ಫೆ.14ರಂದು ವರ್ಷದ ಮೊದಲ ಉಪಗ್ರಹ ಉಡಾವಣೆ ಇಸ್ರೋ ತಯಾರಿ

Social Share

ಬೆಂಗಳೂರು,ಫೆ.9- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ 2022ನೇ ಸಾಲಿನ ಮೊದಲ ಉಡಾವಣಾ ಕಾರ್ಯಾಚರಣೆಯನ್ನು ಫೆ.14 ರಂದು ಹಮ್ಮಿಕೊಂಡಿದೆ. ಪಿಎಸ್‍ಎಲ್‍ವಿ-ಸಿ52 ಭೂ ವೀಕ್ಷಣಾ ಉಪಗ್ರಹವನ್ನು (ಇಒಎಸ್-04) ಕಕ್ಷೆಯಲ್ಲಿ ಹಾರಿಸಲಾಗುತ್ತಿದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‍ಎಲ್ವಿ-ಸಿ52) ಸೋಮವಾರ ಸಂಜೆ 5:59 ಗಂಟೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡಾವಣೆಗೊಳ್ಳಲಿದೆ ಇಸ್ರೋ ಸಂಸ್ಥೆಯ ಬೆಂಗಳೂರು ಕೇಂದ್ರ ಕಚೇರಿಯ ಪ್ರಟಕಣೆಯಲ್ಲಿ ತಿಳಿಸಿದೆ.
ಪಿಎಸ್‍ಎಲ್‍ವಿ-ಸಿ52 1710 ಕೆಜಿ ತೂಕದ ಎರಡು ಸಣ್ಣ ಉಪಗ್ರಹಗಳನ್ನ ತನ್ನೊಂದಿಗೆ ತೆಗೆದುಕೊಂಡು ಹೋಗಲಿದೆ. ಇಎಸ್‍ಒ-04 ಅನ್ನು ಉಪಗ್ರಹ ಸೂರ್ಯನ ಸಿಂಕ್ರೊನಸ್ ಧ್ರುವೀಯ ಕಕ್ಷೆಯಲ್ಲಿ 529 ಕಿಮೀ ಅಂತರದಲ್ಲಿ ಸುತ್ತುವಂತೆ ವಿನ್ಯಾಸಗೊಳಿಸಲಾಗಿದೆ.
ಇಂಡಿಯನ್ ಇನ್ಸಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಟೆಕ್ನಾಲಜಿ (ಐಐಎಸ್‍ಟಿ)ನಿಂದ ಇನ್‍ಸ್ಪೆ ೈರ್‍ಸ್ಯಾಟ್-1 ಮತ್ತು ಬೌಲ್ಡನರ್‍ನ ಕೊಲೊರಾಡೋ ವಿಶ್ವವಿದ್ಯಾಲಯದ ವಾಯುಮಂಡಲ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಾಲಯದ ಸಹಯೋಗದೊಂದಿಗೆ ಇಸ್ರೋ ಸಂಸ್ಥೆ ಉಪಗ್ರಗಳನ್ನು ರೂಪಿಸಿದೆ.
ಭಾರತ-ಭೂತನ್ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಉಪಗ್ರಹಗಳಲ್ಲಿ ರಾಡಾರ್ ಇಮೇಜಿಂಗ್ ತಂತ್ರಜ್ಞಾನ ಅಳವಡಿಸಲಾಗಿದೆ.
ಇದರಿಂದ ಕೃಷಿ, ಅರಣ್ಯ, ತೋಟಗಳ ಮಣ್ಣಿನ ತೇವಾಂಶ, ಪ್ರವಾಹ ಮತ್ತು ಜಲವಿಜ್ಞಾನಕ್ಕೆ ಸಂಬಂಸಿದ ಗುಣಮಟ್ಟದ ಚಿತ್ರಗಳನ್ನು ಪಡೆಯಲು ಸಾಧ್ಯವಾಗಲಿದೆ. ಇನ್ಸಾಟ್-4ಬಿ ನಂತರ 21ನೇ ಭಾರತೀಯ ಜಿಯೋ ಉಪಗ್ರಹ ಇದಾಗಿದೆ ಎಂದು ಸಂಸ್ಥೆ ತಿಳಿಸಿದೆ.

Articles You Might Like

Share This Article