ನವದೆಹಲಿ,ಫೆ.14- ತೆರಿಗೆ ವಂಚನೆ ಆರೋಪದಡಿ ದೆಹಲಿ ಮತ್ತು ಮುಂಬೈನಲ್ಲಿರುವ ಕಚೇರಿಗಳ ಮೇಲೆ ದಾಳಿ ಮಾಡುವ ಮೂಲಕ ಆದಾಯ ತೆರಿಗೆ ಇಲಾಖೆಯು ಬಿಬಿಸಿಗೆ ಶಾಕ್ ನೀಡಿದೆ.ಗುಜರಾತ್ ಗಲಭೆ ಮತ್ತು ಭಾರತದ ಬಗೆಗಿನ ಸಾಕ್ಷಚಿತ್ರದ ಎರಡನೇ ಭಾಗವನ್ನು ಪ್ರಸಾರ ಮಾಡಿದ ವಾರಗಳ ಬೆನ್ನಲ್ಲೇ ಈ ದಾಳಿ ನಡೆದಿರುವುದು ಅಚ್ಚರಿ ಮೂಡಿಸಿದೆ.
ಇಲಾಖೆಯು ಬಿಬಿಸಿಯ ವ್ಯವಹಾರ ದಾಖಲೆಗಳನ್ನು ಮತ್ತು ಭಾರತಕ್ಕೆ ಸಂಬಂಸಿದ ದಾಖಲೆಗಳನ್ನು ತನಿಖೆಗೆ ಒಳಪಡಿಸಿದೆ.ಐಟಿಯು ಕಂಪನಿಯ ಕಚೇರಿಗಳ ಮೇಲೆ ಮಾತ್ರ ದಾಳಿ ನಡೆಸಿದ್ದು, ನಿರ್ದೇಶಕರ ಮತ್ತು ಪ್ರವರ್ತಕರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿಲ್ಲ.
ಗುಜರಾತ್ ಗಲಭೆ ಸಾಕ್ಷ್ಯ ಚಿತ್ರ ಪ್ರದರ್ಶನ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ದೇಶದ ಹಲವೆಡೆ ಸಾಕ್ಷ್ಯ ಚಿತ್ರದ ಬಗ್ಗೆ ಪರ ವಿರೋಧ ಪ್ರತಿಭಟನೆಗಳು ನಡೆದಿದ್ದವು. ಈ ಬೆನ್ನಲ್ಲೆ ಕಾನೂನು ಸಮರ ಕೂಡಾ ಮುಂದುವರೆದಿದೆ. ಇದೀಗ ಆದಾಯ ಮತ್ತು ತೆರಿಗೆ ಇಲಾಖೆ ಬಿಬಿಸಿ ಕಚೇರಿಗಳ ಮೇಲೆ ದಾಳಿ ನಡೆಸುವ ಮೂಲಕ ಬಿಗ್ ಶಾಕ್ ನೀಡಿದೆ.
#ITRaid, #BBC, #DelhiOffice,