ನಿಷ್ಕ್ರಿಯಗೊಂಡ ಉಪಗ್ರಹದ ಮರು ಪ್ರಯೋಗಕ್ಕೆ ಇಸ್ರೋ ಸಿದ್ಧತೆ

Social Share

ಬೆಂಗಳೂರು, ಮಾ 6 – ಭಾರತೀಯ ಬಾಹ್ಯಾ ಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ನಿಷ್ಕ್ರಿಯಗೊಂಡಿರುವ ಭೂಮಿಯ ವಾತಾವರಣ ಅಧ್ಯಯನ ಉಪಗ್ರಹವಾದ ಮೇಘಾ-ಟ್ರೋಪಿಕ್ಸ್-1 (ಎಂಟಿ 1) ಮತ್ತೆ ಮರು ಕಾರ್ಯ ಪ್ರಯೋಗಕ್ಕೆ ಸಿದ್ಧತೆ ನಡೆಸುತ್ತಿದೆ.

ಉಷ್ಣವಲಯದ ಹವಾಮಾನ ಅಧ್ಯಯನಕ್ಕಾಗಿ ಇಸ್ರೋ ಮತ್ತು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ ಸಿಎನ್‍ಇಎಸ್ ಜಂಟಿಯಾಗಿ ಎಂಟಿ 1 ಉಪಗ್ರಹವನ್ನು ಕಳೆದ 2011 ಅ. 12 ರಂದು ಉಡಾವಣೆ ಮಾಡಲಾಗಿತ್ತು. ಉಪಗ್ರಹದ ಕಾರ್ಯಾಚರಣೆಯ ಅವಧಿಯು ಮೂಲತಃ ಮೂರು ವರ್ಷಗಳಾಗಿದ್ದರೂ, ಉಪಗ್ರಹವು 2021 ರವರೆಗೆ ಪ್ರಾದೇಶಿಕ ಮತ್ತು ಜಾಗತಿಕ ಹವಾಮಾನ ಮೌಲ್ಯಯುತವಾದ ಡೇಟಾ ಸೇವೆಗಳನ್ನು ನೀಡುವುದನ್ನು ಮುಂದುವರೆಸಿತ್ತು ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಕೋಲ್ಕತ್ತಾದಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆ

ನಾಳೆ ಈ ಕಾರ್ಯಾಚರಣೆ ಆರಂಭವಾಗಲಿದ್ದು ಯಾವುದೇ ಅಪಾಯ ಆಗದಂತೆ ಆನ್-ಬೋರ್ಡ್ ಶಕ್ತಿಯ ಮೂಲಗಳನ್ನು ನಿಷ್ಕ್ರಿಯಗೊಳಿಸುವಿಕೆಗೂ ಸಹ ಶಿಫಾರಸು ಮಾಡಲಾಗಿದೆ.

ಸುಮಾರು 1,000 ಕಿಲೋಗ್ರಾಂಗಳಷ್ಟು ತೂಕವಿರುವ ಎಂಟಿ 1 ಉಪಗ್ರಹ 867 ಕಿಮೀ ಎತ್ತರದ ಕಕ್ಷೆಯಲ್ಲಿ 20 ಡಿಗ್ರಿ ಇಳಿಜಾರಿನಲ್ಲಿ 100 ವರ್ಷಗಳಿಗಿಂತ ಹೆಚ್ಚು ಇರುತ್ತದೆ.

ದೇಶದ ಹೆಮ್ಮೆ INS ವಿಕ್ರಾಂತ್‍ನಲ್ಲಿ ನೌಕಾಪಡೆ ಕಮಾಂಡರ್‌ಗಳ ಸಭೆ

ಸುಮಾರು 125 ಕೆಜಿ ಇಂಧನವು ಅದರ ಕಾರ್ಯಾಚರಣೆಯ ಅಂತ್ಯದಲ್ಲಿ ಬಳಕೆಯಾಗದೆ ಉಳಿದಿದೆ, ಇದು ಆಕಸ್ಮಿಕ ಸ್ಪೋಟದ ಅಪಾಯವನ್ನುಂಟುಮಾಡುತ್ತದೆ. ಪೆಸಿಫಿಕ್ ಮಹಾಸಾಗರದಲ್ಲಿ ಮತ್ತು ಜನವಸತಿ ಇಲ್ಲದ ಸ್ಥಳದಲ್ಲಿ ಮರು-ಪ್ರವೇಶವನ್ನು ಸಾಸಲು ಈ ಉಳಿಕೆ ಇಂಧನವು ಸಾಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ISRO, Prepares, Challenging, Experiment, Satellite, Re-Entry,

Articles You Might Like

Share This Article