ಮತ್ತೊಂದು ಮೈಲಿಗಲ್ಲು ಸಾಧಿಸಲು ಇಸ್ರೋ ಸಿದ್ಧತೆ

Social Share

ಬೆಂಗಳೂರು, ಅ.29- ಈಗಾಗಲೇ ಹಲವು ಮೈಲಿಗಲ್ಲುಗಳನ್ನು ಸಾಧಿಸಿರುವ ಇಸ್ರೋ ಸಂಸ್ಥೆ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಮುಂದಿನ ವರ್ಷ ಭಾರಿ ತೂಕದ ಉಪಗ್ರಹವನ್ನು ನಭೋ ಮಂಡಲಕ್ಕೆ ರವಾನಿಸಲಿದೆ. ಅದಕ್ಕೆ ಪೂರ್ವಭಾವಿಯಾಗಿ ಇಂಜಿನ್‍ನ ಸಾಮಥ್ರ್ಯ ಪರೀಕ್ಷೆ ನಡೆಸಲಾಗಿದೆ.

ಇಂಗ್ಲೆಂಡ್‍ನ ಒನ್‍ವೆಬ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತು ನವವೈಮಾನಿಕ ಭಾರತೀಯ ಸಂಸ್ಥೆ (ಎನ್‍ಎಸ್‍ಐಎಲ್) ಜಂಟಿಯಾಗಿ ಮುಂದಿನ ವರ್ಷ ನಾಲ್ಕು ಟನ್ ತೂಕದ ಉಪಗ್ರಹವನ್ನು ಉಡಾವಣೆ ಮಾಡಲು ತಯಾರಿ ನಡೆಸಿವೆ.

ಎಲ್‍ವಿಎಂ3-ಎಂ3 ವಾಹನಕ್ಕೆ ಜೋಡಣೆಯಾಗಿರುವ ಸಿಇ-20 ಇಂಜಿನ್ ಹಾರಾಟದ ವೇಳೆ ತಡೆದುಕೊಳ್ಳಬಹುದಾದ ಉಷ್ಣಾಂಶ ಧಾರಣ ಸಾಮಥ್ರ್ಯದ ಬಗ್ಗೆ ಇಂದು ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋದ ಸಂಕೀರ್ಣದಲ್ಲಿ ಪರೀಕ್ಷೆ ನಡೆಸಲಾಯಿತು.

ಮಾಜಿ ಸಿಎಂ ಸೇರಿ ಮಹಾರಾಷ್ಟ್ರ ರಾಜಕೀಯ ಮುಖಂಡರ Z+ ಭದ್ರತೆ ಕಡಿತ

ಅಕ್ಟೋಬರ್ 23ರಂದು ಒನ್‍ವೆಬ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಇಸ್ರೋ ಉಪಗ್ರಹಗಳನ್ನು ಉಡಾವಣೆ ಮಾಡಿ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಟ್ಟು 72 ಉಪಗ್ರಹಗಳು ಕೆಳ ಹಂತದ ಭೂ ಕಕ್ಷೆಯಲ್ಲಿ ಸಕ್ರಿಯವಾಗಿವೆ.

ಎಲ್‍ವಿಎಂ3 ಉಡಾವಣೆ ಯಶಸ್ವಿಯಾದರೆ ಮತ್ತೊಂದು ಮೈಲಿಗಲ್ಲು ಸಾಧಿಸಿದಂತಾಗುತ್ತದೆ. ಇದರಿಂದ 2023ರ ವೇಳೆಗೆ ದೇಶದ ಗುಜರಾತ್‍ನಿಂದ ಅರುಣಾಚಲ ಪ್ರದೇಶದವರೆಗೂ, ಲಡಾಕ್‍ನಿಂದ ಕನ್ಯಾಕುಮಾರಿವರೆಗೂ ದುರ್ಗಮ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಸಂಪರ್ಕ ಜಾಲ ಸುಗಮವಾಗಲಿದೆ.

ಗರೀಬ್ ಕಲ್ಯಾಣ್ ಯೋಜನೆಗೆ ಬೇಕು 108 ಮಿಲಿಯನ್ ಟನ್ ಆಹಾರ

ಕೇಂದ್ರ ಬಾಹ್ಯಾಕಾಶ ಇಲಾಖೆಯ ಅೀಧಿನದಲ್ಲಿರುವ ಎನ್‍ಎಸ್‍ಐಎಲ್ ಸಂಸ್ಥೆ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಿ.ರಾಧಕೃಷ್ಣನ್ ಅವರು, ಒನ್‍ವೆಬ್ ಸಂಸ್ಥೆಯ ಪಾಲುದಾರಿಕೆಯಿಂದ ಸಾಮಥ್ರ್ಯ ವೃದ್ಧಿಯಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Articles You Might Like

Share This Article