ಉಡಾವಣೆಯಾಗಿತ್ತು. ಆದರೆ ಕೊನೆಯ ಹಂತದಲ್ಲಿ ದತ್ತಾಂಶ ನಷ್ಟದ ಮೂಲಕ ಸಣ್ಣ ಉಪಗ್ರಹ ಉದ್ದೇಶ ವೈಫಲ್ಯ ಅನುಭವಿಸಿದೆ.

ಇಂದು ಬೆಳಗ್ಗೆ ಭಾರತೀಯ ಕಾಲಮಾನ 9.18ಕ್ಕೆ ಎಸ್‍ಎಸ್‍ಎಲ್ -ಡಿ1 ಉಡಾವಣೆಗೊಂಡು ಭೂ ಕಕ್ಷೆಗೆ ಸೇರುವಲ್ಲಿ ಗುರಿ ತಲುಪಿದೆ. ಸುಮಾರು 500 ಕೆಜಿ ತೂಕದ ಪ್ಲೇಲೋಡ್ಸ್ ಸಣ್ಣ, ಸೂಕ್ಷ್ಮ ನ್ಯಾನೋ ಉಪಗ್ರಹಗಳನ್ನು ಹೊತ್ತ ವಾಹನ 500 ಕಿ.ಮೀ ದೂರದ ಸಮತಲ ಕಕ್ಷೆಗೆ ಸೇರುವಲ್ಲಿ ಯಶಸ್ವಿಯಾಗಿದ್ದವು ಆದರೆ ಕೊನೆಯ ಯಂತ್ರ ದತ್ತಾಂಶ ವಿಫಲವಾಗಿದೆ.

ಭಾರತ ಸ್ವಾತಂತ್ರ್ಯ ಗಳಿಸಿ 75 ವರ್ಷವಾಗಿರುವ ಹಿನ್ನೆಲೆಯಲ್ಲಿ ಮಕ್ಕಳಿಂದಲೇ ಆಜಾದಿ ಸ್ಯಾಟ್ ಉಪಗ್ರಹವನ್ನು ತಯಾರಿಸಲಾಗಿತ್ತು. 75 ಸಮಗ್ರ ಪ್ಲೇಲೋಡ್‍ಗಳನ್ನು ಹೊಂದಿರುವ ಈ ಉಪಗ್ರಹ ತಯಾರಿಕೆಗೆ ಗ್ರಾಮೀಣ ಭಾಗದ 75 ಸರ್ಕಾರಿ ಶಾಲೆಯ 75 ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದರು.

ಈ ಕಾರ್ಯಾಚರಣೆಯಲ್ಲಿ ಸಹಭಾಗಿಯಾಗಿದ್ದ ತೆಲಂಗಾಣದ ಸೆಂಟ್ ಫ್ರಾನ್ಸಿಸ್ ಹೈಸ್ಕೂಲ್‍ನ ವಿದ್ಯಾರ್ಥಿನಿ ಶ್ರೇಯ, ನಮ್ಮ ಶಾಲೆಯಿಂದ ಮೂರು ಗುಂಪುಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಇದು ನನಗೆ ಹೆಮ್ಮೆಯ ಅವಕಾಶ. ಕಠಿಣ ಪರಿಶ್ರಮದಿಂದ ಕೆಲಸ ಮಾಡಿದ್ದೇವೆ ಎಂದಿದ್ದಾರೆ.

ಇಡೀ ಯೋಜನೆಯ ನಿರ್ವಹಣೆ ಮಾಡಿದ ಸ್ಪೇಸ್ ಕಿಡ್ಸ್ ನ ಸಂಸ್ಥಾಪಕ ಮತ್ತು ಸಿಇಒ ಡಾ.ಶ್ರೀಮತಿ ಕೇಸನ್ ಅವರು, ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಬಾಲಕಿಯರನ್ನು ಪ್ರೋತ್ಸಾಹಿಸಲು ಆದ್ಯತೆ ನೀಡಲಾಯಿತು. 2022ರ ಮಾರ್ಚ್ 14ರಂದು ಎಸ್‍ಎಸ್‍ಎಲ್‍ವಿಯನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ವೇಳೆ ಸಮಾಧಾನಕರ ಮತ್ತು ಯಶಸ್ಸಿನ ಮುನ್ಸೂಚನೆ ದೊರೆತಿದ್ದವು ಎಂದು ಹೇಳಿದ್ದಾರೆ.

ತೀವ್ರ ನಿಗಾವಣೆ ಮೂಲಕ ಎಸ್‍ಎಸ್1 ಸಿದ್ದಗೊಳಿಸಲಾಗಿದೆ. ಮೂರು ಹಂತಗಳ ಈ ಯಂತ್ರ ಹಲವು ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿತ್ತು. ಅನ್ವೇಷಣಾತ್ಮಕ ಸಲಕರಣೆಗಳು, ವಿಂಘಡಾತ್ಮಕ ವಿಭಾಗಗಳು , ಎಲೆಕ್ಟ್ರೋ ಮೆಕಾನಿಕಲ್ ಪರಿವರ್ತಕ, ಡಿಜಿಟಲ್ ನಿಯಂತ್ರಕ , ಹೊಂದಾಣಿಕೆಯ ಚಾಲನಾ ವ್ಯವಸ್ಥೆ ಸೇರಿದಂತೆ ಹಲವು ತಂತ್ರಜ್ಞಾನಗಳನ್ನು ಅಳವಡಿಸಲಾಗಿತ್ತು.

ಇಸ್ರೋದ ಮಾಜಿ ಡಾ.ಮಾಧು ನಾಯಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಎಲ್ಲ ಹಂತದಲ್ಲೂ ಪ್ರದರ್ಶನ ಸಾಮಾನ್ಯವಾಗಿತ್ತು. ಎರಡು ಉಪಗ್ರಹಗಳನ್ನು ಕಕ್ಷೆಗೆ ತೂರಿಸಲಾಗಿತ್ತು. ಆದರೆ ಉಪಗ್ರಹದ ಸಾಧನೆಗೆ ನಿರೀಕ್ಷೆಗಿಂತ ಕ್ಷೀಣ್ಯವಾಗಿದೆ. ಇದು ಅಸ್ಥಿರತೆಯನ್ನು ಸೂಚಿಸಿದೆ ಎಂದು ಹೇಳಿದ್ದಾರೆ.

Articles You Might Like

Share This Article