ವಿಶ್ವ ಶೂಟಿಂಗ್ ವಿಶ್ವಕಪ್‍, ಅರ್ಜುನ್‍ಗೆ ಚಿನ್ನದ ಪದಕ

Social Share

ಚಾಂಗ್‍ವೋನ್, ಜು. 11- ಭಾರತದ ಶೂಟರ್ ಅರ್ಜುನ್ ಬಾಬುಟಾ ಅವರು ಐಎಸ್‍ಎಸ್‍ಎಫ್ ವಿಶ್ವ ಶೂಟಿಂಗ್ ವಿಶ್ವಕಪ್‍ನ ಫೈನಲ್‍ನಲ್ಲಿ ಅಗ್ರಸ್ಥಾನಿಯಾಗುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

10 ಮೀಟರ್ ಏರ್ ರೈಫಲ್‍ನ ಪ್ರಶಸ್ತಿ ಸುತ್ತಿನಲ್ಲಿ ಭಾರತದ ಅರ್ಜುನ್‍ಗೆ ಟೊಕಿಯೋ ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ವಿಜೇತ ಶೂಟರ್ ಲುಕಾಸ್ ಕೊಜೆನ್‍ಸ್ಕೈ ಅವರು ತೀವ್ರ ಪೈಪೋಟಿ ನೀಡಿದರೂ ಕೂಡ 261.1 ಪಾಯಿಂಟ್ಸ್‍ಗಳನ್ನು ಕಲೆ ಹಾಕುವ ಮೂಲಕ ಹಿರಿಯರ ವಿಭಾಗದಲ್ಲಿ ತಮ್ಮ ಚೊಚ್ಚಲ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡು ಸಂಭ್ರಮಿಸಿದರು.

23 ವರ್ಷದ ಪಂಜಾಬ್‍ನ ಶೂಟರ್ ಅರ್ಜುನ್ ಅವರು 2016ರಲ್ಲಿ ಗಬಾಲಾದಲ್ಲಿ ನಡೆದ ಕಿರಿಯರ ವಿಶ್ವ ಶೂಟಿಂಗ್‍ನಲ್ಲೂ ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡು ದೇಶದ ಕೀರ್ತಿ ಹೆಚ್ಚಿಸಿದ್ದರು.

10 ಮೀಟರ್ ಏರ್ ರೈಫಲ್‍ನ ಸುತ್ತಿನಲ್ಲಿ ಭಾರತದ ಪಾರ್ತ್ ಮಕ್‍ಹಿಜಾ ಅವರು 258.1 ಅಂಕಗಳನ್ನು ಕಲೆ ಹಾಕುವ ಮೂಲಕ 4ನೆ ಸ್ಥಾನವನ್ನು ತಮ್ಮದಾಗಿಸಿಕಂಒಡರೆ, ಲೂಕಾಸ್ ಬೆಳ್ಳಿ ಪದಕ ಹಾಗೂ ಇಸ್ರೇಲ್‍ನ ಸರ್ಜೆಯ್ ರಿಚ್ಟರ್ ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

Articles You Might Like

Share This Article